ಮಳೆ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 114.20 ಮಿ.ಮೀ ಮಳೆಯಾಗಿದೆ. ಜೂನ್ 8ರ ಬೆಳಗ್ಗೆ 8:30 ರಿಂದ ಜೂನ್ 9ರ ಬೆಳಗ್ಗೆ 8:30ರವರೆಗೆ ಉತ್ತಮ ಮುಳೆಯಾಗಿದೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.
ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?
ಶಿವಮೊಗ್ಗ ತಾಲೂಕಿನಲ್ಲಿ 6 ಮಿ.ಮೀ ಮಳೆಯಾಗಿದ್ದರೆ, ಭದ್ರಾವತಿ ತಾಲೂಕಿನಲ್ಲಿ 2.1 ಮಿ.ಮೀ, ತೀರ್ಥಹಳ್ಳಿ ತಾಲೂಕಿನಲ್ಲಿ 21.4 ಮಿ.ಮೀ, ಹೊಸನಗರ ತಾಲೂಕಿನಲ್ಲಿ 29.4 ಮಿ.ಮೀ ಮಳೆಯಾಗಿದೆ. ಸಾಗರ ತಾಲೂಕಿನಲ್ಲಿ 29.2 ಮಿ.ಮೀ, ಸೊರಬ ತಾಲೂಕಿನಲ್ಲಿ 10.1 ಮಿ.ಮೀ ಹಾಗೂ ಶಿಕಾರಿಪುರ ತಾಲೂಕಿನಲ್ಲಿ 16 ಮಿ.ಮೀ ಮಳೆ ದಾಖಲಾಗಿದೆ.

ಇಲ್ಲಿದೆ ಹೋಬಳಿವಾರು ಮಳೆ ವಿವರ
ಶಿವಮೊಗ್ಗ ತಾಲೂಕು: ಶಿವಮೊಗ್ಗ-2 ಹೋಬಳಿಯಲ್ಲಿ 4 ಮಿ.ಮೀ, ಶಿವಮೊಗ್ಗ-1 ರಲ್ಲಿ 6.3 ಮಿ.ಮೀ, ಹಾರನಹಳ್ಳಿಯಲ್ಲಿ 7.5 ಮಿ.ಮೀ, ಹೊಳಲೂರು-1 ರಲ್ಲಿ 2.8 ಮಿ.ಮೀ, ಹೊಳಲೂರು-2 ರಲ್ಲಿ 2.4 ಮಿ.ಮೀ, ಕುಂಸಿ ಹೋಬಳಿಯಲ್ಲಿ 13.8 ಮಿ.ಮೀ, ನಿಧಿಗೆ-1 ರಲ್ಲಿ 3.9 ಮಿ.ಮೀ, ನಿಧಿಗೆ-2 ರಲ್ಲಿ 6.1 ಮಿ.ಮೀ ಹಾಗೂ ಆಯನೂರು ಹೋಬಳಿಯಲ್ಲಿ 10.9 ಮಿ.ಮೀ ಮಳೆಯಾಗಿದೆ.

ಭದ್ರಾವತಿ ತಾಲೂಕು: ಭದ್ರಾವತಿ-1 ರಲ್ಲಿ 2.7 ಮಿ.ಮೀ, ಭದ್ರಾವತಿ-2 ರಲ್ಲಿ 3.7 ಮಿ.ಮೀ, ಹೊಳೆಹೊನ್ನೂರು-1 ರಲ್ಲಿ 2.3 ಮಿ.ಮೀ, ಹೊಳೆಹೊನ್ನೂರು-3 ರಲ್ಲಿ 1.8 ಮಿ.ಮೀ, ಹೊಳೆಹೊನ್ನೂರು-2 ರಲ್ಲಿ 1.4 ಮಿ.ಮೀ ಹಾಗೂ ಕೂಡ್ಲಿಗೆರೆ ಹೋಬಳಿಯಲ್ಲಿ 1.8 ಮಿ.ಮೀ.ನಷ್ಟು ಮಳೆಯಾಗಿದೆ.
ತೀರ್ಥಹಳ್ಳಿ ತಾಲೂಕು: ತೀರ್ಥಹಳ್ಳಿ ಹೋಬಳಿಯಲ್ಲಿ 20.8 ಮಿ.ಮೀ, ಆಗ್ರಹಾರದಲ್ಲಿ 17.9 ಮಿ.ಮೀ, ಆಗುಂಬೆ ಭಾಗದಲ್ಲಿ 35.7 ಮಿ.ಮೀ, ಮಂಡಗದ್ದೆಯಲ್ಲಿ 11.7 ಮಿ.ಮೀ ಹಾಗೂ ಮತ್ತೂರು ಹೋಬಳಿಯಲ್ಲಿ 15.7 ಮಿ.ಮೀ ಮಳೆಯಾಗಿದೆ.
ಹೊಸನಗರ ತಾಲೂಕು: ಹೊಸನಗರ ಕಸಬಾ ಹೋಬಳಿಯಲ್ಲಿ 33.3 ಮಿ.ಮೀ, ಹುಂಚಾ ಹೋಬಳಿಯಲ್ಲಿ 25.9 ಮಿ.ಮೀ, ಕೆರೆಹಳ್ಳಿಯಲ್ಲಿ 20.4 ಮಿ.ಮೀ ಹಾಗೂ ನಗರ ಹೋಬಳಿಯಲ್ಲಿ 36.6 ಮಿ.ಮೀ ನಷ್ಟು ಮಳೆ ದಾಖಲಾಗಿದೆ.
ಸಾಗರ ತಾಲೂಕು: ಸಾಗರ ಕಸಬಾದಲ್ಲಿ 16.6 ಮಿ.ಮೀ, ಆನಂದಪುರದಲ್ಲಿ 19.4 ಮಿ.ಮೀ, ಭಾರಂಗಿಯಲ್ಲಿ 42.3 ಮಿ.ಮೀ, ಆವಿನಹಳ್ಳಿಯಲ್ಲಿ 27.6 ಮಿ.ಮೀ, ಕರೂರು ಹೋಬಳಿ 40.6 ಮಿ.ಮೀ ಹಾಗೂ ತಾಳಗುಪ್ಪ ಹೋಬಳಿಯಲ್ಲಿ 26.7 ಮಿ.ಮೀ ಮಳೆಯಾಗಿದೆ.
ಶಿಕಾರಿಪುರ ತಾಲೂಕು: ಶಿಕಾರಿಪುರ ಕಸಬಾದಲ್ಲಿ 16.6 ಮಿ.ಮೀ, ಅಂಜನಾಪುರದಲ್ಲಿ 15.5 ಮಿ.ಮೀ, ಹೊಸೂರಿನಲ್ಲಿ 13.0 ಮಿ.ಮೀ, ಉಡುಗಣಿಯಲ್ಲಿ 12.7 ಮಿ.ಮೀ ಹಾಗೂ ತಾಳಗುಂದ ಹೋಬಳಿಯಲ್ಲಿ 6.2 ಮಿ.ಮೀ ಮಳೆ ಬಿದ್ದಿದೆ.
ಸೊರಬ ತಾಲೂಕು: ಸೊರಬ ಕಸಬಾದಲ್ಲಿ 12 ಮಿ.ಮೀ, ಆನವಟ್ಟಿಯಲ್ಲಿ 3.4 ಮಿ.ಮೀ, ಚಂದ್ರಗುತ್ತಿಯಲ್ಲಿ 18.1 ಮಿ.ಮೀ, ಜಡೆ ಹೋಬಳಿಯಲ್ಲಿ 3.4 ಮಿ.ಮೀ, ಕುಪ್ಪಗಡ್ಡೆಯಲ್ಲಿ 8 ಮಿ.ಮೀ ಹಾಗೂ ಉಳವಿ ಹೋಬಳಿಯಲ್ಲಿ 13.8 ಮಿ.ಮೀ ಮಳೆ ದಾಖಲಾಗಿದೆ.