ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MAY 2021
ಶಿವಮೊಗ್ಗದಲ್ಲಿ ಕರೋನ ಸೋಂಕಿತರ ಸಂಖ್ಯೆಯಲ್ಲಿ ತುಸು ಇಳಿಕೆಯಾಗಿದೆ. ಇವತ್ತು 692 ಮಂದಿ ಸೋಂಕು ತಗುಲಿದೆ.
ಇವತ್ತು ಒಟ್ಟು ಸೋಂಕಿತರ ಪೈಕಿ ಶಿವಮೊಗ್ಗ ತಾಲೂಕಿನವರು 260 ಮಂದಿ ಇದ್ದಾರೆ. ಭದ್ರಾವತಿಯ 124, ತೀರ್ಥಹಳ್ಳಿಯ 51, ಶಿಕಾರಿಪುರದ 78, ಸಾಗರದ 53, ಹೊಸನಗರದ 36, ಸೊರಬದ 60, ಇತರೆ ಜಿಲ್ಲೆಯಿಂದ ಬಂದಿರುವ 30 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
ಇನ್ನು, ಕೋವಿಡ್‍ನಿಂದಾಗಿ 13 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ 768 ಮಂದಿ ಕರೋನಾಗೆ ಮೃತರಾದಂತಾಗಿದೆ.
ಮತ್ತೊಂದೆಡೆ ಇವತ್ತು 652 ಮಂದಿ ಕೋವಿಡ್‍ನಿಂದ ಗುಣವಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 7373ಕ್ಕೆ ತಲುಪಿದೆ.
ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]