ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
himoga
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಆಗಸ್ಟ್ 2020
ಶುಭಮಂಗಳ ಕಲ್ಯಾಣ ಮಂದಿರ ಸಮೀಪ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ಅಮಾಯಕ ಚಂದ್ರಶೇಖರ್ ಸಾವಿಗೆ ಕಾರಣರಾದ ೧೮ನೇ ವಾರ್ಡ್‌ನ ಪಾಲಿಕೆ ಸದಸ್ಯ ಮತ್ತು ಅಧಿಕಾರಿಗಳ ದೌರ್ಜನ್ಯ ಖಂಡಿಸಿ ವಿನೋಬನಗರ ೧೮ನೇ ವಾರ್ಡ್ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಾಮ ಗಾರಿ ಯೋಜನೆಯಡಿ ಕೋಟ್ಯಂತರ ಹಣ ಖರ್ಚಾಗುತ್ತಿದೆ. ಕೆಲವೆಡೆ ಹಣದ ಖರ್ಚು ತೋರಿಸಲೆಂದೇ ಕೆಲಸಗಳು ನಡೆಯುತ್ತಿವೆ. ಕೊರೋನಾ ಲಾಕ್ ಡೌನ್ ನಿಂದಾಗಿ ಬೀದಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದು ಲಾಂಡ್ರಿಂಗ್ ಅಂಗಡಿ ನಡೆಸುತ್ತಿದ್ದ ವಿ.ಚಂದ್ರಶೇಖರ್ ಅವರ ಅಂಗಡಿಯನ್ನು ತೆರವುಗೊಳಿಸಲಾಗಿದೆ. ಶುಭಮಂಗಳ ಕಲ್ಯಾಣ ಮಂದಿರ ಬಳಿ ಖಾಸಗಿ ಜಾಗದಲ್ಲಿದ್ದ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿದ್ದು ಇದರ ಹಿಂದೆ ವಾರ್ಡ್ ಸದಸ್ಯರ ಪಿತೂರಿ ಇದೆ ಎಂದು ದೂರಿದರು.
ಚಂದ್ರಶೇಖರ್ ಅವರಿಗೆ ಜೀವನಾಧಾರವಾಗಿದ್ದ ಅಂಗಡಿಯನ್ನು ಸ್ಥಳೀಯರ ವಿರೋಧದ ನಡುವೆಯು ತೆರವುಗೊಳಿಸಲಾಗಿದೆ. ಇದರಿಂದ ನೊಂದು ಅವರು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಪಾಲಿಕೆ ಸದಸ್ಯನ ದುರ್ವತನೆ ಮತ್ತು ಅಧಿಕಾರಿಗಳ ವಿವೇಚನಾರಹಿತ ದುಡಿಕಿನ ನಿರ್ಧಾರ ಇದಕ್ಕೆ ಕಾರಣವಾಗಿದೆ. ನಗರದ ಹಲವೆಡೆ ಹಲವರು ಪಾಲಿಕೆ ಜಾಗ, ಮುಖ್ಯರಸ್ತೆ, ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೂ ಕ್ರಮ ಕೈಗೊಳ್ಳದ ಪಾಲಿಕೆ ಅಧಿಕಾರಿಗಳು ಬಡಪಾಯಿಗಳ ಬದುಕು ನಾಶಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಶೇಖರ್ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ನೀಡಬೇಕು. ತೆರವುಗೊಳಿಸಿದ ಅಂಗಡಿ ಜಾಗದ ಬದಲಿಗೆ ಬೇರೆ ಜಾಗವನ್ನು ಮೃತರ ಕುಟುಂಬಕ್ಕೆ ನೀಡಬೇಕು. ಸಾವಿಗೆ ಕಾರಣರಾದ ೧೮ನೇ ವಾರ್ಡ್‌ನ ಸದಸ್ಯ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಹೆಚ್.ಪಾಲಾಕ್ಷಿ, ಗಿರೀಶ್, ರಾಮು, ಶಾಂತಾ ಸುರೇಂದ್ರ, ತಂಗರಾಜು, ಜಿ.ಡಿ.ಮಂಜುನಾಥ್, ಸಿದ್ದಪ್ಪ, ಗಿರೀಶ್ ಹಾಗೂ ಮೃತರ ಕುಟುಂಬದವರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]