SHIVAMOGGA LIVE NEWS | 27 DECEMBER 2024
ಫಟಾಫಟ್ ಸುದ್ದಿ : ಶಿವಮೊಗ್ಗ ನಗರದಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್ ನ್ಯೂಸ್ ಅಪ್‌ಡೇಟ್.
![]() |
ಮೂವರು ಉದ್ಯಮಿಗಳಿಗೆ ಪ್ರಶಸ್ತಿ
ಪತ್ರಿಕಾ ಭವನ : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಮೂವರಿಗೆ ಹೆಮ್ಮೆಯ ವಾಣಿಜ್ಯೋದ್ಯಮಿ ಪ್ರಶಸ್ತಿ ನೀಡಲಾಗುತ್ತಿದೆ. ಡಿಸೆಂಬರ್ 28ರಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದರು.
Shivamogga Live
ಸುತ್ತೂರು ಜಾತ್ರೆ, ಶಿವಮೊಗ್ಗಕ್ಕೆ ಪ್ರಚಾರ ರಥ
ಪತ್ರಿಕಾ ಭವನ : ಮೈಸೂರಿನ ಸುತ್ತೂರಿನಲ್ಲಿ ಜನವರಿ 26ರಿಂದ 31ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯ ಪ್ರಚಾರ ರಥ ಡಿಸೆಂಬರ್ 27ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದೆ. ಮಲವಗೊಪ್ಪದ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ರಥವನ್ನು ಸ್ವಾಗತಿಸಲಾಗುತ್ತದೆ ಎಂದು ಸಮಿತಿಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Shivamogga Live
ವಿಷ ಸೇವಿಸಿದ್ದ ಯುವತಿ ಸಾವು
ಮೆಗ್ಗಾನ್ ಆಸ್ಪತ್ರೆ : ಮೊಬೈಲ್ ನೋಡದಂತೆ ತಾಯಿ ಬುದ್ದಿ ಹೇಳಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದ ಪದವಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಹಾರ್ನಹಳ್ಳಿ ಗ್ರಾಮದ ಧನುಶ್ರೀ (20) ಮೃತಳು. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga Live
ಹೊಸ ವರ್ಷಾಚರಣೆ, ಪೊಲೀಸರಿಂದ ಮೀಟಿಂಗ್
ಡಿಎಆರ್ ಸಭಾಂಗಣ : ಹೊಸ ವರ್ಷಾಚರಣೆ ಹಿನ್ನೆಲೆ ಪೊಲೀಸ್ ಇಲಾಖೆ ವತಿಯಿಂದ ಹೋಂ ಸ್ಟೇ, ಹೊಟೇಲ್, ಲಾಡ್ಜ್, ರೆಸಾರ್ಟ್ ಮಾಲೀಕರು ಮತ್ತು ವ್ಯವಸ್ಥಾಪಕರ ಸಭೆ ನಡೆಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ಸೂಚನೆ ನೀಡಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸುದ್ದಿಯ ಪೂರ್ತಿ ವಿವರ ಓದಲು ಇಲ್ಲಿ ಕ್ಲಿಕ್ ಮಾಡಿ » ಹೊಸ ವರ್ಷಾಚರಣೆ, ಶಿವಮೊಗ್ಗ ಪೊಲೀಸರಿಂದ ಮಹತ್ವದ ಮೀಟಿಂಗ್, 8 ಪಾಯಿಂಟ್ ಸೂಚನೆ, ಏನದು?
Shivamogga Live
ಅಧಿಕಾರಿಗಳಿಗೆ 2 ತಿಂಗಳ ಗಡುವು
ಜಿಲ್ಲಾ ಪಂಚಾಯಿತಿ : ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ. ಜಿಲ್ಲೆಯ ಹೆದ್ದಾರಿಗಳಲ್ಲಿ 2016ರಿಂದ ಇಲ್ಲಿಯವರೆಗೆ ಗುರುತಿಸಲಾದ ಒಟ್ಟು 51 ಬ್ಲಾಕ್ ಸ್ಪಾಟ್‌ಗಳಲ್ಲಿ (ಅಪಘಾತ ಸ್ಥಳ) ಚಾಲಕರಿಗೆ ಇರುವ ತೊಂದರೆಗಳನ್ನು 2 ತಿಂಗಳಲ್ಲಿ ನಿವಾರಿಸಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ ಎನ್.ಹೇಮಂತ್ ಅಧಿಕಾರಿಗಳಿಗೆ ಸೂಚನೆ. ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಇದ್ದರು.
Shivamogga Live
ಆಸ್ಪತ್ರೆಯ ಶೌಚಾಲಯದಲ್ಲಿ ಮಗುವಿನ ಶವ
ಮೆಗ್ಗಾನ್ ಆಸ್ಪತ್ರೆ : ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಮಗುವಿನ ತಾಯಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಹಿಳೆಯೊಬ್ಬಳು ತನಗೆ ಮನೆಯಲ್ಲೇ ಡಿಲೆವರಿಯಾಗಿದೆ ಎಂದು ಮಗುವನ್ನ ಹಿಡಿದುಕೊಂಡು ಬಂದಿದ್ದಳು. ಆಕೆಯದ್ದೆ ಮಗು ಎಂದು ಹೇಳಲಾಗುತ್ತಿದೆ. ಆ ಮಹಿಳೆ ಕೇಸ್ ಶೀಟ್ ಸಹಿತ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಲಾಗಿದೆ.
Shivamogga Live
ಈಜಲು ತೆರಳಿದ್ದ ಬಾಲಕ ಮುಳುಗಿ ಸಾವು
ಮಂಡ್ಲಿ : ತುಂಗಾ ಚಾನಲ್‌ನಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕಲ್ಲೂರು ಮಂಡ್ಲಿ ಬಳಿ ಚಾನಲ್‌ನಲ್ಲಿ ಹಳೆ ಮಂಡ್ಲಿ ವಾಸಿ ಮೋಹಿತ್ (15) ಸಾವನ್ನಪ್ಪಿದ್ದಾನೆ. ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ಘಟನೆ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
Shivamogga Live
ಶಿವಮೊಗ್ಗದಲ್ಲಿ ಬಂಗಾರಪ್ಪ ಪುಣ್ಯ ಸ್ಮರಣೆ
ಈಡಿಗರ ಭವನ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 13ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಆರ್ಯ ಈಡಿಗರ ಸಂಘದ ವತಿಯಿಂದ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಲಾಯಿತು. ಸಂಘದ ಪ್ರಮುಖರಾದ ಶ್ರೀಧರ್ ಹುಲ್ತಿಕೊಪ್ಪ, ಜಿ.ಡಿ.ಮಂಜುನಾಥ್, ಎಸ್.ಸಿ.ರಾಮಚಂದ್ರ, ಎನ್.ಪಿ.ಧರ್ಮರಾಜ್, ಕಾಗೋಡು ರಾಮಪ್ಪ ಸೇರಿದಂತೆ ಹಲವರು ಇದ್ದರು.
Shivamogga Live
ಇದನ್ನೂ ಓದಿ » ಇವತ್ತು ಶಾಲೆ, ಕಾಲೇಜಿಗೆ ರಜೆ, ಏಳು ದಿನ ಶೋಕಾಚರಣೆ
ಅಮಿತ್ ಷಾ ಪ್ರತಿಕೃತಿ ದಹನ
ಜಿಲ್ಲಾಧಿಕಾರಿ ಕಚೇರಿ : ಡಾ. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಹೇಳಿಕೆ ಖಂಡಸಿ ಪ್ರೊ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇದಕ್ಕೂ ಮೊದಲು ಮಹಾವೀರ ವೃತ್ತದಲ್ಲಿ ಅಮಿತ್ ಷಾ ಪ್ರತಿಕೃತಿ ದಹಿಸಲಾಯಿತು. ಜಿಲ್ಲಾ ಸಂಚಾಲಕ ಚಿನ್ನಯ್ಯ, ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಸೇರಿದಂತೆ ಹಲವರು ಇದ್ದರು.
Shivamogga Live
ರಾಯಲ್ ಎನ್‌ಫೀಲ್ಡ್ ಬೈಕ್ ಕಳವು
ವಿದ್ಯಾನಗರ : ಇಲ್ಲಿನ ರಾಮಯ್ಯ ಲೇಔಟ್‌ನ ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನವಾಗಿದೆ. ಕಾರ್ತಿಕ್ ಎಂಬುವವರಿಗೆ ಸೇರಿದ ಬೈಕ್ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದು ಬೆಳಗಾಗುವುದರಲ್ಲಿ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಕಾರ್ತಿಕ್ ಬಳಿಕ ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Shivamogga Live
ಇದನ್ನೂ ಓದಿ » ಶಿವಮೊಗ್ಗದ ಸಂಸದ, ಸಚಿವ, ಶಾಸಕರಿಂದ ಸಂತಾಪ, ಯಾರೆಲ್ಲ ಏನೆಲ್ಲ ಹೇಳಿದ್ದಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200