SHIMOGA NEWS, 3 OCTOBER 2024 : ನಾಡಹಬ್ಬ ದಸರಾಗೆ (Dasara) ಶಿವಮೊಗ್ಗದಲ್ಲಿ ಚಾಲನೆ ಸಿಕ್ಕಿದೆ. ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರು ದಸರಾ ಮಹೋತ್ಸವ ಉದ್ಘಾಟಿಸಿದರು. ಇದಕ್ಕೂ ಮುನ್ನ ನಾಡ ದೇವಿಯ ಅದ್ಧೂರಿ ಮೆರವಣಿಗೆ ನಡೆಯಿತು. ದಸರಾ ಮಹೋತ್ಸದ ಇಂದಿನ ಪ್ರಮುಖ ಹೈಲೈಟ್ ಇಲ್ಲಿವೆ.
» ಪಾಲಿಕೆಯಲ್ಲಿ ನಾಡದೇವಿಗೆ ಪೂಜೆ
ಮಹಾನಗರ ಪಾಲಿಕೆ ಆವರಣದಲ್ಲಿ ನಾಡ ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ, ಆಯುಕ್ತೆ ಕವಿತಾ ಯೋಗಪ್ಪನವರ್, ಪಾಲಿಕೆ ಮಾಜಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
» ನಾಡ ದೇವಿಯ ಅದ್ಧೂರಿ ಮೆರವಣಿಗೆ
ಪಾಲಿಕೆ ಆವರಣದಿಂದ ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದವರಗೆ ನಾಡ ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭ ಪಾಲಿಕೆಯ ಅಧಿಕಾರಿಗಳು, ಮಾಜಿ ಸದಸ್ಯರು ವಾದ್ಯಗಳಿಗೆ ನೃತ್ಯ ಮಾಡಿದರು.
» ನಾಡ ದೇವಿಗೆ ಮಂಗಳಾರತಿ
ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇಗುಲದ ಮುಂಭಾಗ ಮೆರವಣಿಗೆ ಪೂರ್ಣಗೊಳ್ಳುತ್ತಿದ್ದಂತೆ ಚಾಮುಂಡೇಶ್ವರಿ ದೇವಿಗೆ ಮಂಗಳಾರತಿ ಬೆಳಗಲಾಯಿತು. ಸಂಸದ ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಸೇರಿ ಹಲವರು ಇದ್ದರು.
» ದೇಗುಲದಲ್ಲಿ ಬೊಂಬೆ ಪೂಜೆ
ದಸರಾ ಅಂಗವಾಗಿ ದೇಗುಲದಲ್ಲಿ ಬೊಂಬೆಗಳನ್ನು ಕೂರಿಸಲಾಗಿದೆ. ಗಣ್ಯರು ಆಗಮಿಸುತ್ತಿದ್ದಂತೆ ಬೊಂಬೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋಟೆ ಚಂಡಿಕಾ ದುರ್ಗಾಪರಮೇಶ್ವರಿಯನ್ನು ಪೂಜಿಸಲಾಯಿತು. ದಸರಾ ಉದ್ಘಾಟಕ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಸೇರಿದ ಹಲವರು ಇದ್ದರು ಈ ಸಂದರ್ಭ ಹಾಜರಿದ್ದರು.
» ದಸರಾ ಉದ್ಘಾಟಿಸಿದ ಸಿನಿಮಾ ಡೈರೆಕ್ಟರ್
ದೇವಸ್ಥಾನದ ಆವರಣದಲ್ಲಿ ಅಂಬಾರಿ ಮತ್ತು ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೀಪ ಬೆಳಗಿ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಉದ್ಘಾಟನೆ ನೆರವೇರಿಸಿದರು. ಸಹಚೇತನ ನಾಟ್ಯಾಲಯದ ವಿದ್ಯಾರ್ಥಿಗಳು ದಸರಾ ಗೀತೆಗೆ ನೃತ್ಯ ಮಾಡಿದರು. ಮಹಿಳೆಯರಿಗೆ ಬಾಗಿನ ನೀಡಲಾಯಿತು.
» ‘ಕೆಟ್ಟದ್ದರ ನಾಶವೇ ಹಬ್ಬದ ಉದ್ದೇಶʼ
ಉದ್ಘಾಟನೆ ಬಳಿಕ ಮಾತನಾಡಿದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ಹಬ್ಬದ ಆಚರಣೆಗಳ ಹಿಂದೆ ಉತ್ತಮ ಉದ್ದೇಶ ಇದೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ಇದೆ. ಕೆಟ್ಟದ್ದನ್ನು ನಾಶ ಮಾಡಬೇಕು ಎಂಬುದು ಈ ಆಚರಣೆಗಳ ಉದ್ದೇಶ. ರಾವಣ ಅತ್ಯಂತ ಪ್ರಚಂಡ, ಉತ್ತಮ ಆಡಳಿತಗಾರ, ಶಿವಭಕ್ತ. ಆದರೆ ಆತನಿಗೆ ಅಹಂಕಾರವಿತ್ತು. ಒಂಭತ್ತು ಒಳ್ಳೆಯ ಗುಣವಿದ್ದರೂ ಅಹಂಕಾರ ಇದ್ದರೆ ಪ್ರಯೋಜನವಿಲ್ಲ. ರಾಮನಿಂದ ರಾವಣನ ನಾಶವಾಗುತ್ತದೆ. ರಾವಣನ ದಹನ ಕೆಟ್ಟದ್ದರ ನಾಶದ ಸಂಕೇತವಾಗಿದೆ ಎಂದರು.
» ಯಾರೆಲ್ಲ ಏನೇನು ಹೇಳಿದರು?
ಶಿವಮೊಗ್ಗದಲ್ಲಿ ದಸರಾ ಕಾರ್ಯಕ್ರಮಗಳು
ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ದಸರಾದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಕವಿಗೋಷ್ಠಿ, ಪುಟಾಣಿ ಮಕ್ಕಳಿಂದ ನೃತ್ಯ ವೈಭವ. ದಾಕ್ಷಾಯಿಣಿ ರಾಜ್ ಕುಮಾರ್ ಮತ್ತು ಸಂಗಡಿಗರು, ವಿದ್ಯಾ ಎಸ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಈವರೆಗಿನ ಟಾಪ್ 10 ಸುದ್ದಿಗಳು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200