ಶಿವಮೊಗ್ಗ LIVE
ಶಿವಮೊಗ್ಗ: ಸರ್ಕಾರದ ಅನುದಾನದಲ್ಲಿ ನಿರ್ಮಿಸಿ, ಮಹಾನಗರ ಪಾಲಿಕಗೆ ಹಸ್ತಾಂತರವಾದ ನಗರದ ಹಲವು ವಾಣಿಜ್ಯ ಸಂಕೀರ್ಣಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿಲ್ಲ. ಅದರಿಂದ ಬಾಡಿಗೆ ರೂಪದಲ್ಲಿ ಪಾಲಿಕೆಗೆ ಬರಬೇಕಿದ್ದ ಕೋಟ್ಯಂತರ ರುಪಾಯಿ (11.51 crore Loss) ನಷ್ಟವಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಆರೋಪಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂತೇಶ್, ಮಳಿಗೆಗಳ ಹಸ್ತಾಂತರವಾಗದೆ ಪಾಲಿಕೆಗೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದು ಆರೋಪಿಸಿದರು.
ಕಾಂತೇಶ್ ಏನೇನು ಹೇಳಿದರು? ಇಲ್ಲಿದೆ ಪಾಯಿಂಟ್ಸ್
ಪಾಯಿಂಟ್ 1: ಶಿವಪ್ಪನಾಯಕ ಹೂವಿನ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ, ಗಾಂಧಿನಗರ ವಾಣಿಜ್ಯ ಸಂಕೀರ್ಣ ಹಸ್ತಾಂತರವಾಗಿ 2 ವರ್ಷ ಕಳೆದಿವೆ. ಗಾರ್ಡನ್ ಏರಿಯಾದಲ್ಲಿನ ವಾಣಿಜ್ಯ ಸಂಕೀರ್ಣ ಹಸ್ತಾಂತರವಾಗಿ 5 ವರ್ಷವಾಗಿದೆ. ಇವುಗಳಲ್ಲಿನ ಒಟ್ಟು 229 ಮಳಿಗೆಗಳ ಬಾಡಿಗೆ ಮತ್ತು ಮುಂಗಡ ಹಣದಿಂದ ಅಂದಾಜು ₹11.51 ಕೋಟಿ ಆದಾಯ ಬರುತ್ತಿತ್ತು.
ಇದನ್ನೂ ಓದಿ » ಗ್ಯಾರಂಟಿ ಯೋಜನೆಗಳು ಚುನಾವಣೆ ಲಕ್ಷ್ಮಿ, ಶಿವಮೊಗ್ಗದಲ್ಲಿ ವಿಜಯೇಂದ್ರ ವಿಶ್ಲೇಷಣೆ, ಏನಿದು?
ಪಾಯಿಂಟ್ 2: ಮಳಿಗೆಗಳನ್ನು ಹಂಚಿಕೆ ಮಾಡದ ಕಾರಣ ಪಾಲಿಕೆಗೆ ನಷ್ಟವಾಗಿದೆ. ಖಾಸಗಿ ಬಸ್ ನಿಲ್ದಾಣ ಪಕ್ಕದ ಕಟ್ಟಡ ನಿರ್ಮಾಣವೂ ಪೂರ್ಣವಾಗಿದೆ. ಅವುಗಳನ್ನು ಬೀದಿ ಬದಿ ವ್ಯಾಪಾರಿಗಳಿಗೆ ಹಸ್ತಾಂತರಿಸಿಲ್ಲ.

ಪಾಯಿಂಟ್ 3: ಮಹಾನಗರ ಪಾಲಿಕೆ ಕೂಡಲೆ ಈ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಜನವರಿ 2ರಂದು ರಾಷ್ಟ್ರಭಕ್ತರ ಬಳಗ ಪಾಲಿಕೆಗೆ ಮುತ್ತಿಗೆ ಹಾಕುವ ಜತೆಗೆ ಅಹೋರಾತ್ರಿ ಧರಣಿ ನಡೆಸಲಿದೆ. ಶಾಸಕರು ಈ ಬಗ್ಗೆ ಗಮನ ಹರಿಸಬೇಕು.
ಮೋಹನ್ ಜಾದವ್, ಸುವರ್ಣಾ ಶಂಕರ್, ರಾಜಣ್ಣ, ಆ.ಮ. ಪ್ರಕಾಶ್, ಶಂಕ್ರಾನಾಯ್ಕ, ಕುಬೇರಪ್ಪ, ನಾಗರಾಜ್ ಮತ್ತಿತರರಿದ್ದರು.
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





