ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 20 NOVEMBER 2024 : ವಿವಿಧ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಾನಾ ಕಾರಣಕ್ಕೆ ತೆರವಾಗಿರುವ ಸ್ಥಾನಗಳಿಗೆ ನ.23ರಂದು ಚುನಾವಣೆ ನಡೆಯಲಿದೆ. ಬಹುತೇಕ ಶಾಲೆಗಳಲ್ಲಿಯೇ (School) ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಹಾಗಾಗಿ ಚುನಾವಣೆ ನಡೆಯುವ ದಿನಾಂಕದಂದು ಈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮತದಾನದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸಲಿದ್ದಾರೆ. ಇದರಿಂದ ಜನದಟ್ಟಣೆ ಉಂಟಾಗಲಿದೆ. ಮತದಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಶಿವಮೊಗ್ಗ ಜಿಲ್ಲೆಯ ಮತದಾನ ಕೇಂದ್ರವಿರುವ ಶಾಲೆಗಳಿಗೆ ನ.23 ರ ಶನಿವಾರದಂದು ರಜೆ ಘೋಷಿಸಲಾಗಿದೆ.
ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ಯಾವ್ಯಾವ ಶಾಲೆಗೆ ರಜೆ?
ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಹೊಳಲೂರು ಅಂಗನವಾಡಿ ಕೇಂದ್ರ ಜನತಾ ಕಾಲೋನಿ. ಭದ್ರಾವತಿ ತಾಲೂಕಿನ ಬಾರಂದೂರು ಸ. ಹಿ.ಪ್ರಾ.ಶಾಲೆ (ಉತ್ತರಭಾಗ). ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿ ಸ.ಹಿ.ಪ್ರಾ.ಶಾಲೆ.
ಶಿಕಾರಿಪುರ ತಾಲೂಕಿನ ತರಲಘಟ್ಟ ಸ.ಹಿ.ಪ್ರಾ.ಶಾಲೆ, ಶಿಕಾರಿಪುರದ ಸರ್ಕಾರಿ ಉರ್ದು ಹಿ.ಪ್ರಾ.ಶಾಲೆ ಖಾಜಿ ಮೊಹಲ್ಲ ಹಾಗೂ ಶಿರಾಳಕೊಪ್ಪದ ಸರ್ಕಾರಿ ಉರ್ದು ಹಿ.ಪ್ರಾ.ಶಾಲೆ ಆಜಾದ್ ವೃತ್ತ. ಸಾಗರ ತಾಲೂಕಿನ ಕುದರೂರು ಸ.ಹಿ.ಪ್ರಾ.ಶಾಲೆ ಕೊ.ಸಂ.1 ಈ ಶಾಲೆಗಳಿಗೆ ನ.23 ರಂದು ರಜೆ ಘೋಷಿಸಲಾಗಿದೆ.
ಇದನ್ನೂ ಓದಿ » ಮೈಸೂರಿನಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿ ಲಾಡ್ಜ್ನಲ್ಲಿ ನೇಣಿಗೆ ಶರಣು
School
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422