ಧರ್ಮಸ್ಥಳ ಪ್ರಕರಣ, ಸರ್ಕಾರದ ನಡೆ ವಿರುದ್ಧವೇ ಅನುಮಾನ, SITಗೆ ವಹಿಸಲು ಶಿವಮೊಗ್ಗದಲ್ಲಿ ಪಟ್ಟು

ಶಿವಮೊಗ್ಗ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಯನ್ನು ಸರ್ಕಾರ ಕೂಡಲೆ SITಗೆ ವಹಿಸಬೇಕು. ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (SDPI) ಸಂಘಟನೆ ಆಗ್ರಹಿಸಿದೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನೂ ಓದಿ » ಸಿಗಂದೂರು ಲಾಂಚ್‌ನತ್ತ ಜನರೆ ಬರುತ್ತಿಲ್ಲ, 56 ವರ್ಷದ ಸೇವೆ ನಿಂತೇ ಹೋಗುತ್ತಾ? ಇಲ್ಲಿದೆ ಲಾಂಚ್‌ ಇತಿಹಾಸ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಕಾರ್ಯಕರ್ತರು, ಧರ್ಮಸ್ಥಳದಲ್ಲಿ ಕಳೆದ ನಾಲ್ಕು ದಶಕದಿಂದ ಹಲವು ಅತ್ಯಾಚಾರ, ಕೊಲೆಗಳಾಗಿವೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಸಾಕ್ಷಿ ಸಹಿತ ದೂರು ನೀಡಿದ್ದಾರೆ. ಹಾಗಿದ್ದೂ ಸರ್ಕಾರ ತನಿಖೆಗೆ ಹಿಂದೇಟು ಹಾಕುತ್ತಿದೆ. ಇದು ಅನುಮಾನಕ್ಕೀಡಾಗಿದೆ ಎಂದು ಆರೋಪಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

SDPI-Protest-in-Shimoga-city-near-DC-Office.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮೊಹಮ್ಮದ್‌ ಜೀಲನ್‌ ಖಾನ್‌, ಉಪಾಧ್ಯಕ್ಷ ಸಲೀಂ ಖಾನ್‌, ಪ್ರಮುಖರಾದ ಇಸಾಕ್‌ ಅಹಮದ್‌, ಮನ್ಸೂರ್‌ ಖಾನ್‌, ಝಮೀರ್‌, ಮಝರ್‌ ಅಹ್ಮದ್‌ ಪ್ರತಿಭಟನೆಯಲ್ಲಿದ್ದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

SDPI-Protest-in-Shimoga-city-near-DC-Office.

Leave a Comment