ಶಿವಮೊಗ್ಗ: RSS ಶತಮಾನೋತ್ಸವ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಇವತ್ತು ವೈಭವದ ಪಥಸಂಚಲನ ನಡೆಯಿತು. ಸುಮಾರು ಐದು ಸಾವಿರ ಕಾರ್ಯಕರ್ತರು ಪಥ ಸಂಚಲನದಲ್ಲಿ (Route March) ಪಾಲ್ಗೊಂಡಿದ್ದರು.
ಕೋಟೆ ರಸ್ತೆಯ ಜೈನ್ ಸಮುದಾಯ ಭವನದ ಬಳಿ ಸಂಘಟನೆಯ ಧ್ವಜ ಪ್ರಮುಖ ಕೋ.ನಂ.ರವೀಂದ್ರ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಕ್ಕೆ ನಮನ ಸಲ್ಲಿಸಿದ ಬಳಿಕ ಪಥ ಸಂಚಲನ ಆರಂಭವಾಯಿತು.
ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಮೂರ್ತಿ ಪ್ರತಿಮೆ, ಎ.ಎ.ಸರ್ಕಲ್, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ಸರ್ಕಲ್, ಜೈಲ್ ರಸ್ತೆ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಿತು. ಮೆರವಣಿಗೆ ಹಾದಿ ಉದ್ದಕ್ಕು ರಸ್ತೆಯ ಇಕ್ಕೆಲದಲ್ಲಿ ಸಾರ್ವಜನಿಕರು ನಿಂತಿದ್ದರು. ರಂಗೋಲೆ ಹಾಕಿ, ಪುಷ್ಪವೃಷ್ಟಿ ಮಾಡಿ, ಆರತಿ ಬೆಳಗಿ ಪಥ ಸಂಚಲನವನ್ನು ಸ್ವಾಗತಿಸಿದರು.
ಇಡೀ ಪಥ ಸಂಚಲನದ ಫೋಟೊ ಆಲ್ಬಂ ಇಲ್ಲಿದೆ
ಗಾಂಧಿ ಬಜಾರ್‌ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಜೈಲ್ ರಸ್ತೆಯಲ್ಲಿ ಸಾಗಿದ ಪಥ ಸಂಚಲನಪಥ ಸಂಚಲನದಲ್ಲಿ ಬ್ಯಾಂಡ್ ತಂಡಇತಿಹಾಸ ಪುರುಷರ ವೇಷ ಧರಿಸಿದ್ದ ಮಕ್ಕಳುಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವರಿಗೆ ಆರತಿ ಬೆಳಗಿದ ಮಹಿಳೆಯರು. ವಿವಿಧೆಡೆ ಪುಷ್ಪವೃಷ್ಟಿ ಮಾಡಲಾಯಿತು.ಜೈಲ್ ರಸ್ತೆಯಲ್ಲಿ ಘೋಷಣೆ ಕೂಗಿಸಿದ ಮಹಿಳೆ. ರಸ್ತೆಯ ಇಕ್ಕೆಲದಲ್ಲಿ ನಿಂತು ಪಥ ಸಂಚಲನ ವೀಕ್ಷಣೆ.ಜೈಲ್ ರಸ್ತೆಯ ಉದ್ದಕ್ಕು ವಿಶೇಷ ರಂಗೋಲೆ ಹಾಕಲಾಗಿತ್ತು.ಕಂಕುಳಲ್ಲಿ ಮಗು ಇರಿಸಿಕೊಂಡು ಪಥ ಸಂಚಲನದಲ್ಲಿ ಭಾಗವಹಿಸಿದ್ದವರಿಗೆ ಪುಪ್ಪವೃಷ್ಟಿ ಮಾಡಿದ ಮಹಿಳೆ. ಪುಷ್ಪವೃಷ್ಟಿಗೆ ಸಿದ್ಧವಾಗಿದ್ದ ಸಾರ್ವಜನಿಕರುಮೆರವಣಿಗೆಯಲ್ಲಿ ಭಾಗವಹಿಸಿದ್ದ ಬ್ಯಾಂಡ್ ತಂಡಜೈಲ್ ರಸ್ತೆಯಲ್ಲಿ ಛತ್ರಪತಿ ಶಿವಾಜಿ, ಭಾರತ ಮಾತೆ, ಯೋಧನ ವೇಷಧಾರಿ ಮಕ್ಕಳುಪಥ ಸಂಚಲನದಲ್ಲಿ ಭಾಗವಹಿಸಿದ್ದ ಸಂಸದ ರಾಘವೇಂದ್ರಗಣವೇಷದಲ್ಲಿ ಕಾಣಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪಥ ಸಂಚಲನದಲ್ಲಿ ಸಂಸದ ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪಪಥ ಸಂಚಲನದಲ್ಲಿ ಟ್ರಂಫೆಟ್, ಕೊಳಲು ನುಡಿಸುತ್ತಿರುವುದು. ಕೈ ಗಾಯವಾಗಿದ್ದರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತಜೈಲ್ ರಸ್ತೆಯಲ್ಲಿ ಧ್ವಜದ ಮೆರವಣಿಗೆಪಥ ಸಂಚಲನದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಮುಖಂಡ ದೀನದಯಾಳುಪಥ ಸಂಚಲನದಲ್ಲಿ ಬಹುದೂರ ನಡೆಯಲಾಗದ ಮಗನನ್ನು ಹೊತ್ತು ಸಾಗಿದ ತಾಯಿ. ಪಥ ಸಂಚಲನದಲ್ಲಿ ಭಾಗವಹಿಸಿದ್ದ ಮಕ್ಕಳುಪಥ ಸಂಚಲನಕ್ಕೆ ಪೊಲೀಸ್ ಬಂದೋಬಸ್ತ್. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಎಎಸ್‌ಪಿ ಕಾರ್ಯಪ್ಪ ಇದ್ದರು.