ಶಿವಮೊಗ್ಗ: ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಒಳ ಹೊರಗಿನ ಶತ್ರುಗಳಿಂದ ಭಾರತದ ಆಸ್ಮಿತೆ ರಕ್ಷಿಸಿದ ಸಿಂಧೂರ ವೀರರಿಗೊಂದು ನಮನ (Salute), ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಭಾರತೀಯರಿಗೆ ಶ್ರದ್ದಾಂಜಲಿ, ನಿಷ್ಠಾವಂತ ಸೇನಾ ಹಾಗೂ ಪೋಲೀಸ್ ಸಿಬ್ಬಂದಿಗೆ ಸನ್ಮಾನ, ಹುತಾತ್ಮರಾದ ಕರ್ತವ್ಯನಿರತ ಪೋಲೀಸ್ ಕುಟುಂಬಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು. ಇಲ್ಲಿದೆ ಪಾಯಿಂಟ್ಸ್ ಹಿರಿಯ ಪತ್ರಕರ್ತ ಅಜಿತ್ ಹನಮಕ್ಕನವರ್ ದಿಕ್ಕೂಚಿ ಭಾಷಣ ಮಾಡಿದರು. ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್ವ್ಯಕ್ತಿಗಳ ಆರೋಗ್ಯದ ಕಾಳಜಿ ವೈದ್ಯರು ವಹಿಸಿದರೆ, ಸಮಾಜದ ಆರೋಗ್ಯದ ಬಗ್ಗೆ ಪೊಲೀಸರು ಯೋಚಿಸುತ್ತಾರೆ. ಆದರೆ ದೇಶದ ಆರೋಗ್ಯವನ್ನು ಸೈನಿಕರು ತಮ್ಮ ಕುಟುಂಬವನ್ನು ಬದಿಗಿಟ್ಟು ರಕ್ಷಣೆ ಮಾಡುತ್ತಾರೆ.
ಪೊಲೀಸರು, ಸೈನಿಕರೆ ದೇಶದ ನಿಜವಾದ ಹಿರೋಗಳು. ಪಾಕಿಸ್ತಾನ್ ಕುತಂತ್ರಕ್ಕೆ ಸರಿಯಾದ ಏಟನ್ನು ನೀಡಿದ ಸೈನಿಕರ ಹಿಂದೆ ಇರುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ. ಅವರು ಮಾತಿಗಿಂತ ತಮ್ಮ ಕೆಲಸದ ಮೂಲಕವೆ ಎಲ್ಲರಿಗೂ ಉತ್ತರ ನೀಡಿದ್ದಾರೆ.
ವಿಶ್ವದ ಹಲವು ದೇಶಗಳು ಯುದ್ಧ ಮಾಡುತ್ತಿವೆ. ಮೂರನೆ ವಿಶ್ವಯುದ್ದದ ಛಾಯೆ ನಮ್ಮನ್ನು ಆವರಿಸುತ್ತಿದೆ. ಇಂತಹ ಸಮಯದಲ್ಲಿ ನಾವೆಲ್ಲ ದೇಶದ ಪರ ನಿಲ್ಲಬೇಕಿದೆ.
ದೇಶದ ನಿಜವಾದ ಸೈನಿಕ ಶಕ್ತಿ ಅನಾವರಣ
ಭದ್ರತೆ ವಿಷಯದಲ್ಲಿ ರಾಜೀ ಇರಬಾರದು. ಅಂತಹ ಸುಸ್ಥಿತಿಗೆ ಭಾರತ ಬಂದು ನಿಂತಿರುವುದು ಹೆಮ್ಮೆಯ ಸಂಗತಿ. ಭಾರತದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಕ್ಕೆ ಭಾರತ ತಿರುಗೇಟು ಕೊಡುವ ಮಟ್ಟಕ್ಕೆ ಬೆಳೆದಿದೆ.
ಪಹಲ್ಲಾಮ್ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ ಮಾಡಿದ್ದು ದೇಶದ ನಿಜವಾದ ಸೈನಿಕ ಶಕ್ತಿ ಅನಾವರಣಗೊಂಡಿತು. ಈ ಹಿಂದೆ ನಮ್ಮನ್ನು ಆಳಿದವರು ಭಾರತಕ್ಕೆ ಸೈನ್ಯವೇ ಬೇಡ ಎಂದಿದ್ದರು. ಸೈನ್ಯ ಯಾಕೆ ಬೇಕು ಅಂದು ಹೇಳಿದ್ದ ದೇಶವಿಂದು ಬಲಿಷ್ಠ ಸೈನ್ಯವನ್ನು ಹೊಂದಿದೆ.
ಗಡಿ ರಸ್ತೆಗಳನ್ನು ಬೇಕೆಂದೇ ಕೆಟ್ಟದಾಗಿ ಇಟ್ಟುಕೊಂಡಿದ್ದೇವೆ ಎಂದು ಅಂದಿನ ರಕ್ಷಣಾ ಸಚಿವರೊಬ್ಬರು ಹೇಳಿದ್ದರು. ಆದರೆ ಇಂದು ಗಡಿ ರಸ್ತೆಗಳ ಸ್ಥಿತಿ ಬದಲಾಗಿದೆ. ಕೇವಲ 11 ವರ್ಷಗಳಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಅಮದು ಮಾಡಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ಹೆಚ್ಚಾಗಿ 26 ಸಾವಿರ ಕೋಟಿ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದ್ದೇವೆ ಎಂಬುದು ಹೆಮ್ಮೆಯ ಸಂಗತಿ. ಇಂದು ಗಡಿಭಾಗದ ಚಿತ್ರಣ ಬದಲಾಗಿದೆ.
ಕಾರ್ಯಕ್ರಮದಲ್ಲಿ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಭಾರತೀಯರಿಗೆ ಶ್ರದ್ದಾಂಜಲಿ, ನಿಷ್ಠಾವಂತ ಸೇನಾ ಹಾಗೂ ಪೊಲೀಸ್ ಸಿಬ್ಬಂದಿಗೆ ಸನ್ಮಾನ, ಹುತಾತ್ಮರಾದ ಕರ್ತವ್ಯನಿರತ ಪೋಲೀಸ್ ಕುಟುಂಬಕ್ಕೆ ಗೌರವ ಸಮರ್ಪಿಸಲಾಯಿತು. ನಗರದ ಟೀಮ್ ಕಲಾತ್ಮದಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು. ಮೃತಪಟ್ಟ ಪೊಲೀಸ್ ಅಧಿಕಾರಿಗಳ ಕುಟುಂಬದವರನ್ನು ಸನ್ಮಾನಿಸಲಾಯಿತು.
ತುಂಗಾ ಕಲ್ಚರಲ್ ಕ್ಲಬ್‌ನ ಅಧ್ಯಕ್ಷ ಸಂತೋಷ್ ಬಳ್ಳೆಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಹುತಾತ್ಮ ಸಂತೋಷ್ ಅವರ ತಂದೆ ಕೃಷ್ಣಪ್ಪ, ತಾಯಿ ಸಾವಿತ್ರಮ್ಮ, ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ್ದ ಹವಾಲ್ದಾರ್ ರಮೇಶ್, ಮತ್ತಿತರರಿದ್ದರು.
ಇದನ್ನೂ ಓದಿ » NR ಪುರಕ್ಕೆ ತೆರಳಲು ಶಿವಮೊಗ್ಗದಲ್ಲಿ KSRTC ಬಸ್ ಹತ್ತಿ ಕುಳಿತ ಕಡೂರಿನ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200