ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ, ವಾಹನಗಳು ಬಂದಿವೆ. ಹಾಗಾಗಿ ನಗರದಲ್ಲಿ ಟ್ರಾಫಿಕ್ (Traffic) ಜಾಮ್ ಉಂಟಾಗಿದೆ. ಇದರಿಂದ ಶಾಲೆ, ಕಾಲೇಜು, ಕಚೇರಿಗೆ ತೆರಳುವವರು ಪರದಾಡಬೇಕಾಯಿತು. ಹಿಡಿಶಾಪ ಹಾಕುತ್ತಲೆ ನಡೆದು ಸಾಗಿದರು.
ಕಾಲ್ನಡಿಗೆಯಲ್ಲಿ ಸ್ಕೂಲಿಗೆ ಮಕ್ಕಳು
ಬೆಳಗ್ಗೆಯಿಂದಲೆ ವಿಮಾನ ನಿಲ್ದಾಣದ ಕಡೆಗೆ ವಾಹನಗಳು ತೆರಳುತ್ತಿವೆ. ಶಾಲೆ, ಕಾಲೇಜು ಸಮಯಕ್ಕೆ ನಗರದಲ್ಲಿ ಟ್ರಾಫಿಕ್ (Traffic) ಜಾಮ್ ಉಂಟಾಯಿತು. ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲಾಗದೆ, ಮನೆಗೂ ಮರಳಲಾಗದೆ ಪರದಾಡಿದರು. ಕೆಲವು ವಿದ್ಯಾರ್ಥಿಗಳು ನಡೆದುಕೊಂಡೆ ಶಾಲೆ, ಕಾಲೇಜಿಗೆ ತೆರಳಿದರು. ವಿವಿಧ ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳು ಧಾವಂತ, ಆತಂಕದಲ್ಲೇ ಪರೀಕ್ಷಾ ಕೇಂದ್ರಗಳಿಗೆ ದೌಡಾಯಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಚೇರಿಗೂ ನಡೆದ ಸಾಗಿದರು
ಇನ್ನು, ಕಚೇರಿಗಳಿಗೆ ತೆರಳುವವರಿಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿತು. ನಿತ್ಯ ಬಸ್ಸುಗಳಲ್ಲಿ ಓಡಾಡುತ್ತಿದ್ದವರು ನಡೆದುಕೊಂಡು ಕಚೇರಿಗೆ ತೆರಳಿದರು. ವಾಹನಗಳಲ್ಲಿ ತೆರಳುವವರು ಯಾವ ಕಡೆಗೂ ಹೋಗಲಾಗದೆ ಪರದಾಡಿದರು. ರಾಂಗ್ ಸೈಡ್ ಹೋಗಲು ಪೊಲೀಸರು ಬಿಡುತ್ತಿರಲಿಲ್ಲ. ಒಂದೇ ಬದಿಯಲ್ಲಿ ತೆರಳಲು ಟ್ರಾಫಿಕ್ ಜಾಮ್.
ಹಳ್ಳಿಗಳು, ಬಡಾವಣೆಗಳಿಗೆ ದಿಗ್ಭಂಧನ
ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಬಡಾವಣೆಗಳಿಗೆ ದಿಗ್ಭಂಧನದ ಅನುಭವಾಯಿತು. ಕಾಚಿನಕಟ್ಟೆ, ಕೊರ್ಲಹಳ್ಳಿ, ಲಕ್ಕಿನಕೊಪ್ಪ, ಸಂತೆ ಕಡೂರು, ಪುಟ್ಟಪ್ಪ ಕ್ಯಾಂಪ್, ಒಡ್ಡಿನಕೊಪ್ಪ, ಜ್ಯೋತಿ ನಗರ, ನಂಜಪ್ಪ ಬಡಾವಣೆ, ಪ್ರಿಯಾಂಕಾ ಲೇಔಟ್, ಸೂಳೆಬೈಲು, ವಿದ್ಯಾನಗರ ಸೇರಿದಂತೆ ವಿವಿಧ ಬಡಾವಣೆಗಳ ನಿವಾಸಿಗಳು ಮನೆಯಿಂದ ಹೊರ ಬರಲಾಗದೆ ಪರದಾಡಿದರು.
ರಸ್ತೆಗಳಾದ ಫುಟ್ ಪಾತ್
ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಫುಟ್ ಪಾತ್ ಗಳನ್ನೆ ರಸ್ತೆ ಮಾಡಕೊಂಡರು. ವಾಹನಗಳನ್ನು ಫುಟ್ ಪಾತ್ ಮೇಲೆ ಸಂಚರಿಸಿದರು. ಇದರಿಂದ ಪಾದಚಾರಿಗಲು ಕಿರಿಕಿರಿ ಅನುಭವಿಸಬೇಕಾಯಿತು.
ಇದನ್ನೂ ಓದಿ – ಶಿವಮೊಗ್ಗ ನಗರದಾದ್ಯಂತ ಫುಲ್ ಟ್ರಾಫಿಕ್ ಜಾಮ್, ಎಲ್ಲೆಲ್ಲಿ ಹೇಗಿದೆ? ಇಲ್ಲಿದೆ ಫೋಟೊ ರಿಪೋರ್ಟ್