ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದ ರಾಘವೇಂದ್ರ, ಸರ್ಕಾರದ ಜಾಗಗಳಲ್ಲಿ ಆರ್‌ಎಸ್‌ಎಸ್ ಶಾಖೆ ನಡೆಸಲು ನಿರ್ಬಂಧಿಸಬೇಕು ಎಂದು ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರ ಮನಸಿನಲ್ಲಿ ಎನಿದೆಯೋ ಗೊತ್ತಿಲ್ಲ. ದೇಶದಲ್ಲಿ ಎರಡ್ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ತುಷ್ಟೀಕರಣದ ರಾಜಕೀಯಕ್ಕಾಗಿ ಈ ಪತ್ರ ಬರೆದಂತೆ ಕಾಣುತ್ತಿದೆ. ಕಾಂಗ್ರೆಸ್‌ನ ಅಧಿಕಾರಕ್ಕೆ ಈ ಪತ್ರ ಕೊನೆಯ ಮೊಳೆ ಹೊಡೆಯುಲಿದೆ ಎಂದರು.
ಪ್ರಚಾರಕ್ಕಾಗಿ ಸಿಎಂಗೆ ಪತ್ರ
ಕೇವಲ ಪ್ರಚಾರಕ್ಕಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೆ ದೊಡ್ಡ ಅಪರಾಧ ಮಾಡಿದಂತಾಗಲಿದೆ. ಇದನ್ನು ಸಮಾಜ ಕೂಡ ಕ್ಷಮಿಸುವುದಿಲ್ಲ. ಆರ್‌ಎಸ್‌ಎಸ್‌ಗೆ 100 ವರ್ಷವಾಗಿದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುತ್ತಿದೆ. ಈ ಸಂಘಟನೆ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರಿ ಟೋಪಿ, ಗಣವೇಷವೆ ದಿಕ್ಸೂಚಿ
ಶಾಸಕ ಮುನಿರತ್ನ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರಿ ಟೋಪಿ ಎಂದು ಕರೆದಿದ್ದಾರೆ. ಇದು ಅವರ ಅಧಿಕಾರದ ಅಹಂಕಾರ ತೋರಿಸುತ್ತದೆ. ವೈಯಕ್ತಿಕ ಜಿದ್ದಾಜಿದ್ದಿಯಿಂದ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಅಧಿಕಾರ ಶಾಶ್ವತವಲ್ಲ. ಕಾಂಗ್ರೆಸ್ ಆಡಳಿತದ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ಸಂಸದ ರಾಘವೇಂದ್ರ ಟೀಕಿಸಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ RSS ಪಥ ಸಂಚಲನ, ಹೇಗಿತ್ತು? ಇಲ್ಲಿವೆ ಸಾಲು ಸಾಲು ಫೋಟೊ ಸಹಿತ ಮಾಹಿತಿ
ಇದೆ ಕರಿ ಟೋಪಿ, ಇದೆ ಗಣವೇಷ ಧರಿಸಿ, ಲಾಠಿ ಹಿಡಿದು ಸ್ವಯಂ ಸೇವಕರು ದೇಶಕ್ಕಾಗಿ ಏನೆಲ್ಲ ಕೆಲಸ ಮಾಡಿದ್ದಾರೆ ಅನ್ನುವುದು ಎಲ್ಲರಿಗು ಗೊತ್ತಿದೆ. ಇದು ನಮ್ಮ ದೇಶಕ್ಕೆ ದಿಕ್ಸೂಚಿಯಾಗಿದೆ. ಇದೆ ಗಣವೇಷ ಕಾಂಗ್ರೆಸ್ ಪಕ್ಷಕ್ಕೆ ಅಂತ್ಯ ಹಾಡಲಿದೆ. ಈ ಕೂಡಲೆ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ರಾಘವೇಂದ್ರ ಆಗ್ರಹಿಸಿದರು.
ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರಸ್ತೆ, ಟೀ ಕುಡಿಯಲು ತೆರಳಿದ್ದ ಸೆಕ್ಯೂರಿಟಿಯ ಜೀವ ಕಸಿದ ಕಾರು, ಆಗಿದ್ದೇನು?