NEWS HIGHLIGHTS
ಶಿವಮೊಗ್ಗ: ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಜೂನ್ 9ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?
ಆಲ್ಕೊಳ, ಎಸ್.ಎಲ್.ವಿ ಬಡಾವಣೆ, ಗಜಾನನ ಲೇಔಟ್, ಐಶ್ವರ್ಯ ಬಡಾವಣೆ, ಜೆ.ಹೆಚ್.ಪಟೇಲ್ ಬಡಾವಣೆ ಎ, ಬಿ, ಸಿ, ಡಿ, ಇ, ಎಫ್ ಬ್ಲಾಕ್, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಬಡಾವಣೆ, ಆದರ್ಶ ನಗರ, ಸಹ್ಯಾದ್ರಿನಗರ, ಸೋಮಿನಕೊಪ್ಪ, ವಿಜಯಲಕ್ಷ್ಮಿ ಲೇಔಟ್, ಸೋಮನಾಥ ಬಡಾವಣೆ, ನಿಸರ್ಗ ಲೇಔಟ್, ಹೊಂಗಿರಣ ಬಡಾವಣೆ ಹಾಗೂ ಸೋಮಿನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
