ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜೂನ್ 2020
ಮಳೆ ನೆಪ ಮಾಡಿ ಬಡವರಿಗೆ ಕೆಲಸ ನೀಡದಿದ್ದರೆ ಅಂತಹ ತಾಂತ್ರಿಕ ಸಹಾಯಕರ ವಿರುದ್ಧ ಕಠಿಣಕ್ರಮ ಜರುಗಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ಕುವೆಂಪು ರಂಗಮಂದಿರದಲ್ಲಿ ನಡೆದ ಅಂತರ್ಜಲ ಕಾಮಗಾರಿ ಹಾಗೂ ಮಹಾತ್ಮಗಾಂಧಿ ನರೇಗ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಂದಿನ ತಿಂಗಳಲ್ಲಿ ಕೆಳಹಂತದ ಪಿಡಿಒಗಳು ನರೇಗ ಕೆಲಸದಲ್ಲಿ ಪ್ರಗತಿ ಸಾಧಿಸದಿದ್ದರೆ ಕ್ರಮ ನಿಶ್ಚಿತ. ಮಳೆಗಾಲದ ನೆಪದಲ್ಲಿ ಸಾಧನೆ ಕಡಿಮೆ ಮಾಡಬಾರದು. ಏನೇನು ಸಾಧ್ಯವೋ ಹುಡುಕಿ ಕೆಲಸ ನೀಡುವಂತೆ ಸೂಚಿಸಿದರು.
ಯಾವ ಬಡವನು ಕೆಲಸವಿಲ್ಲದೆ ಪರದಾಡಬಾರದು. ಇವತ್ತು ಕಾಮಗಾರಿ ಏನೇನು ತೆಗೆದುಕೊಳ್ಳಬೇಕೋ ಆ ಕಾಮಗಾರಿಗಳನ್ನ ತೆಗೆದುಕೊಂಡಿದ್ದೀರಿ. ಹಾಗೆ ಮುಂದಿನ ತಿಂಗಳಲ್ಲಿ ಏನು ಕಾಮಗಾರಿ ತೆಗೆದುಕೊಳ್ಳಬೇಕೋ ಇವತ್ತೇ ಪಟ್ಟಿಮಾಡಿ ಸಿಇಒ ಜೊತೆ ಚರ್ಚಿಸಿ ನಿಮ್ಮ ಕೈಯಲ್ಲಿ ಆಗುವ ಕೆಲಸವನ್ನ ನೀವೆ ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕ ಗುರಿ ನಿಗದಿ ಪಡಿಸುವುದಿಲ್ಲ ಎಂದರು.

ನರೇಗಾದಲ್ಲಿ 1 ಲಕ್ಷ ಕೋಟಿ ಹಣ
ನರೇಗಾದಲ್ಲಿ ಒಟ್ಟು 1 ಲಕ್ಷ ಕೋಟಿ ಹಣ ಬಿಡುಗಡೆ ಆಗಿದೆ. ಮೆಟಿರಿಯಲ್, ಲೇಬರ್ ಹಣ ಬಿಡುಗಡೆ ಆಗಿದೆ. ಈ ಬಾರಿ ಬಾಕಿ ಯಾವುದೂ ಉಳಿದಿಲ್ಲ. ನಿಮ್ಮ ಹಣ ನಿಮ್ಮ ಖಾತೆಗೆ ಬರುತ್ತಿದೆ. ಹಾಗಾಗಿ ಕಾಮಗಾರಿಗಳ ಬಗ್ಗೆ ನೀವೇ ಗುರಿ ಪಡಿಸಿಕೊಳ್ಳಿ. ಈ ಬಾರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಯಲ್ಲಿ ೧೦ ಗ್ರಾಮ ಪಂಚಾಯತ್ಗಳ ಕಾಮಗಾರಿ ಮೆಚ್ಚಕೊಳ್ಳಬಹುದಾಗಿದೆ. ಆದರೆ ಉಳಿದ ಗ್ರಾಮ ಪಂಚಾಯಿತಿಗಳಲ್ಲಿನ ಕೆಲಸ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಇತರೆ ಜಿಲ್ಲೆಗಳಿಗೆ ನಾವೇ ಮಾದರಿಯಾಗಬೇಕು
ಅಂತರ್ಜಲ ಮತ್ತು ನರೇಗ ಯೋಜನೆಯಲ್ಲಿ ಶಿವಮೊಗ್ಗ ಪೈಲೆಟ್ ಪ್ರಾಜೆಕ್ಟ್ ಆಗಿದ್ದು ಶಿವಮೊಗ್ಗ ಇತರೆ ಜಿಲ್ಲೆಗಳಿಗೆ ರಾಜ್ಯದಲ್ಲಿ ಮಾದರಿಯಾಗಬೇಕು. ಹಾಗಾಗಿ ಮುಂದಿನ ದಿನಗಳಲ್ಲಿ ಗುರಿಯನ್ನ ನೀವೆ ನಿಗದಿ ಪಡಿಸಿಕೊಳ್ಳಿ. ಪ್ರತಿ ತಿಂಗಳು ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುವುದು ಎಂದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ್ಕುಮಾರ್, ಜಿಪಂ ಸಿಇಓ ಎಂ.ಎಲ್. ವೈಶಾಲಿ ಮೊದಲಾದವರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200