ಶಿವಮೊಗ್ಗದಲ್ಲಿ 10 ಸಾವಿರಕ್ಕೂ ಹೆಚ್ಚು ಜನರಿಂದ ನಡಿಗೆ, ಮೂರು ಕಡೆ ಕಾರ್ಯಕ್ರಮಕ್ಕೆ ಚಾಲನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

ಶಿವಮೊಗ್ಗ | ‘ನಮ್ಮ ನಡಿಗೆ ಶಾಂತಿಯ ಕಡೆಗೆ (SHATHIGAGI NADIGE)’ ಘೋಷವಾಕ್ಯದೊಂದಿಗೆ ಶಿವಮೊಗ್ಗ ನಗರದಲ್ಲಿ ಸೆ.3ರಂದು ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ತಿಳಿಸಿದರು.

Shimoga Nanjappa Hospital

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಧನಂಜಯ ಸರ್ಜಿ (Dr Dhananjaya Sarji) ಅವರು, ಹಲವು ಸಂಘಟನೆಗಳು ಒಗ್ಗೂಡಿ ಈ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ನಡಿಗೆ ಎಲ್ಲಿಂದ? ಎಷ್ಟು ಜನ ಭಾಗಿ?

TODAY LINK NEWS IMAGE

ಓಪನ್ ಮೈಂಡ್ಸ್ ವರ್ಡ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಕುಮಾರ್ ಅವರು ಮಾತನಾಡಿ,  ಸೆ.3ರಂದು ಬೆಳಗ್ಗೆ 10 ಗಂಟೆಗೆ ನಗರದ ಮೂರು ಕಡೆಯಿಂದ ನಡಿಗೆ (SHATHIGAGI NADIGE) ಆರಂಭವಾಲಿದೆ. ಗೋಪಿ ವೃತ್ತ, ಬಸ್ ನಿಲ್ದಾಣ ಮತ್ತು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ನಡಿಗೆ ಕಾರ್ಯಕ್ರಮ ನಡೆಯಲಿದೆ. 60ಕ್ಕೂ ಹೆಚ್ಚು ಸಂಘಟನೆಗಳು, ಶೈಕ್ಷಣಿಕ ಸಂಸ್ಥೆಗಳು ಈ ನಡಿಗೆ ಕಾರ್ಯಕ್ರಮಕ್ಕೆ ಬೆಂಬಲವಾಗಿ ನಿಂತಿವೆ. ವಿವಿಧ ಶಾಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 10 ಸಾವಿರ ಮಂದಿ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸೈನ್ಸ್ ಮೈದಾನದವರೆಗೆ (Science Field) ನಡಿಗೆ ಕಾರ್ಯಕ್ರಮ ನಡೆಯಲಿದೆ. ಮೂರು ಧರ್ಮಗಳ ಧರ್ಮಗುರುಗಳು ಈ ಕಾರ್ಯಕ್ರಮದಲ್ಲಿ ಶಾಂತಿಯ ಸಂದೇಶ ತಿಳಿಸಲಿದ್ದಾರೆ ಎಂದರು.

ಯಾರೆಲ್ಲ ಏನೇನು ಹೇಳಿದರು?

ದೇಶವೊಂದರ ಆರ್ಥಿಕ ನೀತಿಗೆ ತೊಂದರೆ ಉಂಟಾದರೆ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾದ ಪರಿಸ್ಥಿತಿಯೆ ಉದಾಹರಣೆ. ಪ್ರತಿ ಗಲಭೆಯು ಶಿವಮೊಗ್ಗದ ಬೆಳವಣಿಗೆಯನ್ನು ಎರಡು ವರ್ಷ ಹಿಂದಕ್ಕೆ ತಳ್ಳುತ್ತಿದೆ. ಪ್ರವಾಸೋದ್ಯಮ, ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಶಿವಮೊಗ್ಗ ಹೆಸರುವಾಸಿಯಾಗಿದೆ. ಇವೆಲ್ಲ ಕ್ಷೇತ್ರಕ್ಕೂ ಗಲಭೆಯಿಂದ ಪೆಟ್ಟು ಬೀಳಲಿದೆ.ಡಾ.ಧನಂಜಯ ಸರ್ಜಿ, ಮ್ಯಾನೇಜಿಂಗ್ ಟ್ರಸ್ಟಿ, ಸರ್ಜಿ ಫೌಂಡೇಶನ್
10 ಸಾವಿರ ಅಲ್ಲ 10 ಲಕ್ಷ ಜನ ಸೇರಿದರೂ ಒಳ್ಳೆಯದು. ಶಿವಮೊಗ್ಗ ಶಾಂತಿಯುತ ನಗರವಾಗಿ ಉಳಿಯಬೇಕು.ಕೆ.ವಿ.ವಸಂತ ಕುಮಾರ್, ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ
ಶಿವಮೊಗ್ಗದಲ್ಲಿ ಎಲ್ಲರೂ ನೆಮ್ಮದಿಯಿಂದ ಇರಬೇಕು. ಒಂದು ದಿನ ಎಲ್ಲರೂ ಕೆಲಸ ಬಿಟ್ಟು ಶಿವಮೊಗ್ಗದ ಶಾಂತಿಗಾಗಿ ಹೆಜ್ಜೆ ಹಾಕಬೇಕು.ಹೆಚ್.ಆರ್.ಬಸವರಾಜಪ್ಪ, ರಾಜ್ಯಾಧ್ಯಕ್ಷ, ರೈತ ಸಂಘ
ಶಿವಮೊಗ್ಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಎಲ್ಲರೂ ಪಣತೊಡೋಣ. ಒಡೆದ ಮನಸುಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತೇವೆ.ಕೆ.ಟಿ.ಗಂಗಾಧರ್, ರೈತ ಮುಖಂಡರು
ಶಿವಮೊಗ್ಗ ಜಿಲ್ಲೆಯು ಸಮಾಜವಾದದಿಂದ ಕೋಮುವಾದದ ಕಡೆಗೆ ಹೆಜ್ಜೆ ಹಾಕುತ್ತಿರುವುದು ದುರದೃಷ್ಟಕರ. ವೈಚಾರಿಕ ಹಿನ್ನೆಲೆಯ ಜಿಲ್ಲೆಗೆ ಕಳಂಕ ಅಂಟಿಕೊಂಡಿದೆ. ಸಹೋದರರಂತೆ ಶಾಂತಿಯ ಸಂದೇಶ ಸಾರೋಣ.ಗುರುಮೂರ್ತಿ, ಡಿಎಸ್ಎಸ್ ರಾಜ್ಯ ಸಂಚಾಲಕ

Shimoga nanjappa hospital

ಗೋಪಾಲಗೌಡರ ನೆಲೆಬೀಡು, ಸಾಹಿತಿಗಳು ವೈಚಾರಿಕ ಸಂದೇಶ ಸಾರಿದ್ದರು. ಸಹಬಾಳ್ವೆ ಸಹಜೀವನವೆ ಶಿವಮೊಗ್ಗದ ನೆಲದ ಗುಣ. ಅದನ್ನು ಉಳಿಸಿ, ಬೆಳೆಸಬೇಕು.ಕೆ.ಎಲ್.ಅಶೋಕ್, ಜನಶಕ್ತಿ ಸಂಘಟನೆ
ಸಣ್ಣಪುಟ್ಟ ವೈಮನಸಿನಿಂದ ವ್ಯಾಪಾರಿಗಳು, ಉದ್ಯೋಗಿಗಳು, ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನು ಸರಿಪಡಿಸಬೇಕು. ಹಿಂದೂ ಮುಸ್ಲಿಂ ಭಾಯಿ ಭಾಯಿ ಅಂತಾ ತೋರಿಸಬೇಕು.ಪರ್ವೇಜ್, ಟಿಪ್ಪು ಸುಲ್ತಾನ್ ಸೇನೆ
ಸರ್ವ ಜನಾಂಗ ಶಾಂತಿಯ ತೋಟ ಎಂಬುದು ಬರೀ ಘೋಷ ವಾಕ್ಯವಾಗಬಾರದು. ನಗರ ಚನ್ನಾಗಿದ್ದರೆ ದೇಶ ಚನ್ನಾಗಿರುತ್ತದೆ. ಮುಂದಿನ ದಿನ ಬ್ರ್ಯಾಂಡ್ ಶಿವಮೊಗ್ಗವನ್ನು ರೂಪಿಸಬೇಕಿದೆ.ಭರತ್, ಮೆಡಿಕಲ್ ಅಸೋಸಿಯೇಷನ್
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಈ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕಿದೆ. ನಮ್ಮಿಂದ ಶಾಂತಿ ಶುರುವಾಗಬೇಕಿದೆ.ಫಾದರ್ ರೋಷನ್ ಪಿಂಟೋ, ಕ್ರೈಸ್ತ ಧರ್ಮಗುರು
ಕೋಮು ಭಾವನೆ ಕೆರಳಿಸುವವರು ಹುಟ್ಟಿಕೊಂಡಿದ್ದಾರೆ. ಅವರನ್ನು ಪ್ರೀತಿಯಿಂದ ನಮ್ಮ ಕಡೆಗೆ ಕರೆತರಲು ಈ ನಡಿಗೆ.ಹಾಲೇಶಪ್ಪ, ಡಿಎಸ್ಎಸ್ ಸಂಚಾಲಕ
ದೇಶದ ಭವಿಷ್ಯವನ್ನು ನಿರ್ಧರಿಸುವುದು ಮಕ್ಕಳು. ಹಾಗಾಗಿ ಹೈಸ್ಕೂಲ್ ಮಕ್ಕಳನ್ನು ಮಾತ್ರ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳು, ಸ್ವಾಮೀಜಿ, ಫಾದರ್, ಮೌಲ್ವಿಗಳು ಮಾತ್ರ ಶಾಂತಿ ನಡಿಗೆಯಲ್ಲಿ ಇರಲಿದ್ದಾರೆ. 200ಕ್ಕೂ ಹೆಚ್ಚು ಸ್ವಯಂ ಸೇವಕರು, ಮಹಿಳಾ ಸಂಘಟನೆಗಳ ಸ್ವಯಂ ಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಸಕೊಳ್ಳುತ್ತಿದ್ದಾರೆ.ಕೆ.ಪಿ.ಶ್ರೀಪಾಲ್, ವಕೀಲರು

ಇದನ್ನೂ ಓದಿ – ಥೈಲ್ಯಾಂಡ್, ಮಹಾರಾಷ್ಟ್ರದಂತೆ ಹೊಸನಗರದಲ್ಲೂ ಗಣಪತಿ ಮ್ಯೂಸಿಯಂ, ಹೇಗಿದೆ? ಏನೇನೆಲ್ಲ ಇದೆ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 1, 2022

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment