ಶಿವಮೊಗ್ಗ: ಬಹು ವರ್ಷದ ಬೇಡಿಕೆಯಾಗಿದ್ದ ಪ್ರೀ ಪೇಯ್ಡ್ ಆಟೋ (Pre Paid) ವ್ಯವಸ್ಥೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಆರಂಭವಾಗಿದೆ. ಮೊದಲ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲು ಇಳಿದ ಪ್ರಯಾಣಿಕರು ಯಾವುದೇ ಕಿರಿಕಿರಿ ಇಲ್ಲದೆ ಆಟೋದಲ್ಲಿ ನಿಗದಿತ ಸ್ಥಳಕ್ಕೆ ತಲುಪುತ್ತಿದ್ದಾರೆ.
ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಅಗತ್ಯತೆ ಕುರಿತು ಈ ಹಿಂದೆ ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಪ್ರೀ ಪೇಯ್ಡ್ ವ್ಯವಸ್ಥೆ ಜಾರಿಯಾದ ಮೇಲೆ ಪ್ರಯಾಣಿಕರ ಅಭಿಪ್ರಾಯ ಸಹಿತ ವರದಿ ಪ್ರಕಟಿಸಲಾಯಿತು. ಪ್ರೀ ಪೇಯ್ಡ್ ಆಟೋ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಇದರ ವಿಶೇಷತೆ ಎನು? ಇದರ ಡಿಟೇಲ್ಸ್ ಇಲ್ಲಿದೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.
ಇಲ್ಲಿದೆ ಪ್ರೀ ಪೇಯ್ಡ್ ಡಿಟೇಲ್ಸ್
ಶಿವಮೊಗ್ಗ ರೈಲ್ವೆ ನಿಲ್ದಾಣದ ಆವರಣದಲ್ಲಿ ಎರಡು ಪ್ರೀ ಪೇಯ್ಡ್ ಆಟೋ ಕೌಂಟರ್ ಆರಂಭಿಸಲಾಗಿದೆ. ಬೆಳಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಕೌಂಟರ್ ತೆರೆದಿರಲಿದೆ. ಪ್ರಯಾಣಿಕರು ಈ ಕೌಂಟರ್‌ಗಳಲ್ಲಿ ಟೋಕನ್ ಪಡೆಯಬೇಕು. ಸದ್ಯಕ್ಕೆ ಈ ಟೋಕನ್ ವ್ಯವಸ್ಥೆ ಉಚಿತವಾಗಿದೆ.
ಪ್ರೀ ಪೇಯ್ಡ್ ಆಟೋ ಬುಕಿಂಗ್ ಮಾಡಲು ಪೊಲೀಸ್ ಸಿಬ್ಬಂದಿ ಮೊಬೈಲ್ ಫೋನ್‌ನಲ್ಲಿ ಸಿಂಪ್ಲಿ ಬುಕಿಂಗ್ ಅಪ್ಲಿಕೇಷನ್ ಬಳಕೆ ಮಾಡುತ್ತಿದೆ. ಪ್ರಯಾಣಿಕರು ತೆರಳಬೇಕಿರುವ ಬಡಾವಣೆ ಅಥವಾ ಸ್ಥಳದ ಹೆಸರು ನಮೂದಿಸಲಾಗುತ್ತದೆ.

ಆಟೋಗಳ ರಿಜಿಸ್ಟ್ರೇಷನ್ ನಂಬರ್ ಬದಲು ಸಂಚಾರ ಪೊಲೀಸರು ನೀಡಿರುವ SMG ನಂಬರ್‌ಗಳನ್ನು ಆಪ್‌ನಲ್ಲಿ ಅಪ್‌ಡೇಟ್ ಮಾಡಿ ಕ್ಲಿಕ್ ಮಾಡಿದರೆ, ರಶೀದಿ ಪ್ರಿಂಟ್ ಆಗಲಿದೆ.
ರಶೀದಿಯಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ಮಾಹಿತಿ ಇರಲಿದೆ. ಪ್ರಯಾಣಿಕರು ತೆರಳಬೇಕಿರುವ ಸ್ಥಳ, ಅದಕ್ಕೆ ನಿಗದಿ ಆಗಿರುವ ದರ, ಆಟೋ SMG ನಂಬರ್, ಬುಕಿಂಗ್ ಸಮಯ, ಹೆಲ್ಪ್ ಲೈನ್ ನಂಬರ್, ರಾತ್ರಿ ವೇಳೆ ಒನ್ ಅಂಡ್ ಹಾಫ್ ದರ ನೀಡಬೇಕು ಸೇರಿದಂತೆ ವಿವಿಧ ಸಲಹೆ ಮತ್ತು ಮಾಹಿತಿ ಈ ರಶೀದಿಯಲ್ಲಿ ಇರಲಿದೆ.
ಪ್ರಯಾಣಿಕರು ತಾವು ತಿಳಿಸಿದ ಸ್ಥಳದಿಂದ 250 ಮೀಟರ್ ವ್ಯಾಪ್ತಿಯಲ್ಲಿ ಈ ದರ ಅನ್ವಯ ಆಗಲಿದೆ. ಉದಾಹರಣೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎಂದು ರಶೀದಿ ಪಡೆದವರು ಅದರ 250 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಿಯೇ ಆಟೋದಿಂದ ಇಳಿದರು ರಶೀದಿಯಲ್ಲಿ ನಮೂದಿಸಿರುವ ದರವನ್ನು ನೀಡಬೇಕಾಗುತ್ತದೆ.
ಸದ್ಯ ಪ್ರೀ ಪ್ರೇಯ್ಡ್ ಆಟೋ ವ್ಯವಸ್ಥೆಯಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೊಂದೆಡೆ ಸಂಚಾರ ಪೊಲೀಸರು ರೈಲ್ವೆ ನಿಲ್ದಾಣದ ಮುಂಭಾಗ ಆಟೋಗಳಿಂದ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಪ್ರಯಾಣಿಕರು ಈಗ ಸುಲಭ ಮತ್ತು ಕಿರಿಕಿರಿ ಇಲ್ಲಿದೆ ನಿಲ್ದಾಣದ ಒಳಗೆ ಹೊರಗೆ ಹೋಗಿ ಬರಬಹುದಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ ಡಾ. ಧನಂಜಯ ಸರ್ಜಿ, ಏನದು?