ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 10 ಜನವರಿ 2022
ಎರಡು ದಿನದ ವೀಕೆಂಡ್ ಕರ್ಫ್ಯೂ ಬಳಿಕ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳಿದೆ. ವ್ಯಾಪಾರ ವಹಿವಾಟು ಪುನಾರಂಭವಾಗಿದ್ದು, ಬಿರುಸು ಪಡೆದುಕೊಂಡಿದೆ. ಜನ, ವಾಹನ ಸಂಚಾರ ಕೂಡ ಎಂದಿನಂತೆ ಇದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದ ವೀಕೆಂಡ್ ಕರ್ಫ್ಯೂ ಇವತ್ತು ಬೆಳಗ್ಗೆ 5 ಗಂಟೆಗೆ ಮುಗಿದಿದೆ. ಬೆಳಗ್ಗೆಯಿಂದಲೇ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಶಾಲೆ, ಕಾಲೇಜು, ಕಚೇರಿ, ವ್ಯಾಪಾರ, ವಹಿವಾಟಿ ಪುನಾರಂಭವಾಗಿದೆ.
ಎಲ್ಲಾ ಅಂಗಡಿಗಳು ಓಪನ್
ವೀಕೆಂಡ್ ಕರ್ಫ್ಯೂ ಸಂದರ್ಭ ಅಗತ್ಯ ವಸ್ತುಗಳ ಮಾರಾಟ ಮಾತ್ರ ಅವಾಶವಿತ್ತು. ಕರ್ಫ್ಯೂ ಅವಧಿ ಪೂರ್ಣಗೊಂಡ ಹಿನ್ನೆಲೆ ಇವತ್ತು ಎಲ್ಲಾ ಬಗೆಯ ಅಂಗಡಿಗಳ ಬಾಗಿಲು ತೆಗೆದಿದ್ದು ವ್ಯಾಪಾರ ನಡೆಯುತ್ತಿದೆ.
ಗಾಂಧಿ ಬಜಾರ್, ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ದುರ್ಗಿಗುಡಿ, ವಿನೋಬನಗರ ಸೇರಿದಂತೆ ಎಲ್ಲೆಡೆ ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದೆ.
ಶಾಲೆ, ಕಾಲೇಜು, ಕಚೇರಿ
ನಗರದಾದ್ಯಂತ ಶಾಲೆ, ಕಾಲೇಜು, ಕಚೇರಿಗಳು ಪುನಾರಂಭವಾಗಿದೆ. ಹಾಗಾಗಿ ಬೆಳಗ್ಗೆಯಿಂದ ವಿದ್ಯಾರ್ಥಿಗಳು, ಉದ್ಯೋಗಿಗಳ ಓಡಾಟವಿದೆ. ಬಹುತೇಕರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಶಾಲೆ, ಕಾಲೇಜುಗಳು, ಕಚೇರಿಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ವಾಹನ, ಬಸ್ಸುಗಳ ಸಂಚಾರ
ಇನ್ನು, ಕರ್ಫ್ಯೂ ತೆರವಾದ ಹಿನ್ನೆಲೆ ಶಿವಮೊಗ್ಗದ ರಸ್ತೆಗಳಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತೆರವು ಮಾಡಲಾಗಿದೆ. ಹಾಗಾಗಿ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಮತ್ತೊಂದೆಡೆ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರವು ಎಂದಿನಂತೆ ಇದೆ. ಬಸ್ಸುಗಳಲ್ಲು ಪ್ರಯಾಣಿಕರ ಸಂಖ್ಯೆಯು ಏರಿಕೆಯಾಗಿದೆ. ಆಟೋ, ಟ್ರಾಕ್ಸ್ ಸಂಚಾರವು ಪುನಾರಂಭವಾಗಿದೆ.
ಮುಂದಿನ ಶುಕ್ರವಾರ ರಾತ್ರಿ 10 ಗಂಟೆಯಿಂದ ಮತ್ತೊಮ್ಮೆ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಶನಿವಾರ, ಭಾನುವಾರದಂದು ವೀಕೆಂಡ್ ಕರ್ಫ್ಯೂ ಇರಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422