ಅಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಮ್ಮೇಳನಕ್ಕೆ ಚಾಲನೆ, ಭಾಷಣದಲ್ಲಿ ಏನೇನೆಲ್ಲ ಪ್ರಸ್ತಾಪಿಸಿದರು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 1 FEBRUARY 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA | ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Sahitya Sammelana) ಇವತ್ತು ಚಾಲನೆ ಸಿಕ್ಕಿದೆ. ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಇದಕ್ಕೂ ಮೊದಲು ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರ ಮೆರವಣಿಗೆ ನಡೆಸಲಾಯಿತು.

010223 Sahitya Sammelana Lakshmana Kodase in SMG

ಎರಡು ದಿನದ ಸಾಹಿತ್ಯ ಸಮ್ಮೇಳನದ (Sahitya Sammelana) ಉದ್ಘಾಟನೆ ಬಳಿಕ ಭಾಷಣ ಮಾಡಿದ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಹಲವು ಪ್ರಮುಖ ವಿಚಾರ ಪ್ರಸ್ತಾಪಿಸಿದರು.

 ಸಿಎಂಗಳ ಹೆಸರಲ್ಲಿ ಅಧ್ಯಯನ ಪೀಠ 

ಶಿವಮೊಗ್ಗ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಈ ಪೈಕಿ ಕಡಿದಾಳ್ ಮಂಜಪ್ಪ ಅವರ ಹೆಸರಿನಲ್ಲಿ ಕುವಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿಯಲ್ಲಿ ಎಸ್. ಬಂಗಾರಪ್ಪ ಅಧ್ಯಯನ ಪೀಠ, ದಾವಣಗೆರೆ ವಿವಿಯಲ್ಲಿ ಜೆ.ಹೆಚ್.ಪಟೇಲ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಅವರು ಪ್ರತಿಪಾದಿಸಿದ್ದ ಮೌಲ್ಯಗಳ ವಿಷಯದ ಕುರಿತು ಅಧ್ಯಯನ, ಸಂಶೋಧನೆಗೆ ನಡೆಸಬೇಕು.

1675234508972859 5

 ರೈತರು, ಫಾಲುನುಭವಿಗಳು ಕೃತಜ್ಞತೆ ಸಲ್ಲಿಸಲಿ 

ಜಿಲ್ಲೆಯ ಸಾವಿರಾರು ರೈತ ಕುಟುಂಬಗಳಿಗೆ ಗೌರವಯುತ ಬಾಳ್ವೆಯನ್ನು ಒದಗಿಸಿದ ಭೂ ಸುಧಾರಣೆ ಹೋರಾಟಕ್ಕೆ ಅಡಿಪಾಯ ಹಾಕಿದ್ದು ವಡ್ನಾಳ ಗಣಪತಿಯಪ್ಪ ಮತ್ತು ಗೋಪಾಲಗೌಡರು. ಮಾರ್ಚ್ 14ರಂದು ಶಾಂತವೇರಿ ಗೋಪಾಲಗೌಡ ಅವರ ನೂರನೆ ವರ್ಷದ ಹುಟ್ಟುಹಬ್ಬ. ರೈತರು, ಭೂ ಸುಧಾರಣೆ ಫಾಲನುಭವಿಗಳು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಿ ಕೃತಜ್ಞತೆ ಸಲ್ಲಿಸಬೇಕು.

1675234515951703 4

 ಹೃದಯ ತಟ್ಟಬೇಕು ಸಾಹಿತ್ಯ 

ಸಾಹಿತ್ಯ ಜನಪರ ಮತ್ತು ಸಮಾಜಮುಖಿ ಆಗಿರಬೇಕು. ಮಾನವೀಯ ಕಾಳಜಿ ಹೊಂದಿರಬೇಕು. ಜನರ ಬದುಕಿನ ಬಗ್ಗೆ ಆಸಕ್ತಿ, ಅನುಕಂಪ ತಾಳಿದ ಸಾಹಿತಿ ಉತ್ತಮ ಸಾಹಿತ್ಯ ಸೃಷ್ಟಿಸಬಲ್ಲ. ಅಲಂಕಾರಿಕವಾಗಿ ಆಕರ್ಷಕವಾಗಿ ಬರೆದರೂ ಅದರಲ್ಲಿ ಅನುಭವದ ತೀವ್ರತೆ ಇಲ್ಲದೆ ಇದ್ದರೆ ಅದು ಓದುಗನ ಹೃದಯ ತಟ್ಟುವ ಸಾಹಿತ್ಯವಾಗುವುದಿಲ್ಲ.

 ಪುರೋಹಿತ ಸಂಪ್ರದಾಯ 

ಭೂತ, ಯಕ್ಷಿಣಿ, ಪಂಜೂರ್ಲಿ, ಚೌಡಿಗಳೆಲ್ಲವುಗಳ ಪೂಜೆಗೆ ಅರ್ಚಕರ ಮಧ್ಯಸ್ಥಿಕೆ ಬಂದಿದೆ. ಊರಿಗೊಂದು ನಾಗದೇವತೆ ದೇವಸ್ಥಾನ ಸ್ಥಾಪನೆಯಾಗುತ್ತಿವೆ. ತಳ ಸಮುದಾಯಗಳು ಪೂಜಿಸುತ್ತಿದ್ದ ದೇವರುಗಳಿಗೆ ಶಕ್ತಿ ತುಂಬುವ ನೆಪದಲ್ಲಿ ಪುರೋಹಿತರು ಕೈ ಹಾಕಿದ್ದಾರೆ. ಈಗ ಅವೆಲ್ಲವು ಪುರೋಹಿತ ಸಂಪ್ರದಾಯದ ದೇವರುಗಳಾಗಿ ಪರಿವರ್ತನೆ ಆಗುತ್ತಿವೆ.

1675234523222482 3

 ಮಂತ್ರ ಮಾಂಗಲ್ಯ ಜನಪ್ರಿಯವಾಗಲಿ 

ಮದುವೆಗಳಲ್ಲಿ ದುಂದುವೆಚ್ಚ ತಪ್ಪಿಸಿ ಅರ್ಥಪೂರ್ಣವಾಗಿ ವೈವಾಹಿಕ ಬಾಂಧವ್ಯಕ್ಕೆ ಒಳಗಾಗಲು ಕುವೆಂಪು ಅವರು ಮಂತ್ರ ಮಾಂಗಲ್ಯ ಎಂಬ ವಿವಾಹ ಸಂಹಿತೆ ರೂಪಸಿದರು. ಅದನ್ನು ತಮ್ಮ ಮನೆಯಿಂದಲೆ ಅನುಷ್ಠಾನಕ್ಕೆ ತಂದು ಮಾದರಿಯಾದರು. ಮಲೆನಾಡಿನಲ್ಲಿ ಈ ಸುಧಾರಣೆ ಜನಪ್ರಿಯವಾಗಬೇಕಿತ್ತು. ಆದರೆ ಗ್ರಾಮೀಣ ಭಾಗದಲ್ಲಿಯು ಕಲ್ಯಾಣ ಮಂದಿರಗಳು ನಿರ್ಮಾಣಗೊಂಡು, ಅರ್ಚಕರ ಮಧ್ಯಸ್ಥಿಕೆಯಲ್ಲಿ ಅದ್ಧೂರಿಯಿಂದ ಮದುವೆಗಳು ನಡೆಯುತ್ತಿವೆ.

1675234529997622 2

 ಭೂ ಕುಸಿತದ ಅಪಾಯ 

ಮಲೆನಾಡಿನಲ್ಲಿ ಅಕಾಲಿಕ ಮಳೆ, ಹೆಚ್ಚು ಮಳೆ, ಗುಡ್ಡ ಕುಸಿತ ಉಂಟಾಗುತ್ತಿದೆ. ಅರಣ್ಯ ಅತಿಕ್ರಮವೆ ಇದಕ್ಕೆ ಕಾರಣ. ಜೋಶಿಮಠ ದುರಂತರದ ಮಾದರಿಯಲ್ಲಿ ಎರಡು ವರ್ಷದ ಹಿಂದೆ ಮಂಡಗದ್ದೆ ಸಮೀಪ ಸಿಂಗನಬಿದರೆಯಲ್ಲಿ ಗುಡ್ಡ ಕುಸಿದು ಅಡಕೆ ತೋಟಗಳು ನೆಲಸಮವಾಗಿದ್ದವು. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಕುಸಿತದ ಆಪಾಯದ ಬಗ್ಗೆ ಅಧ್ಯಯನ ವರದಿಗಳು ಎಚ್ಚರಿಸುತ್ತಿವೆ. ಪ್ರಕೃತಿಯೊಂದಿಗೆ ಸಹಬಾಳ್ವೆ ಅನಿವಾರ್ಯತೆ ಇದೆ.

1675234537230541 1

 ಎಲೆಚುಕ್ಕೆ ರೋಗ ನಿಯಂತ್ರಿಸಬೇಕಿದೆ 

ಅಡಕೆ, ತೆಂಗಿಗೆ ಬಂದಿರುವ ಹಳದಿ ರೋಗ, ಎಲೆಚುಕ್ಕೆ ರೋಗ ನಿಯಂತ್ರಿಸದಿದ್ದರೆ ಈ ಬೆಳೆಗಳ ಮೇಲೆ ಅವಲಂಬಿತವಾಗಿರುವ ರೈತರು ಕುಟುಂಬಗಳು ಸಂಕಷ್ಟಕ್ಕೀಡಾಗುತ್ತವೆ. ಮಲೆನಾಡಿನ ಮಣ್ಣು ಮತ್ತು ಹವಾಗುಣ ಅಡಕೆ ಬೆಳೆಗೆ ಪ್ರಶಸ್ತವಾಗಿದೆ. ಕೃಷಿ ಕೆಲಸಗಾರರ ಅಭಾವ, ಅಡಕೆ ಧಾರಣೆ ಹೆಚ್ಚಳದಿಂದ ಗದ್ದೆಗಳನ್ನು ಕೂಡ ಅಡಕೆ ತೋಟವಾಗಿ ಪರವರ್ತಿಸಲಾಗುತ್ತಿದೆ. ಒಂದು ವೇಳೆ ಅಡಕೆ ಧಾರಣೆಯಲ್ಲಿ ಏರುಪೇರಾದರೆ ಜಿಲ್ಲೆಯ ಆರ್ಥಿಕತೆ ತಲ್ಲಣಿಸುತ್ತದೆ.

1675234544585012 0

 ಅಡಕೆ ಕುರಿತು ಹೆಚ್ಚಿನ ಸಂಶೋಧನೆ 

ಅಡಕೆಯ ಔಷಧೀಯ ಗುಣಗಳು, ಪರ್ಯಾಯ ಬಳಕೆಯ ಗುಣಗಳ ಕುರಿತು ಸಂಶೋಧನೆ ನಡೆಸಬೇಕು. ಅಡಕೆ ಚಹ ಸಂಶೋಧನೆ ಮಾಡಿದ ನಿವೇದನ್ ನೆಂಪೆ ಉದ್ಯಮಕ್ಕೆ ಉತ್ತೇಜನ ಬೇಕು. ಅಡಕೆ ಚೊಗರು ನೈಸರ್ಗಿಕ ಬಳಕೆ ಮಾಡುವಲ್ಲಿ ಹೆಗ್ಗೋಡಿನ ಚರಕ ಸಂಸ್ಥೆ ಯಶಸ್ವಿಯಾಗಿದೆ. ಜವಳಿ ಉದ್ಯಮದಲ್ಲಿ ಚೊಗರು ಬಳಕೆ, ಅಡಕೆ ಚೊಗರನ್ನು ಪುಡಿ ರೂಪದಲ್ಲಿ ಸಂಗ್ರಹಿಸುವ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಿದೆ.

 ಮುಳುಗಡೆ ಸಂತ್ರಸ್ತರಿಗೆ ನ್ಯಾಯ 

ಹಿರೇಭಾಸ್ಕರ, ಲಿಂಗನಮಕ್ಕಿ, ತಲಕಳಲೆ ಜಲಾಶಯಗಳಿಂದ ಮುಳುಗಡೆಯಾದ ಸಂತ್ರಸ್ತರಿಗೆ ಈತನಕ ನೆಲೆ ಸಿಕ್ಕಿಲ್ಲ. ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಈ ಜನರಿಗೆ ನ್ಯಾಯ ಒದಗಿಸಲು ಸಾಧ್ಯ.

 ಹೊಸನಗರದ ಸ್ಥಿತಿ ಬದಲಾಗಬೇಕು 

ಹೊಸನಗರ ತಾಲೂಕು ವಿಧಾನಸಭೆ ಕ್ಷೇತ್ರದ ಮಾನ್ಯತೆ ಕಳೆದುಕೊಂಡಿದೆ. ಇದರಿಂದ ಹೊಸನಗರ ತಾಲೂಕು ಎಲ್ಲಾ ದೃಷಿಯಿಂದ ಅನಾಥ ಸ್ಥಿತಿಗೆ ತಳ್ಳಲ್ಪಟ್ಟಿದೆ. ಈ ಸ್ಥಿತಿ ಬದಲಾಗಬೇಕಿದೆ.

JANUARY-2023-REACH

 ಕೌಶಲ್ಯ ತರಬೇತಿ ಬೇಕಿದೆ 

ಮೊಬೈಲ್ ನಿಂದಾಗಿ ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಗುಣಮಟ್ಟದ ಶಿಕ್ಷಣ, ಕೌಶಲ್ಯದ ಅಭಿವೃದ್ಧಿಯ ತರಬೇತಿ ದೊರೆಯಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ದೊರೆಯುವ ಉದ್ಯೋಗಗಳ ಕುರಿತು ತರಬೇತಿ ನೀಡಬೇಕಿದೆ.

ಇದನ್ನೂ ಓದಿ – ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ, ಮೂವರು ತಹಶೀಲ್ದಾರ್ ಗಳು ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment