ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 NOVEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಫೋಟೊಗ್ರಾಫರ್ ಒಬ್ಬರಿಂದ ಮೂರು ಕ್ಯಾಮರಾಗಳನ್ನು (Camera) ಬಾಡಿಗೆಗೆ ಪಡೆದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಬುದ್ದ ನಗರದ ಫೋಟೊಗ್ರಾಫರ್ ರುದ್ರೇಶ್ ಬಳಿ ಕೆನಾನ್ 200ಡಿ, ಕೆನಾನ್ 1200ಡಿ ಮತ್ತು ನಿಕಾನ್ 7500 ಕ್ಯಾಮರಾಗಳಿದ್ದವು. ಅ.10ರಂದು ಪವನ್ ಎಂಬಾತ 7 ದಿನಕ್ಕೆ ಕ್ಯಾಮರಾ ಬಾಡಿಗೆಗೆ ಬೇಕು ಎಂದು ಕೇಳಿದ್ದ. ಆತನ ಆಧಾರ್ ಕಾರ್ಡ್ ಪಡೆದು 15 ಸಾವಿರ ರೂ.ಗೆ ಕ್ಯಾಮರಾಗಳನ್ನು ಬಾಡಿಗೆಗೆ ನೀಡಿದ್ದರು. 7 ದಿನದ ಬಳಿಕ ಕರೆ ಮಾಡಿದಾಗ ಪವನ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಇದನ್ನೂ ಓದಿ – ಪರಿಚಿತ ಅಂತಾ ಇನ್ನೋವಾ ಕಾರು ಕೊಟ್ಟರು, ಆಮೇಲೆ ಕಾರು ಇಲ್ಲ, ವ್ಯಕ್ತಿನೂ ಇಲ್ಲ, GPS ಚೆಕ್ ಮಾಡಿದಾಗ ಶಾಕ್
ಮನೆ ಬಳಿ ತೆರಳಿದಾಗಲು ಪವನ್ ಸುಳಿವು ಸಿಗಲಿಲ್ಲ. ಇದೆ ರೀತಿ ಪವನ್ ಹಲವರಿಂದ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ವಂಚಿಸಿದ್ದಾನೆ ಎಂದು ಆತನ ತಂದೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ರುದ್ರೇಶ್ ಅವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಜೈಲ್ ರಸ್ತೆಯಲ್ಲಿ ಬೈಕ್ನಲ್ಲಿ ಬಂದು ಅಡ್ಡಗಟ್ಟಿ 54 ಸಾವಿರದ ಮೊಬೈಲ್ ಕಸಿದು ಪರಾರಿ