ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | FM RADIO | 21 ಏಪ್ರಿಲ್ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಎಫ್.ಎಂ 90.8 ಸಮುದಾಯ ರೇಡಿಯೋ ಕೇಂದ್ರ ವಿನೂತನ ರೀತಿಯಲ್ಲಿ ಏಪ್ರಿಲ್ 22ರಂದು ತನ್ನ ಪ್ರಸಾರವನ್ನು ಆರಂಭಿಸಲಿದೆ ಎಂದು ನಿಲಯದ ನಿರ್ದೇಶಕ ಜಿ.ಎಲ್. ಜನಾರ್ದನ ಹೇಳಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಡಿಯೋ ಶಿವಮೊಗ್ಗ, ಸಮುದಾಯ ಬಾನುಲಿ ಕೇಂದ್ರ, ಕೊಡಚಾದ್ರಿ ಸಮಗ್ರ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಪ್ರಸಾರ ಆರಂಭಿಸಲಾಗಿದೆ ಎಂದು ತಿಳಿಸಿದರು.
ಮಾರ್ಚ್ ತಿಂಗಳಿನಿಂದಲೇ FM RADIO ಕೇಂದ್ರ ಪ್ರಾಯೋಗಿ ಪ್ರಸಾರವಾಗುತ್ತಿದೆ. ಏಪ್ರಿಲ್ 22ರಿಂದ ಇದರ ಅಧಿಕೃತ ಪ್ರಸಾರವು ಆರಂಭವಾಗಲಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ ಎಂದರು.
ಶಿವಮೊಗ್ಗ ರೇಡಿಯೋ ವಿಶೇಷ ತರಂಗಾಂತರಗಳು ಮತ್ತು ಆನ್ ಲೈನ್ ಮೂಲಕ ನೇರವಾಗಿ ಪ್ರಸಾರವಾಗಲಿದೆ. ಆನ್ ಲೈನ್ ಮೂಲಕವಾದರೆ ವಿಶ್ವದ ಯಾವುದೇ ಭಾಗದಿಂದ ಕೇಳಬಹುದು. ನೇರವಾಗಿ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಇದರ ಪ್ರಸಾರವಾಗಲಿದೆ. ಹಾಗಾಗಿ ರೇಡಿಯೋ ಶಿವಮೊಗ್ಗ್ ಎಫ್.ಎಂ ಆಪ್ ಡೌನ್ ಲೋಡ್ ಮಾಡಿಕೊಂಡು ಕೇಳಬೇಕು ಎಂದರು.
ಇದನ್ನೂ ಓದಿ | ಶಿವಮೊಗ್ಗದ ಮೊದಲ ಎಫ್.ಎಂ ರೇಡಿಯೋ ಆರಂಭ, ಹೇಗಿದೆ ಸ್ಟೂಡಿಯೋ? ಏನೆಲ್ಲ ಕಾರ್ಯಕ್ರಮ ಪ್ರಸಾರವಾಗುತ್ತೆ?
ಸಮಗ್ರ ಶಿಕ್ಷಣ, ಸಾಂಸ್ಕೃತಿಕ ವೈಭವ, ಜಾನಪದ, ಸಂಗೀತ, ಕ್ರೀಡೆ, ಕೃಷಿ, ವಾಣಿಜ್ಯ, ಉದ್ಯೋಗ, ಕುಶಲಕಲೆ, ಕೈಗಾರಿಕೆ, ಶಿಕ್ಷಣ, ಪರಿಸರ ಮುಂತಾದ ವಿಷಯಗಳ ಕುರಿತು ವಿಶಿಷ್ಠ ರೀತಿಯ ಕಾರ್ಯಕ್ರಮಗಳನ್ನು ಶಿವಮೊಗ್ಗ ರೇಡಿಯೋ ಪ್ರಸಾರ ಮಾಡಲಿದೆ. ಆ ಮೂಲಕ ಹೊಸ ಪ್ರತಿಭೆಗಳಿಗೆ ಸ್ಫೂರ್ತಿ ನೀಡಲಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ವಿವಿಧ ಸೇವೆ ಮಾಡುತ್ತಿರುವ ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೆಗಳು, ಸಹಕಾರ ಸಂಸ್ಥೆಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ತಮ್ಮ ಸೇವೆಗಳ ಕುರಿತು ಜಾಹೀರಾತು ನೀಡುವ ಮೂಲಕ ಸಹಕಾರ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರೊ. ಚಂದ್ರಶೇಖರ್ ಎ.ಎಸ್., ಡಾ. ಹೂವಯ್ಯಗೌಡ, ಬಿ. ಗುರುಪ್ರಸಾದ್, ನಿವೃತ್ತ ತಹಸೀಲ್ದಾರ್ ಸಿ.ಎಸ್. ಚಂದ್ರಶೇಖರ್ ಇದ್ದರು.
ಇದನ್ನೂ ಓದಿ |ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರು ಫೈನಲ್, ಮುಖ್ಯಮಂತ್ರಿಯಿಂದ ಘೋಷಣೆ