ಶಿವಮೊಗ್ಗದಲ್ಲಿ ಬಸ್‌ ಹತ್ತಿ ಟಿಕೆಟ್‌ ಮಾಡಿಸಲು ಜೇಬಿಗೆ ಕೈ ಹಾಕಿದ ವ್ಯಕ್ತಿಗೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 MARCH 2024

SHIMOGA : ಕೆಎಸ್‌ಆರ್‌ಟಿಸಿ ಬಸ್‌ ಹತ್ತುವಾಗ ವ್ಯಕ್ತಿಯೊಬ್ಬರ ಜೇಬಿನಿಂದ ಹಣ ಕಳ್ಳತನ ಮಾಡಲಾಗಿದೆ. ಬಸ್ಸಿನಲ್ಲಿ ಟಿಕೆಟ್‌ ಖರೀದಿಗೆ ಹಣಕ್ಕಾಗಿ ಜೇಬಿಗೆ ಕೈ ಹಾಕಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಭದ್ರಾವತಿ ಮಾಳೇನಹಳ್ಳಿಯ ಕಾಂತರಾಜ್‌ ಶಾಸ್ತ್ರಿ ಎಂಬುವವರು 16,500 ರೂ. ಕಳೆದುಕೊಂಡಿದ್ದಾರೆ. ಶಿವಮೊಗ್ಗದ ಟಿವಿ ಶೋ ರೂಂ ಒಂದರಲ್ಲಿ ಟಿವಿ ಖರೀದಿಗೆ ಕಾಂತರಾಜ್‌ ಶಾಸ್ತ್ರಿ ಆಗಮಿಸಿದ್ದರು. ಆದರೆ ಟಿವಿ ಖರೀದಿಸಲಾಗದೆ, ತರೀಕೆರೆಯ ಸಂಬಂಧಿಯ ಮನೆಗೆ ತೆರಳಲು ಶಿವಮೊಗ್ಗ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದರು. ಈ ವೇಳೆ ಹಣ ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

 ಇದನ್ನೂ ಓದಿ ಕೋಟೆ ಮಾರಿಕಾಂಬ ಜಾತ್ರೆ ಕುರಿತು ನಿಮಗೆಷ್ಟು ಗೊತ್ತು? ಇಲ್ಲಿದೆ 10 ಪ್ರಮುಖ ಪಾಯಿಂಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment