ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 07 ಅಕ್ಟೋಬರ್ 2019
ದಿನೆ ದಿನೆ ಶಿವಮೊಗ್ಗ ನಗರದ ವ್ಯಾಪ್ತಿ ಹಿಗ್ಗುತ್ತಿದೆ. ಸಣ್ಣದೊಂದು ಹಳ್ಳಿಯಾಗಿದ್ದದ್ದು ಈಗ ಸ್ಮಾರ್ಟ್ ಸಿಟಿಯಾಗಿದೆ. ಮಹಾನಗರ ಪಾಲಿಕೆಯಾಗಿದೆ. ಶಿವಮೊಗ್ಗ ಬೆಳೆದಂತೆ ಉದ್ಯಮಗಳು ಹೆಚ್ಚುತ್ತಿವೆ, ಜನರು ಹೆಚ್ಚು ಹೆಚ್ಚು BUSY ಆಗುತ್ತಿದ್ದಾರೆ. ಇದರ ನಡುವೆ ಎಲ್ಲವು ಫಟಾಫಟ್ ಆಗಬೇಕು ಎಂಬ ಭಾವನೆ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಆರಂಭವಾಗುತ್ತಿರುವುದೆ ‘ಫೋನ್ ಡೈರಿ’.
ಶಿವಮೊಗ್ಗಕ್ಕೆ ಇದು ಹೊಚ್ಚ ಹೊಸ ಕಾನ್ಸೆಪ್ಟ್
ಫೋನ್ ಡೈರಿ, ಶಿವಮೊಗ್ಗದ ಪಾಲಿಗೆ ವಿಭಿನ್ನ ಮತ್ತು ವಿಶೇಷ ಪ್ರಯೋಗ. ಬೆರಳ ತುದಿಯಲ್ಲೆ ಜನರಿಗೆ ಬೇಕಿರುವ ಸೌಲಭ್ಯಗಳನ್ನು ಒದಗಿಸುವ ವೇದಿಕೆ. ಒಂದೇ ಒಂದು ಫೋನ್ ಕರೆಯಿಂದ ಸಮಸ್ಯೆಗಳು ಥಟ್ ಅಂತಾ ಪರಿಹಾರವಾಗಲಿದೆ. ಮಹಾನಗರಗಳಲ್ಲಿ ಪ್ರಚಲಿತದಲ್ಲಿರುವ ಈ ಕಾನ್ಸೆಪ್ಟ್, ಶಿವಮೊಗ್ಗದಲ್ಲಿ ಇದೆ ಮೊದಲ ಬಾರಿಗೆ ಆರಂಭವಾಗುತ್ತಿದೆ.
ಫೋನ್ ಡೈರಿ ಯಾಕೆ ಬೇಕು?
ಮುಟ್ಟಿದರೆ ಕರೆಂಟ್ ಹೊಡೆಯುವ ಸ್ವಿಚ್. ಸೋರುತ್ತಿರುವ ನಲ್ಲಿ. ಟ್ಯಾಂಕ್ ಕ್ಲೀನಿಂಗ್. ಬಾಗಿಲು ರಿಪೇರಿ.. ಇವೆಲ್ಲ ಸಣ್ಣ ವಿಚಾರಗಳೆ. ಆದರೆ ದೊಡ್ಡ ಕಿರಿಕಿರಿ ಉಂಟು ಮಾಡುತ್ತವೆ. ಇವುಗಳ ರಿಪೇರಿ ಯಾರಿಂದ ಮಾಡಿಸಬೇಕು ಅನ್ನುವುದೆ ಹಲವರಿಗೆ ಗೊಂದಲವಾಗಿರುತ್ತದೆ. ಬೆರಳ ತುದಿಯಲ್ಲೆ ಇದನ್ನು ಬಗೆಹರಿಸಲಿದೆ ಫೋನ್ ಡೈರಿ.
ಕಾರ್ಯಕ್ರಮಕ್ಕೆ ಪುಟ್ಟದೊಂದು ಹಾಲ್ ಬೇಕು. ಪಾರ್ಟಿಗೆ ಶಿವಮೊಗ್ಗದಲ್ಲಿ ಜಾಗ ಎಲ್ಲಿದೆ? ಒಳ್ಳೆ ಹೊಟೇಲ್ ಯಾವುದು? ನಾಲಗೆ ಚಪ್ಪರಿಸುವಂತಾ ನಾನ್ ವೆಜ್ ಊಟ ಎಲ್ಲಿ ಸಿಗುತ್ತೆ? ಸಖತ್ ಕ್ರಿಸ್ಪಿ ಮಸಾಲೆ ದೋಸೆ ಎಲ್ಲಿ ಸಿಗುತ್ತೆ? ಒಳ್ಳೆ ಚಾಟ್ಸ್ ಎಲ್ಲಿದೆ? ಶಿವಮೊಗ್ಗದ ಯಾವ ಲಾಡ್ಜ್ ಚೀಪ್, ಬೆಸ್ಟ್ ಮತ್ತು ಸೇಫ್? ಇವಕ್ಕು ಪರಿಹಾರ ಕೊಡುತ್ತೆ ಫೋನ್ ಡೈರಿ.
ಇದಿಷ್ಟೇ ಅಲ್ಲ. ಫೋನ್ ಡೈರಿಯಲ್ಲಿ ಶಿವಮೊಗ್ಗದ ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸ್ ಸ್ಟೇಷನ್ನು, ಬಸ್ ನಿಲ್ದಾಣ, ಬಸ್ಸಿನ ಟೈಮಿಂಗ್ಸು, ರೈಲ್ವೆ ಸ್ಟೇಷನ್ ಕಾಂಟ್ಯಾಕ್ಟ್ ನಂಬರ್, ರೈಲ್ವೆ ಟೈಮಿಂಗ್ಸ್, ಆಟೋ, ಕಾರು, ಬಸ್ಸು, ಟೆಂಪೊ ಟ್ರಾವಲರ್, ಟ್ರಾವಲ್ಸ್’ಗಳ ಕಾಂಟ್ಯಾಕ್ಟ್. ಸೆಕೆಂಡ್ ಹ್ಯಾಂಡ್ ಸೇಲ್. ಮನೆ, ಮಳಿಗೆ, ರೂಂ ಬಾಡಿಗೆ. ಎಮರ್ಜನ್ಸಿಗೆ ಬೇಕಿರುವ ಕಾಂಟ್ಯಾಕ್ಟ್. ಆಸ್ಪತ್ರೆಗಳ ವಿವರ. ಬ್ಯೂಟಿ ಪಾರ್ಲರ್’ಗಳು, ಸಲೂನ್’ಗಳು. ಎಲ್ಲದರ ಕಂಪ್ಲೀಟ್ ಮಾಹಿತಿ ಸಿಗುತ್ತೆ.
ನಿಮಗೆ ಗೊತ್ತಾ? ಪಾಕೆಟ್ ಕ್ಯಾಲೆಂಡರ್ ಜೇಬಲ್ಲಿಟ್ಟುಕೊಂಡು ಓಡಾಡುವ ಕಾಲವಿತ್ತು. ಜಗತ್ತು ಬದಲಾದಂತೆ ಪಾಕೆಟ್ ಕ್ಯಾಲೆಂಡ್ ಮರೆಯಾಗಿದೆ. ಎಲ್ಲವು ಡಿಜಿಟಲೈಸ್ ಆಗಿದೆ. ಈಗ ಆರಂಭವಾಗುತ್ತಿರುವ ಫೋನ್ ಡೈರಿ, ಶಿವಮೊಗ್ಗದ ಮೊಟ್ಟ ಮೊದಲ 24 ಗಂಟೆಯ ಡಿಜಿಟಲ್ ಪಾಕೆಟ್ ಕ್ಯಾಲೆಂಡರ್.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200