ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020
ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೂರದ ಊರುಗಳಿಗೆ ತೆರಳಲು ಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಶಿವಮೊಗ್ಗದಿಂದ ಖಾಸಗಿ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಬೆಂಗಳೂರು, ಮೈಸೂರಿಗೆ ಬಸ್
ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರಮುಖ ಜಿಲ್ಲೆಗಳಿಗೆ ಶಿವಮೊಗ್ಗದಿಂದ ಬಸ್ ಬಿಡಲಾಗಿದೆ. ಸುಮಾರು 40 ಖಾಸಗಿ ಬಸ್‍ಗಳು ಬೆಳಗ್ಗೆಯಿಂದ ಪ್ರಯಾಣ ಆರಂಭಿಸಿವೆ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಆ ಭಾಗಕ್ಕೆ ಹೆಚ್ಚಿನ ಬಸ್ ಸೇವೆ ಇದೆ.
ಸರ್ಕಾರಿ ಬಸ್‍ಗಳ ಟಿಕೆಟ್ ದರದಲ್ಲಿಯೇ ಪ್ರಯಾಣಿಕರಿಗೆ ಚಾರ್ಜ್ ಮಾಡುತ್ತಿದ್ದೇವೆ ಅನ್ನುತ್ತಾರೆ ಬಸ್ ಕಂಡಕ್ಟರ್‍ಗಳು. ಕೆಎಸ್‍ಅರ್‍ಟಿಸಿ ಬಸ್‍ಗಳು ಸಂಚಾರ ನಿಂತಿರುವುದರಿಂದ ಸಂಕಷ್ಟದಲ್ಲಿರುವ ಪ್ರಯಾಣಿಕರು ಖಾಸಗಿ ಬಸ್ ಸೇವೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ. ತಮ್ಮೂರಿಗೆ ತಲುಪಲು ಅನುಕೂಲವಾಗುತ್ತಿದೆ.
ಬಸ್ ಸಂಚಾರದ ವಿಡಿಯೋ ರಿಪೋರ್ಟ್ ಇಲ್ಲಿದೆ

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಕಾರು ಚೇಸ್ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

- ಶಿವಮೊಗ್ಗದ ವಿವಿಧೆಡೆ ಎರಡು ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಉಷ್ಣಾಂಶ; ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?

- ಸಿಗಂದೂರು ಲಾಂಚ್ ವಿಚಾರ, ಸರ್ಕಾರ ನಿರ್ಧಾರ ಪ್ರಕಟಿಸುವಂತೆ ಆಗ್ರಹ, ಏನಂದ್ರು ಪ್ರಸನ್ನ ಕೆರೆಕೈ?

- ಇವತ್ತು ಏಕಾದಶಿ; ಶುಭ, ಅಶುಭ ಸಮಯಗಳು ಯಾವಾಗಿದೆ? ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು
















