ಶಿವಮೊಗ್ಗ ಸಿಟಿಯಲ್ಲಿ ಮಳೆ ಅಬ್ಬರಕ್ಕೆ ಮರಗಳು ಧರೆಗೆ, ಸ್ಟೇಡಿಯಂ ಮುಳುಗಡೆ, ಕಾಳಜಿ ಕೇಂದ್ರ ಶುರು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 19 JULY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA NEWS : ಶಿವಮೊಗ್ಗ ನಗರದಲ್ಲಿ ಭಾರಿ ಮಳೆಗೆ ಅಲ್ಲಲ್ಲಿ ಹಾನಿ ಉಂಟಾಗಿದೆ (Effect). ಬೃಹತ್‌ ಮರಗಳು ಧರೆಗುರುಳಿವೆ. ಅದೃಷ್ಟವಶಾತ್‌ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು, ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಒಂದೆಡೆ ಹೊಳೆ ನೋಡಲು ಜನ ಸೇತುವೆ ಬಳಿ ಆಗಮಿಸುತ್ತಿದ್ದಾರೆ. ಇನ್ನೊಂದೆಡೆ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿದೆ.

ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಹೇಗಿದೆ ಸ್ಥಿತಿ?

#EBEDEF

 ನವುಲೆ ಕ್ರಿಕೆಟ್‌ ಸ್ಟೇಡಿಯಂ ಜಲಾವೃತ 

ನವುಲೆಯಲ್ಲಿರುವ ಕೆಎಎಸ್‌ಸಿಎ ಕ್ರಿಕೆಟ್‌ ಸ್ಟೇಡಿಯಂ ಈ ಬಾರಿಯ ಜಲಾವೃತವಾಗಿದೆ. ಭಾರಿ ಮಳೆಗೆ ನವುಲೆ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಸ್ಟೇಡಿಯಂಗೆ ಹರಿದಿದೆ. ಕ್ರಿಕೆಟ್‌ ಸ್ಟೇಡಿಯಂ ಎರಡು ಬದಿಯಲ್ಲು ಕೆರೆ ನೀರು ತುಂಬಿದೆ. 31 ಎಕರೆಯ ನವುಲೆ ಕೆರೆಯಲ್ಲಿ 26 ಎಕೆರೆ ಜಾಗದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲಾಗಿದೆ. ಪ್ರತಿ ಮಳೆಗಾಲದಲ್ಲಿ ಕೆರೆ ತುಂಬಿ ಸ್ಟೇಡಿಯಂ ಜಲಾವೃತವಾಗುತ್ತದೆ.

Navule Cricket Stadium

#EBEDEF

 ಧರೆಗುರುಳಿದ ಬೃಹತ್‌ ಮರಗಳು 

ನಗರದ ವಿವಿಧೆಡೆ ಮಳೆ, ಗಾಳಿಗೆ ಬೃಹತ್‌ ಮರಗಳು ಧರೆಗುರುಳಿವೆ. ಕಸ್ತೂರ ಬಾ ಕಾಲೇಜು ಮುಂಭಾಗ ಬಿಎಸ್‌ಎನ್‌ಎಲ್‌ ಕಚೇರಿ ಎದುರಿದ್ದ ಬಹೃತ್‌ ಮರ ಧರೆಗುರುಳಿದೆ. ಪಾಲಿಕೆ ವತಿಯಿಂದ ಮರ ತೆರವು ಮಾಡಲಾಯಿತು. ಮರ ಬಿದ್ದಿದ್ದರಿಂದ ವಿದ್ಯುತ್‌ ತಂತಿಗಳು ತುಂಡಾಗಿ ವಿದ್ಯುತ್‌ ಸಂಪರ್ಕ ಕಡಿತವಾಗಿತ್ತು. ಇನ್ನು, ಸಾಗರ ರಸ್ತೆಯಿಂದ ಸವಾರ್‌ಲೈನ್‌ ರಸ್ತೆಯ ತಿರುವಿನಲ್ಲಿ ಲಕ್ಷ್ಮೀ ಮೆಡಿಕಲ್ಸ್‌ ಮುಂಭಾಗ ಕಾರಿನ ಮೇಲೆ ಮರ ಬಿದ್ದಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

tree falls

#EBEDEF

 ಮೈದುಂಬಿದ ತುಂಗಾ ನದಿ 

ಭಾರಿ ಮಳೆಗೆ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಕೋರ್ಪಲಯ್ಯ ಛತ್ರ ಮಂಟಪ ಮುಳುಗಿದೆ. ತುಂಗಾ ನದಿ ಸೇತುವೆ ಮೇಲೆ ನಿಂತು ಮೈದುಂಬಿ ಹರಿಯುತ್ತಿರುವ ತುಂಗಾ ನದಿಯನ್ನು ಕಣ್ತುಂಬಿಕೊಂಡು, ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

#EBEDEF

 ಜಲಾವೃತದ ಭೀತಿಯಲ್ಲಿ ಜನ 

Tunga River

ಮಳೆ ಮತ್ತು ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದಂತೆ ನದಿ ಪಕ್ಕದಲ್ಲಿರುವ ವಿವಿಧ ಬಡಾವಣೆಗಳ ನಿವಾಸಿಗಳಲ್ಲಿ ಅತಂಕ ಹೆಚ್ಚಾಗಿದೆ. ಮದಾರಿಪಾಳ್ಯದ ಸೇರಿದಂತೆ ಅಕ್ಕಪಕ್ಕದ ಬಡಾವಣೆಗಳಿಗೆ ನೀರು ನುಗ್ಗುವ ಭೀತಿ ಇದೆ. ಹಾಗಾಗಿ ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದಂತೆ ಮುಳುಗಡೆ ಭೀತಿಯೂ ಹೆಚ್ಚಲಿದೆ.

#EBEDEF

 ಕಾಳಜಿ ಕೇಂದ್ರ ಆರಂಭ 

ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಕಾಳಜಿ ಕೇಂದ್ರ ಆರಂಭಿಸಿಲಾಗಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್‌, ಬಾಪೂಜಿನಗರ ಮತ್ತು ಸೀಗೆಹಟ್ಟೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಒಂದು ವೇಳೆ ಮಳೆ ಹೆಚ್ಚಾಗಿ, ವಿವಿಧೆಡೆ ಜಲಾವೃತವಾದರೆ ತಕ್ಷಣ ಕಾಳಜಿ ಕೇಂದ್ರಕ್ಕೆ ಜನರನ್ನು ರವಾನಿಸಲಾಗುತ್ತದೆ. ಮುಂಜಾಗ್ರತ ಕ್ರಮ ಮತ್ತು ತುರ್ತು ಸಂದರ್ಭ ಎದುರಿಸಲು ಐದು ವಿಶೇಷ ತಂಡ ರಚಿಸಲಾಗಿದೆ.

ಇದನ್ನೂ ಓದಿ ⇓

ಧರೆ ಕುಸಿದು ತೋಟ ಜಲಾವೃತ, ಸಾಗರದಲ್ಲಿ ಸಹಾಯವಾಣಿ ಆರಂಭ, ತಾಲೂಕಿನಲ್ಲಿ ಎಷ್ಟೆಲ್ಲ ಹಾನಿಯಾಗಿದೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment