SHIVAMOGGA LIVE NEWS, 16 JANUARY 2025
ಶಿವಮೊಗ್ಗ : ನಗರದಲ್ಲಿ (city) ಇಡೀ ದಿನ ಏನೇನಾಯ್ತು? ಇಲ್ಲಿದೆ ಫಟಾಫಟ್ ಸುದ್ದಿಗಳು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ವ್ಯಾಪಾರಸ್ಥರ ಮೇಲೆ ದುಷ್ಕರ್ಮಿಗಳು ಗೂಂಡಾ ವರ್ತನೆ ತೋರಿಸಿ ಆತಂಕ ಮೂಡಿಸಿದ್ದಾರೆ. ಮತ್ತೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಎಸ್.ಪಿ.ಗೆ ಮನವಿ ಮಾಡಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ. – ವಿಜಯ ಕುಮಾರ್ ದಿನಕರ್, ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷಗಾಂಧಿ ಬಜಾರ್ ವರ್ತಕರಿಂದ ಮೆರವಣಿಗೆ
ಗಾಂಧಿ ಬಜಾರ್ : ಕಸ್ತೂರಬಾ ರಸ್ತೆಯಲ್ಲಿ ಕಚೋರಿ ಮಾರಾಟಗಾರನ ಮೇಲೆ ನಾಲ್ವರಿಂದ ಹಲ್ಲೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು, ಘಟನೆ ಖಂಡಿಸಿ ಗಾಂಧಿ ಬಜಾರ್‌ನಲ್ಲಿ ಅಂಗಡಿ ಬಂದ್ ಮಾಡಿ ವರ್ತಕರು ಪ್ರತಿಭಟನೆ ನಡೆಸಿದರು. ಗಾಂಧಿ ಬಜಾರ್‌ನಿಂದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಕಸ್ತೂರ ಬಾ ರಸ್ತೆಯಲ್ಲಿ ಸಂಜೆ 6 ಗಂಟೆಗೆ ಕಚೋರಿ ಮಾರಾಟಗಾರನ ಮೇಲೆ ಹಲ್ಲೆಯಾಗಿದೆ. ಸುಳ್ಳು ವಿಳಾಸ ಹೇಳಿದ್ದೀಯ ಎಂದು ಕಚೋರಿ ವ್ಯಾಪಾರಿ ಜೊತೆಗೆ ಆರೋಪಿಗಳು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ. ನಾಲ್ವರ ಪೈಕಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಬೀಟ್ ಹೆಚ್ಚಳ ಮಾಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ. – ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿಒಬ್ಬ ಅರೆಸ್ಟ್, ಮೂವರಿಗೆ ಶೋಧ
ಜಿಲ್ಲಾ ಪೊಲೀಸ್ ಕಚೇರಿ : ಕಸ್ತೂರಬಾ ರಸ್ತೆಯಲ್ಲಿ ಕಚೋರಿ ಮಾರಾಟಗಾರನ ಮೇಲಿನ ಹಲ್ಲೆ ಪ್ರಕರಣದಲ್ಲಿ ಓರ್ವ ಆರೋಪಿಯನ್ನ ಬಂಧಿಸಲಾಗಿದೆ. ಮದನ್ ಅಲಿಯಾಸ್ ಮಂಜುನಾಥ್ ಬಂಧಿತ. ಉಳಿದ ಮೂವರನ್ನು ಶೀಘ್ರ ಬಂಧಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.
ಬಂಧಿತ ನಸ್ರು ಹಿಂದೆ ದೊಡ್ಡ ಗುಂಪು ಇದೆ ಎಂಬ ಅನುಮಾನವಿದೆ. ಸೂಕ್ತ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಮುಸ್ಲಿಮರನ್ನು ಮಾತ್ರ ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ. ಹಿಂದೂಗಳು ಮತ ನೀಡಿದ್ದಾರೆ ಎಂಬುದನ್ನು ಮರೆತಿದ್ದಾರೆ. ಸರ್ಕಾರಕ್ಕೆ ಗೋ ಮಾತೆಯ ಶಾಪ ತಟ್ಟಲಿದೆ. – ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ‘ರಾಜ್ಯ ಸರ್ಕಾರಕ್ಕೆ ತಟ್ಟಲಿದೆ ಶಾಪ’
ಪತ್ರಿಕಾ ಭವನ : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲು ಕೊಯ್ದ ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಶಾಪ ತಟ್ಟಲಿದೆ. ಬಂಧಿತ ನಸ್ರು ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಹೇಳಿದ್ದಾರೆ. ಸರ್ಕಾರ ಹೇಳಿದಂತೆ ಪೊಲೀಸರು ಹೇಳಿಕೆ ನೀಡಿದ್ದಾರೆ. ಇದರಿಂದ ಪೊಲೀಸರು ಕೂಡ ಕರ್ಮ ಅನುಭವಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಲಂಚ ಕೊಡದೆ ಕೆಲಸ ಆಗುತ್ತಿಲ್ಲ. ಹಾಗಾಗಿ ಜನರು ಅಧಿಕಾರಿಗಳಿಗೆ ಒಂದೊಂದು ಅಡ್ಡ ಹೆಸರು ಇಟ್ಟಿದ್ದಾರೆ. ಒಬ್ಬ ಅಧಿಕಾರಿಗೆ ಕೊಕ್ಕೆ ಎಂದು ಹೆಸರಿಟ್ಟಿದ್ದಾರೆ. ಕೊಕ್ಕೆ ಎಂದರೇನು ಎಂದು ಅಧಿಕಾರಿಗಳೆ ತಿಳಿಸಬೇಕು. – ಕೆ.ಬಿ.ಪ್ರಸನ್ನ ಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ‘ಪಾಲಿಕೆಯಲ್ಲಿ ಹಗಲು ದರೋಡೆ’
ಪತ್ರಿಕಾ ಭವನ : ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕ ಕೆಲಸಗಳು ಸುಲಭಕ್ಕೆ ಆಗುತ್ತಿಲ್ಲ. ಪ್ರತಿ ಹಂತದಲ್ಲಿ ಅಧಿಕಾರಿಗಳಿಂದ ಹಗಲು ದರೋಡೆ ನಡೆಯುತ್ತಿದೆ. ಪ್ರದೇಶಿಕ ಆಯುಕ್ತರ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನಂದನ್, ಶಶಿಧರ್‌ಗೆ ನುಡಿ ನಮನ
ಪತ್ರಿಕಾ ಭವನ : ಇಂಡಿಯನ್ ಎಕ್ಸ್‌ಪ್ರೆಸ್ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಮತ್ತು ಪಬ್ಲಿಕ್ ಟಿವಿ ವರದಿಗಾರ ಶಶಿಧರ್ ಅವರಿಗೆ ಪ್ರೆಸ್ ಟ್ರಸ್ಟ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಅವರ ನೆನಪಿನಲ್ಲಿ ಎರಡು ಸಸಿಗಳನ್ನು ನೆಡಲಾಯಿತು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ರವಿಕುಮಾರ್, ಉಪಾಧ್ಯಕ್ಷ ವೈದ್ಯನಾಥ್, ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಇದ್ದರು.
ಸ್ವಾಮಿ ವಿವೇಕಾನಂದ ಯುವಕರಲ್ಲಿ ಹುರುಪು, ಹುಮ್ಮಸ್ಸು ತುಂಬಿ, ರಾಷ್ಟ್ರಪ್ರೇಮದ ಪ್ರಚೋದಕರಾಗಿ, ದಮನಿತರ ಆಶಾಕಿರಣವಾಗಿ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಆದರ್ಶ, ಸಿದ್ಧಾಂತ ಅಳವಡಿಸಿಕೊಂಡು ಉತ್ತಮ ಭವಿಷ್ಯ ಮತ್ತು ಸಮಾಜ ಕಟ್ಟಲು ಬದ್ಧರಾಗೋಣ. – ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದಮಠದಲ್ಲಿ ಯುವ ಸಮ್ಮೇಳನಕ್ಕೆ ಚಾಲನೆ
ಕಲ್ಲಗಂಗೂರು : ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿವೇಕ ಸ್ಪೂರ್ತಿ ಯುವ ಸಮ್ಮೇಳನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಸ್ವಾಮಿ ವಿನಯಾನಂದ ಸರಸ್ವತಿ ಸಾನ್ನಿಧ್ಯ ವಹಿಸಿದ್ದರು. ಶಾಸಕಿ ಶಾರದಾ ಪೂರ್ಯಾನಾಯ್ಕ್ ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲಿ ಅನುಭಾವ ಸಮ್ಮೇಳನ
ಬೆಕ್ಕಿನಕಲ್ಮಠ : ಶ್ರೀ ಗುರುಬಸವ ಮಹಾಸ್ವಾಮೀಜಿ ಅವರ 113ನೇ ಪುಣ್ಯ ಸ್ಮರಣೋತ್ಸವ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.16, 17 ಮತ್ತು 18 ರಂದು ನಗರದ ಶ್ರೀ ಬೆಕ್ಕಿನಕಲ್ಮಠದ ಶ್ರೀ ಗುರುಬಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಳುಗಡೆ ಸಂತ್ರಸ್ತರ ಸಮಸ್ಯೆ, ಇಂದು ಚರ್ಚೆ
ಶಿವಮೊಗ್ಗ : ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರ ‘ಡಿ ನೋಟಿಫಿಕೇಷನ್ ಪ್ರಕರಣದ ಬಗ್ಗೆ ನವದೆಹಲಿಯಲ್ಲಿ ಜ.16ರಂದು ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪೂರ್ವ ಭಾವಿ ಸಭೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಬಿ.ಎ.ರಮೇಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಂತಿಯುತವಾಗಿ ಪರೀಕ್ಷೆ ನಡೆಸುವಂತೆ ಸೂಚನೆ
ಜಿಲ್ಲಾಧಿಕಾರಿ ಕಚೇರಿ : ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳ ಗ್ರೂಪ್ ‘ಬಿʼ ವೃಂದದ ಹುದ್ದೆಗಳ ನೇಮಕಾತಿ ಸಂಬಂಧ ಜ.19 ಮತ್ತು 25 ರಂದು ಪರೀಕ್ಷೆಗಳನ್ನು ನಡೆಯಲಿದೆ. ಈ ಹಿನ್ನೆಲ ಪರೀಕ್ಷೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳ ಜೊತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಸಭೆ ನಡೆಸಿದರು. ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಇದನ್ನೂ ಓದಿ » ಶಿವಮೊಗ್ಗ ನಂದನ್, ಶಶಿಧರ್‌ಗೆ ನುಡಿ ನಮನ, ಇಬ್ಬರ ಹೆಸರಿನಲ್ಲಿ ಸಸಿ ನೆಟ್ಟು ಗೌರವ