ಶಿವಮೊಗ್ಗ: ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಪ್ ಗೆಲ್ಲಲಿ ಎಂದು ಶಿವಮೊಗ್ಗದಲ್ಲಿ ಪೂಜೆ, ರಕ್ತದಾನ, ಹಾಲಿನ ಅಭಿಷೇಕ ನಡೆಯುತ್ತಿದೆ. ಇಂದು ಪಂದ್ಯಾವಳಿ ವೀಕ್ಷಣೆಗೆ ವಿವಿಧೆಡೆ ಬೃಹತ್ ಪರದೆಗಳನ್ನು ಹಾಕುವ ಸಾಧ್ಯತೆ ಇದೆ.
ಹೊಳೆಬೆನವಳ್ಳಿಯಲ್ಲಿ ರಕ್ತದಾನ ಶಿಬಿರ
ಆರ್‌ಸಿಬಿ ಗೆಲುವಿಗಾಗಿ ಪ್ರಾರ್ಥಿಸಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಕಾಲೇಜು, ಮೆಗ್ಗಾನ್ ಆಸ್ಪತ್ರೆ ಮತ್ತು ಹೊಳೆಬೆನವಳ್ಳಿ ಯುವಕರು ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆಯಿಂದ 25 ಯುನಿಟ್‌ಗಿಂತಲು ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಟೊಯೋಟ ಸಂಸ್ಥೆಯ ಡೆಮೋ ಕಾರುಗಳ ಮಾರಾಟ, ಎಕ್ಸ್‌ಚೇಂಜ್ ಮೇಳ, ಯಾವಾಗ? ಎಲ್ಲಿದೆ?
ಕಟೌಟ್‌ಗೆ ಹಾಲಿನ ಅಭಿಷೇಕ
ಶಿವಮೊಗ್ಗದ ಕುಂಬಾಗುಂಡಿ ಯುವಕರ ತಂಡದ ವತಿಯಿಂದ ಆರ್‌ಸಿಬಿ ಗೆಲುವಿಗಾಗಿ ಹಾರೈಸಿ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲಾಯಿತು. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ನಟರಾದ ದರ್ಶನ್ ಮತ್ತು ಸುದೀಪ್ ಇರುವ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.
ಇದನ್ನೂ ಓದಿ » ಕಾರು, ಲಾರಿ ಮುಖಾಮುಖಿ ಡಿಕ್ಕಿ, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಕನ್ನಡದ ಧ್ವಜ ಹಿಡಿದು ಡಾನ್ಸ್
ಆರ್‌ಸಿಬಿ ತಂಡ ಕಪ್ ಗೆಲ್ಲಲಿ ಎಂದು ಹಾರೈಸಿ ಶಿವಮೊಗ್ಗದಲ್ಲಿ ಚಿಣ್ಣರು ಕನ್ನಡದ ಧ್ವಜ ಹಿಡಿದು ನೃತ್ಯ ಮಾಡಿದ್ದಾರೆ. ಸ್ಟೈಲ್ ಡಾನ್ಸ್ ಗ್ರೂಪ್‌ನ ಮಕ್ಕಳು ಆರ್‌ಸಿಬಿ ಪರವಾಗಿ ಘೋಷಣೆ ಕೂಗುತ್ತ, ನಾಡ ಧ್ವಜ ಹಿಡಿದು ಹುರಿದುಂಬಿಸಿದರು.

ಶಿವಮೊಗ್ಗದಲ್ಲಿ ವಿಶೇಷ ಪೂಜೆ
ಆರ್‌ಸಿಬಿ ತಂಡ ಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಷ್ಟ್ರಭಕ್ತರ ಬಳಗದ ವತಿಯಿಂದ ಗಣಪತಿ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಯಿತು. ನಾವೆಲ್ಲಾ ಹೇಳೋದು ಒಂದೇ ಈ ಸಲ ಕಪ್ ನಮ್ದೆ ಎಂದು ರಾಷ್ಟ್ರಭಕ್ತರ ಬಳಗದ ಸದಸ್ಯರು ಘೋಷಣೆ ಕೂಗಿದರು.
ವಿವಿಧೆಡೆ ಬೃಹತ್ ಪರದೆ
ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯ ವೀಕ್ಷಣೆಗೆ ಶಿವಮೊಗ್ಗ ನಗರದ ವಿವಿಧೆಡೆ ಬೃಹತ್ ಪರದೆಗಳನ್ನು ಅಳವಡಿಸಲು ಯೋಜಿಸಲಾಗಿದೆ. ಇನ್ನು, ನಗರದ ಪ್ರಮುಖ ಕ್ಲಬ್‌ಗಳು, ಹೊಟೇಲ್, ಬಾರ್‌ಗಳಲ್ಲು ಕೂಡ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಮತ್ತೊಂದೆಡೆ ಹೊಟೇಲ್, ಚಾಟ್ಸ್ ಸ್ಟಾಲ್‌ಗಳಲ್ಲಿ ಆರ್‌ಸಿಬಿ ಗೆದ್ದರೆ ಆಫರ್‌ಗಳನ್ನು ನೀಡಲು ಯೋಜಿಸಲಾಗಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200