ಸದ್ಯದಲ್ಲೇ ಶಿವಮೊಗ್ಗ ಕೋರ್ಟ್‌ ಕಲಾಪಗಳು ಯು ಟ್ಯೂಬ್‌ನಲ್ಲಿ ನೇರ ಪ್ರಸಾರ, ಯಾವಾಗ ಶುರು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ : ಹೈಕೋರ್ಟ್‌ ಕಲಾಪಗಳ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಕಲಾಪಗಳನ್ನು ಇನ್ಮುಂದೆ ಲೈವ್‌ (Live) ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿ ನ್ಯಾಯಾಲಯದಲ್ಲಿನ ವಿಚಾರಣೆಗಳನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದಾಗಿದೆ.

ಶಿವಮೊಗ್ಗ ನ್ಯಾಯಾಲಯದ ಮೂರು ಕೋರ್ಟ್‌ ಹಾಲ್‌ಗಳಲ್ಲಿನ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಗುತ್ತದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೊಠಡಿ, ಮುಖ್ಯ ನ್ಯಾಯಿಕ ನ್ಯಾಯಾಧೀಶರ ಹಾಲ್‌ ಮತ್ತು ಪ್ರಧಾನ ಸಿವಿಲ್‌ ನ್ಯಾಯಾಧೀಶರ ಹಾಲ್‌ನ ಕಲಾಪಗಳನ್ನು ನೇರ ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಲೈವ್‌ಗೆ ಸಿದ್ಧತೆ ಹೇಗಿದೆ?

ಮೂರು ಕೊಠಡಿಗಳಲ್ಲಿ ನೇರ ಪ್ರಸಾರಕ್ಕೆ ಅಗತ್ಯವಿರುವ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಟಿವಿ, ಕ್ಯಾಮರಾ, ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಲೈವ್‌ ಸ್ಟ್ರೀಮಿಂಗ್‌ಗೆ ಲಿಂಕ್‌ ಮಾಡುವುದು ಬಾಕಿ ಇದೆ.

Shimoga-judge-Majunath-Naik
ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್.

ನೇರ ಪ್ರಸಾರಕ್ಕೆ ನಮ್ಮ ಕೊಠಡಿಯಲ್ಲಿ ಅಗತ್ಯ ಸಿದ್ಧತೆ ಮಾಡಲಾಗಿದೆ. ಈಗಾಗಲೆ ಉಪಕರಣಗಳನ್ನು  ಅಳವಡಿಸಿದ್ದಾರೆ. ಸದ್ಯದಲ್ಲೆ ಕಲಾಪ ನೇರ ಪ್ರಸಾರ ಆರಂಭವಾಗಲಿದೆ.

– ನ್ಯಾ. ಮಂಜುನಾಥ್‌ ನಾಯಕ್‌, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

Shivamogga-Court-Balaraja-Urs-Road

ನೇರ ಪ್ರಸಾರ ವೀಕ್ಷಣೆ ಹೇಗೆ?

ಕರ್ನಾಟಕ ಹೈಕೋರ್ಟ್‌ ಕಲಾಪಗಳು ಈಗಾಗಲೇ ಯುಟ್ಯೂಬ್‌ನಲ್ಲಿ ಲೈವ್‌ ಪ್ರಸಾರವಾಗುತ್ತಿದೆ. ಇದೇ ಲಿಂಕ್‌ನಲ್ಲಿಯೇ ಜಿಲ್ಲಾ ಕೋರ್ಟುಗಳ ಕಲಾಪಗಳು ಕೂಡ ನೇರ ಪ್ರಸಾರ ಮಾಡಲು ಯೋಜಿಸಲಾಗಿದೆ. ಲೈವ್‌ ಲಿಂಕ್‌ ಸ್ಥಾಪನೆ ಮಾಡಿ ನೇರ ಪ್ರಸಾರ ಮಾಡುವುದು ಬಾಕಿ ಇದ್ದು, ಸದ್ಯದಲ್ಲೇ ಶಿವಮೊಗ್ಗ ಕೋರ್ಟ್‌ ಕಲಾಪಗಳು ಲೈವ ಸ್ಟ್ರೀಮ್‌ ಆಗುವ ಸಾಧ್ಯತೆ ಇದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ರಾಜ್ಯದಲ್ಲಿ ANF ವಿಸರ್ಜನೆ, ನಕ್ಸಲ್‌ ಪೀಡಿತ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment