ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 14 AUGUST 2024 : ಭಾರೀ ಕಾತುರ ಮೂಡಿಸಿದ ಶಿಮುಲ್ ಆಡಳಿತ ಮಂಡಳಿ ನಿರ್ದೇಶಕ ಚುನಾವಣೆ ಫಲಿತಾಂಶ (Result) ಹೊರಬಿದ್ದಿದ್ದು ಹಳೇ ಮುಖಗಳ ಜತೆ ಹೊಸಮುಖಗಳು ಸಹ ಈ ಬಾರಿ ಗೆಲುವು ಸಾಧಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರೆಲ್ಲ ಗೆದ್ದಿದ್ದಾರೆ?
ಶಿವಮೊಗ್ಗ ವಿಭಾಗದಿಂದ ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದು, ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ತಾಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಬಿ.ದಿನೇಶ್ ಬಹುಮತ ಪಡೆಯುವ ಮೂಲಕ ವಿಜಯಶಾಲಿಯಾಗಿದ್ದಾರೆ.
ಸಾಗರ ವಿಭಾಗದಿಂದ ವಿದ್ಯಾಧರ್ ಅವಿರೋಧ ಆಯ್ಕೆಯಾಗಿದ್ದು, ಅವರದ್ದೆ ಸಿಂಡಿಕೇಟ್ನಲ್ಲಿದ್ದ ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದ ಗೌಡ್ರು ಜಯಭೇರಿ ಭಾರಿಸಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗಕ್ಕೆ ಎರಡು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ
ದಾವಣಗೆರೆ ವಿಭಾಗದಿಂದ ಶಿಮುಲ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಚೇತನ್ ಎಸ್.ನಾಡಿಗೇರ್, ಬಿ.ಜಿ.ಬಸವರಾಜಪ್ಪ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ವಿಭಾಗದಿಂದ ಜಿ.ಪಿ.ರೇವಣಸಿದ್ದಪ್ಪ, ಶೇಖರಪ್ಪ.ಜಿ.ಬಿ, ಸಂಜೀವಮೂರ್ತಿ, ಬಿ.ಆರ್.ರವಿಕುಮಾರ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಎರಡು ದಿನ ಚರಕೋತ್ಸವ, ತಿನಿಸು, ಕೈಮಗ್ಗ ಉತ್ಪನ್ನ ಪ್ರದರ್ಶನ, ಮಾರಾಟ, ತರಬೇತಿ
ಶೇ.99.83ರಷ್ಟು ಮತದಾನ
ಶಿವಮೊಗ್ಗ ವಿಭಾಗದ 264 ಮತಗಳಲ್ಲಿ 264 ಮತಗಳು ಚಲಾವಣೆಯಾದರೆ, ಸಾಗರ ವಿಭಾಗದಲ್ಲಿ 256 ಮತಗಳಲ್ಲಿ 255 ಮತ, ದಾವಣಗೆರೆ ವಿಭಾಗದಲ್ಲಿ 362 ರಲ್ಲಿ 361 ಮತ ಮತ್ತು ಚಿತ್ರದುರ್ಗ ವಿಭಾಗದಲ್ಲಿ 289 ಮತಗಳಲ್ಲಿ 289 ಮತಗಳು ಚಲಾವಣೆಯಾಗಿದೆ. 1171 ಮತಗಳಲ್ಲಿ 1169 ಮತಗಳು ಚಲಾವಣೆಯಾಗಿದ್ದವು.