ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | POWER CUT | 19 ಮೇ 2022
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆ ಅಂತಹ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತ ಮಾಡಲಾಗಿದೆ.
ಮಳೆ ನೀರು ಇಳಿಕೆಯಾದ ತಕ್ಷಣ ಅಂತಹ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ವೀರೇಂದ್ರ ಅವರು ಮನವಿ ಮಾಡಿದ್ದಾರೆ.
ಮಳೆ ನೀರು ನಿಂತಿರುವ ಕಡೆಗಳಲ್ಲಿ ಸಾರ್ವಜನಿಕರು ವಿದ್ಯುತ್ ಕಂಬ ಅಥವಾ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಯುಜಿ ವಿತರಣಾ ಘಟಕ ಅಥವಾ ಬಾಕ್ಸ್ ಹತ್ತಿರ ತೆರಳಬಾರದು. ವಿದ್ಯುತ್ ಉಪಕರಣಗಳಿಂದ ಆದಷ್ಟು ದೂರವಿದ್ದರೆ ಅನಾಹುತ ಸಂಭವಿಸುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.
ಎಲ್ಲೆಲ್ಲಿ ವಿದ್ಯತ್ ಕಡಿತವಾಗಿದೆ?
ಶಿವಮೊಗ್ಗ ನಗರದ 14 ಕಡೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಶಾಂತಮ್ಮ ಲೇಔಟ್, ವಿದ್ಯಾನಗರ ವಾರ್ಡ್ 10, 11 ಮತ್ತು 12, ಬೈಪಾಸ್ ರಸ್ತೆಯಲ್ಲಿ ನಿರ್ಸಗ ಲೇಔಟ್ ಮುಂಭಾಗದ ಬಡಾವಣೆ, ದೇವಂಗಿ ರತ್ನಾಕರ ಲೇಔಟ್, ತರಳಬಾಳು ಗುರು ಭವನ, ತ್ಯಾವರೆ ಚಟ್ನಹಳ್ಳಿ ಐಪಿ ಟಿಸಿ ಏರಿಯಾ, ಹಳೆ ಮಂಡ್ಲಿ ಭಾಗ, ಕೆ.ಆರ್.ಪುರಂ, ತ್ಯಾವರೆಚಟ್ನಹಳ್ಳಿ, ಬಾಳೆಗುಂಡಿ ಸದನ, RML ನಗರ ಸಭಾ ಭವನ ರಸ್ತೆ, RML ನಗರ ಅಪ್ನಾ ಬಜಾರ್, RML ನಗರ 7,8,9,10,19ನೇ ಅಡ್ಡರಸ್ತೆ, ಪುರಲೆ, ವೆಂಕಟೇಶನಗರದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.
ಇದನ್ನೂ ಓದಿ – BREAKING NEWS | ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ಮತ್ತೊಂದು ದಿನ ರಜೆ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422