ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 DECEMBER 2022
ಶಿವಮೊಗ್ಗ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (pragya-singh) ಅವರು ಶಿವಮೊಗ್ಗದಲ್ಲಿ ನಡೆಯುತ್ತಿರುವ ಹಿಂದೂ ಜಾಗರಣ ವೇದಿಕೆಯ 3ನೇ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಭಾಷಣ ಮಾಡಿದರು. ಅವರ ಭಾಷಣದ ಪ್ರಮುಖ 10 ಪಾಯಿಂಟ್ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನೆಲ್ಲ ಹೇಳಿದರು ಪ್ರಜ್ಞಾ ಸಿಂಗ್ ಠಾಕೂರ್?
1 ಜನ್ಮಭೂಮಿ ನಮಗೆ ಸ್ವರ್ಗಕ್ಕಿಂತಲು ಮಿಗಿಲು. ಇದರ ಋಣ ತೀರಿಸದೆ ನಾವು ಸುಮ್ಮನೆ ಕೂರುವಂತಿಲ್ಲ. ಸ್ವಾತಂತ್ರ್ಯದ ಬಳಿಕವು ನಾವುಗಳು ಪ್ರಾಣ ಅರ್ಪಣೆ ಮಾಡುತ್ತಿದ್ದೇವೆ. ಸತ್ಯ, ಧರ್ಮಕ್ಕಾಗಿ ನಮಗೆ ಪ್ರಾಣ ಅರ್ಪಣೆಯು ಗೊತ್ತಿದೆ. ಬಲಿ ಕೊಡಲು ಕೂಡ ತಿಳಿದಿದೆ. ದೇಶ, ಮಾತೃ ಧರ್ಮಕ್ಕೆ ಧಕ್ಕೆಯಾಗುವ ಪರಿಸ್ಥಿತಿ ಎದುರಾದರೆ ನಾವು ಹೇಡಿಗಳಂತೆ ಮನೆಯಲ್ಲಿ ಕೂರುವುದಿಲ್ಲ. (pragya-singh) 2 ಸ್ವಾತಂತ್ರ್ಯದ ಬಳಿಕವು ಹಲವರು ಜನ್ಮಭೂಮಿಗಾಗಿ, ಧರ್ಮಕ್ಕಾಗಿ ಪ್ರಾಣ ಅರ್ಪಣೆ ಮಾಡಿದ್ದಾರೆ. ಹಿಂದೂಗಳ ಕುರಿತು ಸಾಧ್ವಿ ಪ್ರಜ್ಞಾ ಸಿಂಗ್ ಒಬ್ಬರೆ ಸಂಸತ್ತಿನಲ್ಲಿ ಧ್ವನಿ ಎತ್ತುವುದೇಕೆ ಎಂದು ಪ್ರಶ್ನಿಸುತ್ತಾರೆ. ನಾವು ಸಂಸದರಾಗಿರುವುದೆ ಹಿಂದುಗಳ ರಕ್ಷಣೆಗಾಗಿ. ಸಂಸದರಾಗದೆ ಇದ್ದ ಸಂದರ್ಭದಲ್ಲಿಯು ಜೈಲಿಗೆ ಹೋಗಿ, ಕಷ್ಟ ಅನುಭವಿಸಿದ್ದೇನೆ. ಕೊನೆಯುಸಿರು ಇರುವ ತನಕವು ಹಿಂದು ಧರ್ಮದ ಪರವಾಗಿಯೇ ಮಾತನಾಡುತ್ತೇನೆ. (pragya-singh)
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಕುಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ಪ್ಲಾನ್, ಹಳ್ಳಿಗಳನ್ನು ಜನರೆ ಸೂಚಿಸಬಹುದು
4 ಇಲ್ಲಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಈಗ ಹಿಂದೂಗಳ ನೆನಪಾಗಿದೆ. ಅವರ ಮತ್ತೊಬ್ಬ ನಾಯಕನಿಗೆ ಈಗಷ್ಟೆ ಹಿಂದು ಧರ್ವ ಅರ್ಥವಾಗುತ್ತಿದೆ. ಈಗ ತಾವುಗಳು ಹಿಂದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಾವುಗಳು ಹುಟ್ಟಿನಿಂದಲೆ ಹಿಂದೂ ಆಗಿದ್ದೇವೆ. ಅವರಂತೆ ಏಕಾಏಕಿ ಹಿಂದೂ ಆದವರಲ್ಲ. ಇನ್ನಾದರು ಕಾಂಗ್ರೆಸ್ ನಾಯಕರು ಹಿಂದೂಗಳ ಜೊತೆಗೆ ಸಮರ ನಡೆಸುವುದನ್ನು ನಿಲ್ಲಿಸಲಿ. 5 ಗೋದ್ರಾದಲ್ಲಿ ಹಿಂದೂಗಳ ಹತ್ಯೆ ಮಾಡಲಾಯಿತು. ಆನಂತರ ಹಲವರ ಕೊಲೆಗಳಾದವು. ನರೇಂದ್ರ ಮೋದಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಅವಮಾನ ಮಾಡಲಾಯಿತು. ಅಮೆರಿಕಾ ವೀಸಾ ನಿರಾಕರಿಸಿತು. ಇದೆಲ್ಲವನ್ನು ಎದುರಿಸಿದ ನರೇಂದ್ರ ಮೋದಿ ಅವರು ಪ್ರಧಾನಿಯಾದರು. ಈಗ ಅಮೆರಿಕಾ ಮೋದಿ ಅವರ ಜೊತೆ ಸ್ನೇಹ ಬೆಳೆಸುತ್ತಿದೆ. ಭಾರತ ಈಗ ವಿಶ್ವಕ್ಕೆ ದಾನಿಯಾಗಿದೆ. ಯುದ್ದ ಭೂಮಿಯಲ್ಲಿ ಯಾರೆ ಭಾರತದ ಧ್ವಜ ಹಿಡಿದರು ಅವರು ಸುರಕ್ಷಿತವಾಗುತ್ತಿದ್ದಾರೆ. 6 ಅತಿಥಿ ದೇವೋಭವ ಅನ್ನುವುದು ಭಾರತೀಯ ಸಂಸ್ಕೃತಿಯಾಗಿದೆ. ಆದರೆ ಈಗ ಅದುವೆ ಭಾರತೀಯರಿಗೆ ಸಂಕಷ್ಟ ತಂದೊಡ್ಡಿದೆ. ಆದರೆ ನಾವು ಸಂಸ್ಕೃತಿಯನ್ನು ಬಿಡುವುದಿಲ್ಲ. ಈಗಲು ನಾವು ಅತಿಥಿ ದೇವೋಭವ ಅನ್ನುತ್ತೇವೆ. ಒಂದು ವೇಳೆ ಅತಿಥಿ ನಮ್ಮ ಮನೆಯ ಮಾಲೀಕನಾಗಲು ಯತ್ನಿಸಿದರೆ ಅದಕ್ಕೆ ಉತ್ತರ ಕೊಡಲು ನಮಗೆ ಬರುತ್ತದೆ. ಹಾಗಾಗಿಯೇ ಹಿಂದೂ ಪದಕ್ಕೆ ಅಪಮಾನ ಮಾಡುವ, ಹಿಂದೂಗಳಿಗೆ ಅಗೌರವ ತೋರುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಯಾಕೆಂದರೆ ಹಿಂದೂ ಜಾಗೃತವಾಗಿದ್ದಾನೆ. (pragya-singh) 7 ಹಿಂದೂ ಉಗ್ರವಾದ, ಹಿಂದೂ ನೀಚ ಎಂದು ಹೇಳುವವರಿದ್ದಾರೆ. ಒಂದು ವೇಳೆ ಹಿಂದೂ ಉಗ್ರವಾದಿಯೇ ಆಗಿದ್ದರೆ ಅನ್ಯ ಧರ್ಮಗಳು ಇವತ್ತು ಇಲ್ಲಿರುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದ ನಾಯಕನೊಬ್ಬ ಭಾರತದಲ್ಲಿ ಈಗ ಉಳಿಯಲು ಯೋಗ್ಯ ವಾತಾವರಣವಿಲ್ಲ ಎಂದು ಹೇಳಿದ್ದಾರೆ. ಅವರು ಇಲ್ಲಿಯೇ ಉಳಿದುಕೊಳ್ಳಲಿ ಎಂದು ಯಾರೂ ಒತ್ತಾಯ ಮಾಡುತ್ತಿಲ್ಲ. ದೇಶದಿಂದ ಹೊರ ಹೋಗಲು ಸಿದ್ಧವಿದ್ದರೆ ಹೋಗಲಿ. ಇಲ್ಲವಾದಲ್ಲಿ ಅಂತಹವರನ್ನು ದೇಶದಿಂದ ಹೊರಗೆ ಕಳುಹಿಸುವುದು ನಮಗೆ ಗೊತ್ತಿದೆ. 8 ನಮ್ಮಲ್ಲಿ ಪ್ರೇಮಕ್ಕೆ ವಿಶೇಷ ಸ್ಥಾನವಿದೆ. ಸನ್ಯಾನಿಸಿನಿಯಾಗಿ ತಾನು ದೇವರನ್ನು ಪ್ರೇಮಿಸುತ್ತೇನೆ. ದೇವರ ಸೃಷ್ಟಿಯನ್ನು ಪ್ರೇಮಿಸುತ್ತೇನೆ. ಆದರೆ ಪ್ರೇಮದ ಹೆಸರಿನಲ್ಲಿ ಅನ್ಯಾಯ, ಅತ್ಯಾಚಾರ ಎಸಗುವವರನ್ನು ನಿರ್ನಾಮ ಮಾಡಬೇಕು ಎಂದು ಪ್ರಾರ್ಥಿಸುತ್ತೇನೆ. ಯಾಕೆಂದರೆ ಇದ್ಯಾವುದು ಪ್ರೇಮದ ಪರಿಭಾಷೆಯಲ್ಲಿಲ್ಲ. ಕೆಲವರು ಏನೇನು ಮಾಡಲಾಗದವರು ಪ್ರೇಮದ ಹೆಸರಿನಲ್ಲಿ ಜಿಹಾದ್ ಮಾಡಲು ಆರಂಭಿಸಿದ್ದಾರೆ. ಲವ್ ಜಿಹಾದ್ ಮಾಡುವವರಿಗೆ ಅದೆ ರೀತಿಯ ಉತ್ತರ ನೀಡಬೇಕು. ನಮ್ಮ ಹೆಣ್ಮಕ್ಕಳನ್ನು ಜಾಗೃತಗೊಳಿಸಬೇಕು. ನಾವು ಕೂಡ ತರಕಾರಿ ಕತ್ತರಿಸುವ ಚಾಕುಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕು ಎಲ್ಲರಿಗು ಇದೆ. 9 ಹೆಣ್ಮಕ್ಕಳನ್ನು ನಡೆದಾಡುವ ಆಟಂ ಬಾಂಬ್ ಆಗಿ ರೂಪಿಸಬೇಕು. ಯಾರಾದರು ಅವರ ಮರ್ಯಾದೆಗೆ ಧಕ್ಕೆ ತರಲು ಮುಂದಾದರೆ ತಕ್ಕ ಉತ್ತರ ನೀಡಲು ಸಿದ್ದವಾಗಿರಬೇಕು. ನಾನು ಓದುವಾಗ ನನ್ನ ಪಟ್ಟಣದಲ್ಲಿ ಗೂಂಡಾಗಳಿಗೆ ಎಚ್ಚರಿಕೆ ನೀಡಿದ್ದೆ. ಯಾವುದೆ ಹುಡುಗಿಗೆ ಯಾರಾದರು ಚುಡಾಯಿಸಿದರೆ ಅದು ತನ್ನನ್ನೆ ಚುಡಾಯಿಸಿದಂತಾಗಲಿದೆ ಎಂದು ಎಚ್ಚರಿಸಿದ್ದೆ. ಹಾಗಾಗಿ ನನ್ನ ಪಟ್ಟಣದಲ್ಲಿ ಈಗಲು ಹುಡುಗಿಯರನ್ನು ಯಾರು ಚೇಡಿಸುವುದಿಲ್ಲ. ಈ ರೀತಿ ಹೆಣ್ಮಕ್ಕಳನ್ನು ಬೆಳೆಸಿದರೆ ಲವ್ ಜಿಹಾದ್ ವಿರುದ್ಧ ನಮ್ಮ ನಾರಿ ಶಕ್ತಿಯೆ ಉತ್ತರ ನೀಡಲಿದೆ. 10 ನಮ್ಮ ದೇಶದ, ಧರ್ಮದ ರಕ್ಷಣೆಗೆ ಸದಾ ಸಿದ್ಧವಾಗರಬೇಕಿದೆ. ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಅವಶ್ಯತೆ ಎನಿಸಿದರೆ ಬಂದೂಕಿನ ಲೈಸೆನ್ಸ್ ಕೂಡ ಪಡೆದುಕೊಳ್ಳಿ. ಯಾರಾದರು ಸಮಸ್ಯೆ ಮಾಡಿದರೆ ಪ್ರತ್ಯುತ್ತರ ನೀಡಬೇಕು. 11 ಸಿಎಎ ಜಾರಿಗೊಳಿಸಿದಾಗ ವಿರೋಧ ವ್ಯಕ್ತವಾಗಬಾರದಿತ್ತು. ಆದರೆ ದೆಹಲಿಯಲ್ಲಿ ಕ್ಯಾಂಪ್ ನಿರ್ಮಿಸಿಕೊಂಡು ಹೋರಾಟ ಮಾಡಿದರು. ದೇಶಾದ್ಯಂತ ವಿರೋಧ ವ್ಯಕ್ತಪಡಿಸಿರು. ಈಗ ಸಾಮಾನ ನಾಗರಿಕ ಸಂಹಿತೆ ಕುರಿತು ಚರ್ಚೆಯಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಮಾಡಬೇಕಿದೆ. ಆದರೆ ಇದನ್ನು ಬೇರೆ ಯಾರನ್ನೋ ಗುರಿಯಾಸಿಕೊಂಡು ಮಾಡಲಾಗುತ್ತಿದೆ ಎಂದು ಹೇಳಿಕೊಂಡು ಓಡಾಡುತ್ತಿರುವವರಿದ್ದಾರೆ. 12 ಹಿಂದೂ ರಾಷ್ಟ್ರ ನಿರ್ಮಾಣವಾದರೆ ಎಲ್ಲರು ಸುಖ, ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ. ಆದರೆ ಜನಸಂಖ್ಯೆ ನಿಯಂತ್ರಣ ಆಗಲೆಬೇಕಿದೆ. ಆಗ ಮಾತ್ರ ಎಲ್ಲರು ಸುರಕ್ಷಿತವಾಗಿ, ಸಮೃದ್ಧಿಯಿಂದ ಇರಬಹುದಾಗಿದೆ.