ಶಿವಮೊಗ್ಗದ ಲೈವ್.ಕಾಂ | SHIMOGA NEWS | 14 ಜನವರಿ 2022
ಶಿವಮೊಗ್ಗದಲ್ಲಿ ಸಂಕ್ರಾಂತಿ ಹಬ್ಬದ ಸಡಗರ ಕಳೆಗಟ್ಟಿದೆ. ಜನರು ಹಬ್ಬದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಎರಡು ದಿನ ಹಬ್ಬದ ಆಚರಣೆ ಮಾಡಲಾಗುತ್ತಿದ್ದರೂ, ವೀಕೆಂಡ್ ಕರ್ಫ್ಯೂ ಹಿನ್ನೆಲೆ ಇವತ್ತೆ ಹಬ್ಬದ ಖರೀದಿ ಮಾಡಬೇಕಿದೆ.
![]() |
ಶಿವಮೊಗ್ಗದ ಗಾಂಧಿ ಬಜಾರ್, ಶಿವಪ್ಪನಾಯಕ ಪ್ರತಿಮೆ ಮುಂಭಾಗ ಹಬ್ಬದ ಖರೀದಿ ಭರಾಟೆ ಜೋರಿದೆ. ಕಬ್ಬು, ಹೂವು, ಹಣ್ಣು, ಎಳ್ಳು, ಬೆಲ್ಲ, ತರಕಾರಿ ಖರೀದಿ ನಡೆಯುತ್ತಿದೆ. ಇವತ್ತು ಬೆಳಗ್ಗೆಯಿಂದಲೇ ಜನರು ಹಬ್ಬದ ಖರೀದಿ ಮಾಡುತ್ತಿದ್ದಾರೆ.
ಇನ್ನು, ವಿನೋಬನಗರ ಪೊಲೀಸ್ ಚೌಕಿ, ಎಪಿಎಂಸಿ ಮಾರುಕಟ್ಟೆ, ಲಕ್ಷ್ಮೀ ಟಾಕೀಸ್, ವಿದ್ಯಾನಗರ ಸೇರಿದಂತೆ ವಿವಿಧೆಡೆ ಕಬ್ಬು, ಹೂವು, ಹಣ್ಣು, ತರಕಾರಿ ಮಾರಾಟ ಮಾಡಲಾಗುತ್ತಿದೆ. ಇವತ್ತು ಬೆಳಗ್ಗೆಯಿಂದಲೇ ಖರೀದಿ ನಡೆಯುತ್ತಿದೆ.
ಕರ್ಫ್ಯೂ ಭೀತಿ, ಬೆಲೆ ಗಗನಮುಖಿ
ಈ ಭಾರಿ ಸಂಕ್ರಾಂತಿ ಹಬ್ಬವನ್ನು ಕೆಲವರು ಜನವರಿ 14ರಂದು ಆಚರಿಸುತ್ತಿದ್ದಾರೆ. ಇನ್ನೂ ಕೆಲವರು ಜನವರಿ 15ರಂದು ಆಚರಣೆ ಮಾಡಲಿದ್ದಾರೆ. ಆದರೆ ಜ.15ರಂದು ವೀಕೆಂಡ್ ಕರ್ಫ್ಯೂ ಆಗಿರುವುದರಿಂದ ನಾಳೆ ಹಬ್ಬದ ಆಚರಿಸುವವರೂ ಇವತ್ತೇ ಖರೀದಿ ಮಾಡಬೇಕಿದೆ.
ಈ ನಡುವೆ, ಹಬ್ಬದ ಪೂಜಾ ಸಾಮಗ್ರಿಗಳು ಬೆಲೆ ದುಬಾರಿಯಾಗಿದೆ. ಹೂವು, ಹಣ್ಣುಗಳ ಬೆಲೆ ಗಗಮುಖಿಯಾಗಿವೆ. ಆದರೂ ಹಬ್ಬದ ಆಚರಣೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಜನರು ಖರೀದಿಯಲ್ಲಿ ನಿರತವಾಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200