ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 12 ಡಿಸೆಂಬರ್ 2019
ಸಾಲ ವಸೂಲಾತಿ ವಿಚಾರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿರುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿ.16ರ ಬೆಳಗ್ಗೆ 10ಕ್ಕೆ ಡಿಸಿ ಕಚೇರಿ ಎದುರು ಋಣಮುಕ್ತ ಕಾಯ್ದೆ
ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಹೇಳಿದರು.
ಸಾಲ ವಸೂಲಾತಿ ವೇಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕ್ರೂರವಾಗಿ ವರ್ತಿಸುತ್ತಿದ್ದಾರೆ. ಆರ್ಬಿಐ ಮತ್ತು ಸಹಕಾರಿ ವಲಯದ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಲೆಎತ್ತಿದ್ದು, ಮಹಿಳೆಯರ ಮತ್ತು ಬಡವರ ನೆರವಿಗೆ ಗುಂಪು ಸಾಲ ಕೊಡುತ್ತಾರೆ. ನಂತರ ಕಿರುಕುಳ ನೀಡುವುದಲ್ಲದೇ ಶೇ.20ರಿಂದ 40 ಬಡ್ಡಿ ವಿಧಿಸಿ ಸಾಲ ವಸೂಲಾತಿಗಾಗಿ ದಂಡು ಕಟ್ಟಿಕೊಂಡು ಬಂದು ಮನೆಯಲ್ಲಿ ಚಾಪೆ ಹಾಸಿ ಎಂದು ಕುಳಿತುಕೊಳ್ಳುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ಮೈಕ್ರೋ ಫೈನಾನ್ಸ್ ಕಂಪನಿಗಳು ಸರ್ಕಾರದಿಂದ ನೆರವು ಪಡೆಯುತ್ತವೆ. ಉದ್ಯೋಗ ತರಬೇತಿ ನೀಡುವ ನೆಪದಲ್ಲಿ ಸರ್ಕಾರದ ಹಣ ಪಡೆದು ಯಾವ ತರಬೇತಿಯನ್ನೂ ನೀಡುತ್ತಿಲ್ಲ. ಅಲ್ಲದೆ ಬ್ಯಾಂಕ್, ನಬಾರ್ಡ್ ಮುಂತಾದವುಗಳಿಂದ ಕಡಿಮೆ ಬಡ್ಡಿ ಸಾಲ ಪಡೆದು ಮಹಿಳೆಯರಿಗೆ ಸಾಲ
ಕೊಡುವಾಗ ಹೆಚ್ಚು ಬಡ್ಡಿ ವಿಧಿಸುತ್ತವೆ. ಒಂದು ರೀತಿಯಲ್ಲಿ ಹಗಲು ದರೋಡೆಗೆ ಇವು ಇಳಿದಿವೆ. ಇವರ ಅನೇಕ ಸಾಲಗಳಿಗೆ ಲೆಕ್ಕವೇ ಇಲ್ಲ. ಕೈ ಸಾಲ ಕೊಟ್ಟವರಂತೆ ವರ್ತಿಸುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಣ್ಣುಮುಚ್ಚಿಕೊಂಡು ಕುಳಿತಿವೆ ಎಂದು ದೂರಿದರು. ಮೈಕ್ರೋ ಫೈನಾನ್ಸ್ ಕಂಪನಿಗಳ ಹಿಂದೆ ದೊಡ್ಡ ಜಾಲವಿದೆ.
ಬ್ಯಾಂಕ್ಗಳು ಈಗ ಬಡವರಿಗೆ ಸಾಲ ಕೊಡುವುದನ್ನೇ ನಿಲ್ಲಿಸಿವೆ. ಸಾಲ ಬೇಕೆಂದರೆ ಐಟಿ ರಿಟರ್ನ್ ಕೇಳುತ್ತಾರೆ. ತೆರಿಗೆ ಕಟ್ಟುವ ಶ್ರೀಮಂತ ಮಹಿಳೆಯರು ಅಲ್ಲಿ ಸಾಲ ಏಕೆ ಪಡೆಯುತ್ತಾರೆ ಎಂ ಪ್ರಶ್ನಿಸಿದರು. ಜಿಪಂ ಸದಸ್ಯ ಕಲಗೋಡು ರತ್ನಾಕರ್ ಮಾತನಾಡಿ, ಮೈಕ್ರೋ ಫೈನಾನ್ಸ್ಗಳ ಲೇವಾದೇವಿಯನ್ನು ಸಂಪೂರ್ಣವಾಗಿ ತನಿಖೆ ಮಾಡಲು ಆಗ್ರಹಿಸಿ ಅವರ ನಿಯಮಬಾಹಿರ ಅಕ್ರಮ ಸಾಲಗಳ ಹೊರಗೆಳೆದು ಬಡ ಮಹಿಳೆಯರಿಗೆ ರಕ್ಷಣೆ ನೀಡಬೇಕು. ಬೇನಾಮಿ ಹೆಸರಿನಲ್ಲಿ ದುಡ್ಡು ತಂದು ಸುರಿದು
ಬಡ್ಡಿಕೋರರಾಗುತ್ತಿರುವ, ಲೂಟಿ ಮಾಡುತ್ತಿರುವ, ಕಪ್ಪು ಹಣ ಬಿಳಿ ಮಾಡಲು ಹೊರಟಿರುವ ಇಂತಹ ಫೈನಾನ್ಸ್ ರಾಷ್ಟ್ರೀಕರಣ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಲಾಗುತ್ತದೆ ಎಂದರು. ಹೊಸನಗರದ ರಾಮ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ರುದ್ರೇಶ್, ಜಯಕುಮಾರ್, ಆಶಾರಾಣಿ, ಸೌಮ್ಯಾ, ಮೋಹಿನಿ, ನೇತ್ರಾವತಿ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Former President of District Congress Thi Na Shrinivas said a huge protest to be held in Shimoga against the harassment of Micro Finance in Shimoga District.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422