ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್‌ ಅಂತಿದ್ದಾರೆ ಜನ, ಏನಿದು ಅಭಿಯಾನ?

ಶಿವಮೊಗ್ಗ: ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ವಾಹನ ಬಂದರೂ ಕಸ ತಂದು ರಸ್ತೆ ಸುರಿಯುವವರಿಗೇನು ಕಡಿಮೆ ಇಲ್ಲ. ಇಂತಹವರಿಗೆ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ರಂಗೋಲಿ (Rangoli) ಮೊರೆ ಹೋಗಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಶಿವಮೊಗ್ಗ ನಗರದ ವಿವಿಧೆಡೆ ಖಾಲಿ ನಿವೇಶನಗಳು, ರಸ್ತೆ ಬದಿ, ಕನ್ಸರ್‌ವೆನ್ಸಿಗಳಲ್ಲಿ ಜನ ಕಸ ತಂದು ಸುರಿಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ರಂಗೋಲಿ ಅಭಿಯಾನ ಆರಂಭಿಸಿದ್ದಾರೆ. ಕಸ ಸುರಿಯುವ ಜಾಗದಲ್ಲಿ ಚಂದದ ರಂಗೋಲಿ ಬಿಡಿಸಿ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಏನಿದು ರಂಗೋಲಿ ಅಭಿಯಾನ?

ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವ ಜಾಗಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಗುರುತಿಸಿದ್ದಾರೆ. ಈ ಜಾಗದಲ್ಲಿ ಪೌರ ಕಾರ್ಮಿಕರು ಸ್ವಚ್ಛಗೊಳಿಸಿ, ಅಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದಾರೆ. ಕೆಲವೆಡೆ ಸಗಣಿ ಸಾರಿಸಿ ರಂಗೋಲಿ ಬಿಡಿಸಲಾಗಿದೆ. ರಂಗೋಲಿಯ ಮೂಲಕವೇ ಕಸ ಹಾಕಬೇಡಿ ಎಂದು ಬರೆದಿದ್ದಾರೆ.

Nanjappa Hospital Advertisement

Rangoli on Shimoga Streets

ಶಿವಮೊಗ್ಗದ ದುರ್ಗಿಗುಡಿ, ಎಎನ್‌ಕೆ ರಸ್ತೆ, ಹೊಸಮನೆ ಸೇರಿದಂತೆ ಹಲವು ಕಡೆಗಳಲ್ಲಿ ಪಾಲಿಕೆ ಸಿಬ್ಬಂದಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಿದ್ದಾರೆ.

ಕಸ ಹಾಕಿದರೆ ದಂಡ ಫಿಕ್ಸ್‌

ಇನ್ನು, ರಂಗೋಲಿ ಅಭಿಯಾನ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಮಹಾನಗರ ಪಾಲಿಕೆ quote.webpಆಯುಕ್ತ ಮಾಯಣ್ಣ ಗೌಡ, ನಿರಂತರವಾಗಿ ಕಸ ಹಾಕುವ ಜಾಗಗಳನ್ನು ಬ್ಲಾಕ್‌ ಸ್ಪಾಟ್‌ ಎಂದು ಗುರುತಿಸಿದ್ದೇವೆ. ಇವುಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕಿದೆ. ಮೊದಲಿಗೆ ರಂಗೋಲಿ ಹಾಕುತ್ತಿದ್ದೇವೆ. ಆದರೂ ಬದಲಾವಣೆ ಆಗದೆ ಇದ್ದರೆ ಅಂತಹ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಿ ಕಸ ಹಾಕುವವರ ವಿರುದ್ಧ ದಂಡ ವಿಧಿಸುತ್ತೇವೆ ಎಂದು ಎಚ್ಚರಿಸಿದರು.

Rangoli on Shimoga Streets

ಅಭಿಯಾನದಿಂದ ಜಾಗೃತರಾಗಿದ್ದಾರೆ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದನ್ನು ತಪ್ಪಿಸಲು ಮಹಾನಗರ ಪಾಲಿಕೆ ಹಿಂದೆಯು ಅಭಿಯಾನಗಳನ್ನು ನಡೆಸಿತ್ತು. ಕಸ ಸುರಿಯುವ ಜಾಗಗಳನ್ನು ಸ್ವಚ್ಛಗೊಳಿಸಿ ಅಲ್ಲಿ ಸೂಚನಾ ಫಲಕಗಳನ್ನು ನೆಡಲಾಗಿತ್ತು. ಇದರಿಂದ ಆ ಜಾಗಗಳಲ್ಲಿ ಕಸ ಬೀಳುವುದು ತಪ್ಪಿತ್ತು. ಆದರೆ ಇನ್ನೂ ಕೆಲವು ಕಡೆ ಜನ ಕಸ ಸುರಿಯುವುದು ಮುಂದುವರೆದಿತ್ತು.

Rangoli on Shimoga Streets

ರಾತ್ರಿ ಬಂದು ಕಸ ಹಾಕ್ತಾರೆ

ಶಿವಮೊಗ್ಗ ನಗರದಲ್ಲಿ ಬೆಳಗಿನ ಜಾವದಿಂದ ಮಧ್ಯಾಹ್ನ 2 ಗಂಟೆವರೆಗೆ ಮನೆ ಮನೆಯಿಂದ ಕಸ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ 99 ವಾಹನಗಳನ್ನೂ ನಿಯೋಜಿಸಲಾಗಿದೆ. ಆದರೂ ಕೆಲವರು ಈ ವಾಹನಗಳಿಗೆ ಕಸ ಹಾಕದೆ ರಾತ್ರೋರಾತ್ರಿ ಸಾರ್ವಜನಿಕ ಸ್ಥಳದಲ್ಲಿ ತಂದು ಸುರಿಯುತ್ತಿದ್ದಾರೆ. ಪೌರ ಕಾರ್ಮಿಕರು ಆಗಾಗ ಇಂತಹ ಜಾಗಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಅದರೆ ಇದಕ್ಕೆ ಶಾಶ್ವತ ಪರಿಹಾರ ನೀಡಲು ರಂಗೋಲಿ ಅಭಿಯಾನ ಆರಂಭಿಸಿದ್ದಾರೆ. ಸಾರ್ವಜನಿಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Rangoli on Shimoga Streets

JNNCE-Admission-Advt-scaled

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಕ್ಕಳ ದಸರಾ, ಯಾವ್ಯಾವ ದಿನ ಏನೆಲ್ಲ ಸ್ಪರ್ಧೆ, ಕಾರ್ಯಕ್ರಮಗಳು ಇರಲಿವೆ? ಇಲ್ಲಿದೆ ಲಿಸ್ಟ್

#news, #Karnataka, #Shivamogga, #waste management, #civic awareness, #garbage, #littering, #rangoli, #art campaign, #local news, #sanitation.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment