ಶಿವಮೊಗ್ಗ : ಆಡಳಿತಾತ್ಮಕ ಹಿತದೃಷ್ಟಿ ಮತ್ತು ಸಾರ್ವಜನಿಕ ಸ್ನೇಹಿಯಾಗಿ ಸೇವೆ ಒದಗಿಸಲು ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಮೂರು ವಿಭಾಗಗಳಾಗಿ (Divisions) ವಿಂಗಡಿಸಲಾಗಿದೆ. ಇವತ್ತಿನಿಂದಲೇ ವಲಯ ಕಚೇರಿಗಳು ಕಾರ್ಯಾರಂಭ ಮಾಡಲಿವೆ.
ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಉತ್ತರ, ದಕ್ಷಿಣ ಮತ್ತು ಕೇಂದ್ರ ವಲಯ ಎಂದು ವಿಂಗಡಿಸಲಾಗಿದೆ. ಮೂರು ವಿಭಾಗಕ್ಕು ಪ್ರತ್ಯೇಕವಾಗಿ ಕಚೇರಿಗಳನ್ನು ಸ್ಥಾಪಿಸಲಾಗಿದೆ.
ಎಲ್ಲೆಲ್ಲಿ ಮೂರು ಕಚೇರಿ ಸ್ಥಾಪನೆ?
ವಲಯ 1 : ವಿನೋಬನಗರದ ಶುಭಮಂಗಳ ಕಲ್ಯಾಣ ಮಂದಿರದ ಬಳಿ ಪಾಲಿಕೆ ಕಟ್ಟಡದಲ್ಲಿ ಉತ್ತರ ವಲಯ ಕಚೇರಿ.
ವಲಯ 2 : ಗೋಪಿ ವೃತ್ತದ ಬಳಿ ಪಾಲಿಕೆಗೆ ಸೇರಿದ ದೇವರಾಜ ಅರಸು ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯಲ್ಲಿ ಕೇಂದ್ರ ವಲಯ ಕಚೇರಿ ಸ್ಥಾಪಿಸಲಾಗಿದೆ.
ವಲಯ 3 : ಇಮಾಮ್ ಬಾಡಾ ಬಳಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿಪಡಿಸಲಾದ ಕಟ್ಟಡದಲ್ಲಿ ದಕ್ಷಿಣ ವಲಯ ಕಚೇರಿ.
ಕಚೇರಿಗಳ ವಿಂಗಡಣೆಗೆ ಕಾರಣವೇನು?
ಈವರೆಗೆ ಮಹಾನಗರ ಪಾಲಿಕೆ ಆಡಳಿತವು ಕೇಂದ್ರಿಕೃತವಾಗಿತ್ತು. ಶಿವಮೊಗ್ಗದ ಪಾಲಿಕೆ ಕಚೇರಿಯಲ್ಲಿಯೇ ಕೆಲಸ ಕಾರ್ಯ ನಡೆಯುತ್ತಿತ್ತು. ಇದರಿಂದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿತ್ತು. ಅಲ್ಲದೆ ಸಾರ್ವಜನಿಕರು ಕೂಡ ದೂರದ ಬಡಾವಣೆಗಳಿಂದ ಪಾಲಿಕೆಗೆ ಬರಬೇಕಿತ್ತು. ಇದೆ ಕಾರಣಕ್ಕೆ ವಲಯ ಕಚೇರಿಗಳನ್ನು ಆರಂಭಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಈಗ ಮೂರು ವಲಯಗಳನ್ನು (Divisions) ವಿಂಗಡಿಸಿ, ಕಚೇರಿ ಆರಂಭಿಸಲಾಗಿದೆ.

ಕಮಿಷನರ್ ನೇತೃತ್ವದಲ್ಲಿ ವಿಂಗಡಣೆ
ಮಹಾನಗರ ಪಾಲಿಕೆ ಕಮಿಷನರ್ ಕವಿತಾ ಯೋಗಪ್ಪನವರ್ ಅವರ ಆಡಳಿತಾವಧಿಯಲ್ಲಿ ಪಾಲಿಕೆ ಕಚೇರಿಯನ್ನು ವಿಂಗಡಿಸಲಾಗಿದೆ. ಹಲವು ಬಾರಿ ಒತ್ತಡ ಕೇಳಿ ಬಂದ ಹಿನ್ನೆಲೆ ಸಾಧಕ, ಬಾಧಕಗಳನ್ನು ಪರಿಶೀಲಿಸಿ ವಿಂಗಡಿಸಲು (Divisions) ಅನುಮತಿಸಿದ್ದಾರೆ.
ವಲಯವಾರು ವಿಂಗಡನೆಗೆ ಕಾನೂನಿನಲ್ಲಿ ಅವಕಾಶವಿದೆ. ಈಗಿನ ಮಹಾನಗರ ಪಾಲಿಕೆಯಲ್ಲಿ ಎಲ್ಲ ಸೇವೆಗಳು ಕೇಂದ್ರೀಕೃತವಾಗಿವೆ. ವಲಯ ವಿಂಗಡನೆಯಿಂದ ಜನರ ಅಲೆದಾಟ ತಪ್ಪಲಿದೆ.
– ಡಾ. ಕವಿತಾ ಯೋಗಪ್ಪನವರ್, ಮಹಾನಗರ ಪಾಲಿಕೆ ಕಮಿಷನರ್
ಈ ಕಚೇರಿಗಳಲ್ಲಿ ಏನೆಲ್ಲ ಸೇವೆ ಲಭ್ಯ?
ವಲಯ ಕಚೇರಿಗಳಲ್ಲಿ ಕಂದಾಯ ಪಾವತಿ, ಎಂಜಿನಿಯರಿಂಗ್ ಸೇರಿದಂತೆ ಹಲವು ವಿಭಾಗದ ಸೇವೆಗಳು ಸ್ಥಳೀಯವಾಗಿ ಸಾರ್ವಜನಿಕರಿಗೆ ಸಿಗಲಿವೆ. ಈ ಕಚೇರಿಗಳಿಗೆ ಪಾಲಿಕೆಯ ಕಂದಾಯ ಅಧಿಕಾರಿಗಳೆ ಉಸ್ತುವಾರಿಯಾಗಿ ಕೆಲಸ ಮಾಡಲಿದ್ದಾರೆ.
ಪ್ರತಿ ವಲಯಕ್ಕು ಕಂದಾಯಾಧಿಕಾರಿ, ಸಹಾಯಕ ಕಂದಾಯಾಧಿಕಾರಿ, ಶಾಖಾ ವ್ಯವಸ್ಥಾಪಕ, ರಾಜಸ್ವ ನಿರೀಕ್ಷಕರು, ವಿಷಯ ನಿರ್ವಾಹಕರು, ಕರ ವಸೂಲಿಗಾರರನ್ನು ನೇಮಿಸಲಾಗಿದೆ. ಪ್ರತಿ ವಲಯದಲ್ಲಿ ವಾರ್ಡ್‌ಗಳ ಸಂಖ್ಯೆಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಕೆಲಸಕ್ಕೆ ನಿಯೋಜಿಸಲಾಗಿದೆ.
ಇದನ್ನೂ ಓದಿ » ಧಗಧಗ ಹೊತ್ತಿ ಉರಿಯಲಿದೆ ಗಾಂಧಿ ಪಾರ್ಕ್, ಕೆಲವರಿಗಿದು ಓಪನ್ ಬಾರ್, ಹೇಗಿದೆ ಒಳಗಿನ ಸ್ಥಿತಿ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200