ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗ ನಿರ್ಮಾಣಕ್ಕೆ, ಮಹಿಳಾ ಸಂಘಟನೆಯೊಂದು ವಿಭಿನ್ನ ಪ್ರಯೋಗ ನಡೆಸಿತು. ಪ್ಲಾಸ್ಟಿಕ್ ತಂದು ಕೊಟ್ಟವರಿಗೆ ಅಕ್ಕಿ ನೀಡುವ ಯೋಜನೆ ರೂಪಿಸಿತ್ತು.
ವಾಸವಿ ಮಹಿಳಾ ಸಂಘದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ಲಾಸ್ಟಿಕ್’ನ ತೂಕದಷ್ಟೇ ಅಕ್ಕ ನೀಡುವ ಪ್ಲಾನ್ ಮಾಡಲಾಗಿತ್ತು. ನಗರದ ವಿವಿಧೆಡೆಯಿಂದ ಸಾರ್ವಜನಿಕರು ಪ್ಲಾಸ್ಟಿಕ್ ತಂದು ಕೊಟ್ಟಿದ್ದಾರೆ.
ಎಷ್ಟು ಪ್ಲಾಸ್ಟಿಕ್ ಬಂತು?
ಪ್ಲಾಸ್ಟಿಕ್ ಡಬ್ಬಗಳು, ಪ್ಲಾಸ್ಟಿಕ್ ಬಾಟಲಿಗಳು, ಬಗೆಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು ಸಾರ್ವಜನಿಕರು ತಂದು ಒಪ್ಪಿಸಿದ್ದಾರೆ. ಒಟ್ಟು 150 ಕೆ.ಜಿ.ಯಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿದೆ. ಪ್ರತಿಯೊಬ್ಬರು ತಂದು ಕೊಡುವ ಪ್ಲಾಸ್ಟಿಕ್ ವಸ್ತುಗಳನ್ನು ತೂಕ ಮಾಡಲಾಯಿತು. ಅಷ್ಟೇ ಪ್ರಮಾಣದ ಅಕ್ಕಿಯನ್ನು ಅವರಿಗೆ ವಿತರಣೆ ಮಾಡಲಾಗಿದೆ.
ಬಟ್ಟೆ ಚೀಲದಲ್ಲಿ ಅಕ್ಕಿ ವಿತರಣೆ
ಪ್ಲಾಸ್ಟಿಕ್ ವಸ್ತುಗಳ ತೂಕದಷ್ಟೇ ಅಕ್ಕಿಯನ್ನು ಹಿಂತಿರುಗಿಸಲು ನಿರ್ಧರಸಲಾಗಿತ್ತು. ಅಕ್ಕಿಯನ್ನು ಪ್ಲಾಸ್ಟಿಕ್ ಕವರ್’ನಲ್ಲಿ ನೀಡುವ ಬದಲು ವಾಸವಿ ಮಹಿಳಾ ಸಂಘ, ಬಟ್ಟೆ ಚೀಲದಲ್ಲಿ ಅಕ್ಕಿಯನ್ನು ವಿತರಿಸಿತು.
ಈ ಪ್ಲಾಸ್ಟಿಕ್ ವಸ್ತುಗಳನ್ನು ಏನು ಮಾಡ್ತಾರೆ?
ವಾಸವಿ ಮಹಿಳಾ ಸಂಘದ ಪ್ರಯೋಗಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆಯು ಸಹಯೋಗ ನೀಡಿದೆ. ಇಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ವಸ್ತುಗಳನ್ನು ಪಾಲಿಕೆಯೆ ಸಂಗ್ರಹಿಸಲಿದೆ. ರಸ್ತೆ ಡಾಂಬರೀಕರಣಕ್ಕೆ ಈ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Vasavi Mahila Sanga in Shimoga distributed rice for plastic. This is an drive to develop Clean Shimoga. Around 150 Kgs of Plastic has been collected.