ಶಿವಮೊಗ್ಗ LIVE
ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ವರ್ಸಸ್ ಗೋವಾ ರಣಜಿ ಕ್ರಿಕೆಟ್ (Cricket) ಟೆಸ್ಟ್ ಪಂದ್ಯಾವಳಿಯ ಮೊದಲ ದಿನದ ಆಟ ಮುಕ್ತಾಯವಾಗಿದೆ. ಕರ್ನಾಟಕ ತಂಡ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿದೆ. ಗೋವಾ ತಂಡದ ಪರ ಅರ್ಜುನ್ ತೆಂಡುಲ್ಕರ್ ಮೂರು ವಿಕೆಟ್ ಪಡೆದು ಬೌಲಿಂಗ್ ವಿಭಾಗದಲ್ಲಿ ಗಮನ ಸೆಳೆದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಯಾರೆಲ್ಲ ಎಷ್ಟು ರನ್ ಗಳಿಸಿದರು?
ಕರ್ನಾಟಕ ತಂಡದ ನಿಕಿನ್ ಜೋಸ್ 3, ಮಯಾಂಕ್ ಅಗರ್‌ವಾಲ್ 28, ಕೆ.ಎಲ್.ಶ್ರೀಜಿತ್ 0, ಸ್ಮರಣ್.ಆರ್ 3, ಅಭಿನವ್ ಮನೋಹರ್ 37 ರನ್ ಗಳಿಸಿ ಔಟ್ ಆಗಿದ್ದಾರೆ. ಕರುಣ್ ನಾಯರ್ 86 ರನ್, ಶ್ರೇಯಸ್ ಗೋಪಾಲ್ 48 ರನ್ ಗಳಿಸಿ ಸದ್ಯ ಕರ್ನಾಟಕ ತಂಡಕ್ಕೆ ಆಸರೆಯಾಗಿದ್ದಾರೆ. ನಾಳೆ ಈ ಜೋಡಿ ಮತ್ತಷ್ಟು ರನ್ ಗಳಿಸಿ ಗೋವಾ ತಂಡಕ್ಕೆ ದೊಡ್ಡ ಚಾಲೆಂಜ್ ಒಡ್ಡುವ ಸಾಧ್ಯತೆ ಇದೆ.
ಜೊತೆಯಾಟದ ಬಲ, ಸ್ಕೋರ್ ಹೆಚ್ಚಳ
ಕರ್ನಾಟಕ ಟೀಮ್‌ಗೆ ಸದ್ಯ ಕರುಣ್ ನಾಯರ್ ಮತ್ತು ಶ್ರೇಯಸ್ ಗೋಪಾಲ್ ಜೊತೆಯಾಟ ಅತಿದೊಡ್ಡ ಆಸರೆಯಾಗಿದೆ. ಇವರ ಪಾರ್ಟ್‌ನರ್‌ಶಿಪ್‌ನಲ್ಲಿ ತಂಡಕ್ಕೆ 94 ರನ್ ಬಂದಿವೆ. ಇದಕ್ಕು ಮುನ್ನ ಅಭಿನವ್ ಮನೋಹರ್ ಮತ್ತು ಕರುಣ್ ನಾಯರ್ ಜೊತೆಯಾಟ ತಂಡದ ಸ್ಕೋರ್ ಹೆಚ್ಚಳ ಮಾಡಿತ್ತು. ಆದರೆ 44ನೇ ಓವರ್‌ನಲ್ಲಿ ಅರ್ಜುನ್ ತೆಂಡುಲ್ಕರ್ ಬೌಲಿಂಗ್‌ನಲ್ಲಿ ಅಭಿನವ್ ಮನೋಹರ್ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಹಾದಿ ಹಿಡಿದರು. ಈ ಜೋಡಿ 63 ರನ್ ಗಳಿಸಿತ್ತು.

ಮೂರು ವಿಕೆಟ್ ಕಸಿದ ತೆಂಡುಲ್ಕರ್
ಗೋವಾ ತಂಡ ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿತು. ಪಂದ್ಯದ ಆರಂಭದಲ್ಲಿ ಫೀಲ್ಡರ್‌ಗಳು ಕರ್ನಾಟಕ ತಂಡದ ರನ್ ಗಳಿಕೆಗೆ ಮೂಗುದಾರ ಹಾಕಿದ್ದರು. 26 ಓವರ್‌ನ ಒಳಗೆ ಕರ್ನಾಟಕದ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಸಿದು, ಕೇವಲ 65 ರನ್‌ಗಳನ್ನು ನೀಡಿದ್ದರು. ಈ ಮೂಲಕ ಕರ್ನಾಟಕ ತಂಡದಲ್ಲಿ ಒತ್ತಡ ಹೆಚ್ಚಿಸಿದ್ದರು. ಅರ್ಜುನ್ ತೆಂಡುಲ್ಕರ್ ಮೂರು ವಿಕೆಟ್, ಕೌಶಿಕ್ ಎರಡು ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು.

ಪಿಚ್ ತೇವಾಂಶ, ಮ್ಯಾಚ್ ವಿಳಂಬ
ಕಳೆದ ರಾತ್ರಿ ಶಿವಮೊಗ್ಗದಲ್ಲಿ ಮಳೆಯಾದ್ದರಿಂದ ಕ್ರೀಡಾಂಗಣದಲ್ಲಿ ತೇವಾಂಶವಿತ್ತು. ಹಾಗಾಗಿ ಉದ್ಘಾಟನೆ ಮತ್ತು ಮ್ಯಾಚ್ ಆರಂಭ ವಿಳಂಬವಾಯಿತು. ಬೆಳಗ್ಗೆ 9.30ಕ್ಕೆ ಆರಂಭವಾಗಿದ್ದ ಪಂದ್ಯ ಬೆಳಗ್ಗೆ 11 ಗಂಟೆಗೆ ಶುರುವಾಯಿತು. ಇಂದು ರಾತ್ರಿಯು ಮಳೆಯಾಗುವ ಸಾಧ್ಯತೆ ಇದೆ. ಇದು ನಾಳಿನ ಪಂದ್ಯದ ಮೇಲೆ ಪರಿಣಾಮ ಬೀರಬಹುದಾಗಿದೆ.

ರಣಜಿ ಪಂದ್ಯ ವೀಕ್ಷಣೆಗೆ ಜನರಿಗೆ ಉಚಿತ ಅವಕಾಶವಿದೆ. ಇವತ್ತು ಬೆಳಗ್ಗೆಯಿಂದಲು ಜನರು ನವುಲೆಯ ಕೆಎಸ್‌ಸಿಎ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸುತ್ತಿದ್ದರು. ಮೊಬೈಲ್‌ನಲ್ಲಿ ವಿಡಿಯೋ, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ » ಪೊಲೀಸ್ ಕಂಡು ಎಸ್ಕೇಪ್ ಆಗಲು ಯತ್ನ, ಹಿಡಿದು ವಿಚಾರಿಸಿದಾಗ ಹೊರಬಿತ್ತು ಸಾಲು ಸಾಲು ಕೇಸ್‌ಗಳ ವಿಷಯ
Ranji Cricket
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





