ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 14 ಜನವರಿ 2020
ಸಂಕ್ರಾಂತಿ ಆಚರಣೆಗೆ ನಗರದ ಎಲ್ಲೆಡೆ ಸಡಗರ ಸಂಭ್ರಮದ ಸಿದ್ಧತೆ ನಡೆದಿದೆ. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳು, ಪೂಜಾ ಸಾಮಾಗ್ರಿಗಳನ್ನು ಕೊಳುತ್ತಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂ, ಕಬ್ಬು ಮತ್ತು ಸಿದ್ಧಪಡಿಸಿದ ಎಳ್ಳು, ಬೆಲ್ಲ ಖರೀದಿ ಭರಾಟೆ ಜೋರಾಗಿತ್ತು. ನಗರದ ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ ಮುಂತಾದ ಕಡೆಗಳಲ್ಲಿ ಕಬ್ಬು ಮಾರಾಟ ಜೋರಾಗಿದೆ.
ಯಾವುದಕ್ಕೆ ಎಷ್ಟಿದೆ ಬೆಲೆ?
ಒಂದು ಕೋಲು ಕಬ್ಬಿನ ಬೆಲೆ 20 ರಿಂದ 30 ರೂ., ಹೂವು 40 ರಿಂದ 60 ರೂ., ಸೇಬು 100 ರೂ., ಕಿತ್ತಲೆ 60 ರೂ., ಬಾಳೆಹಣ್ಣು 50 ರೂ., ಸಕ್ಕರೆ ಅಚ್ಚು, ಎಳ್ಳು, ಬೆಲ್ಲದ ದರ ಸ್ವಲ್ಪ ಹೆಚ್ಚಾಗಿದೆ. ಅಭಿವೃದ್ಧಿ ಸಂಕೇತವಾಗಿರುವುದರಿಂದ, ಬೆಲೆ ಹೆಚ್ಚಳವಾಗಿದ್ದರೂ, ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿದೆ.
ಎಲ್ಲೆಲ್ಲಿ ಹೇಗಿರುತೆ ಸಂಭ್ರಮ?
ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿ ಯನ್ನು ಜನ ಸಡಗರದಿಂದ ಆಚರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಲಾಗುತ್ತದೆ. ಕೊಯ್ಲು ಮುಗಿದು ಸುಗ್ಗಿ ಕಾಲ ಇದಾಗಿರುವುದರಿಂದ ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ತಮಿಳು ಸಮಾಜದವರು ಪೊಂಗಲ್(ಸಂಕ್ರಾಂತಿ) ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕಿ, ಒಲೆ ಹೂಡಿ ಹಾಲು ಉಕ್ಕಿಸುವುದು ವಾಡಿಕೆ.
ಸಂಕ್ರಾಂತಿ ದಿನದಂದು ಸೂರ್ಯನು ತನ್ನ ಪಥ ಬದಲಿಸುವುದರಿಂದ ಜೀವನದಲ್ಲಿ ಕೆಟ್ಟ ದಾರಿ ಬಿಟ್ಟು ಒಳ್ಳೆಯ ದಾರಿಯಲ್ಲಿ ಸಾಗಬೇಕೆಂಬುದು ಹಿರಿಯರ ಮಾತಾಗಿದೆ.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವುದೇ ಮಕರ ಸಂಕ್ರಾಂತಿ ವಿಶೇಷವಾಗಿದೆ. ಎಲ್ಲ ದೇವಾಲಯಗಳಲ್ಲೂ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422