ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA, 14 AUGUST 2024 : ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ (Result) ಪ್ರಕಟವಾಗಿದೆ. ಬೆಳಗ್ಗೆ ಮತದಾನ ನಡೆದಿತ್ತು. ಸಂಜೆ ವೇಳೆಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಿಸಲಾಗಿದೆ. ಶಿವಮೊಗ್ಗ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ರಿಟರ್ನಿಂಗ್ ಆಫೀಸರ್ ಆಗಿದ್ದರು.
ಶಿವಮೊಗ್ಗ ವಿಭಾಗ
| ಅಭ್ಯರ್ಥಿ | ತಾಲೂಕು | ಪಡೆದ ಮತ |
| ಆನಂದ.ಡಿ | ಭದ್ರಾವತಿ | 131 |
| ಎಸ್.ಕುಮಾರ್ | ಭದ್ರಾವತಿ | 115 |
| ಜಗದೀಶ್ ತ್ಯಾಜ್ಯವಳ್ಳಿ | ಶಿವಮೊಗ್ಗ | 47 |
| ಕೆ.ಎಲ್.ಜಗದೀಶ್ವರ | ಶಿವಮೊಗ್ಗ | 105 |
| ದಿನೇಶ್. ಹೆಚ್.ಬಿ | ಶಿವಮೊಗ್ಗ | 115 |
ಶಿವಮೊಗ್ಗ ವಿಭಾಗದಲ್ಲಿ ಚಲಾವಣೆಯಾಗಿದ್ದು 264 ಮತಗಳು. ಈ ಪೈಕಿ ಎರಡು ಮತಗಳು ತಿರಸ್ಕೃತಗೊಂಡಿವೆ. ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್, ಶಿವಮೊಗ್ಗ ತಾಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಬಿ.ದಿನೇಶ್ ಬಹುಮತ ಪಡೆದಿದ್ದಾರೆ.
ಸಾಗರ ವಿಭಾಗ
| ಅಭ್ಯರ್ಥಿ | ತಾಲೂಕು | ಪಡೆದ ಮತ |
| ಗಂಗಾಧರಪ್ಪ | ಸೊರಬ | 109 |
| ದಯಾನಂದ ಗೌಡ್ರು | ಸೊರಬ | 124 |
| ಭೂಕಾಂತ್ | ಶಿಕಾರಿಪುರ | 111 |
| ಶಿವಶಂಕರಪ್ಪ | ಶಿಕಾರಿಪುರ | 162 |
ಸಾಗರ ವಿಭಾಗದಲ್ಲಿ ಚಲಾವಣೆಯಾಗಿದ್ದು 255 ಮತಗಳಿದ್ದವು. ವಿದ್ಯಾಧರ್ ಅವಿರೋಧ ಆಯ್ಕೆಯಾಗಿದ್ದಾರೆ. ಅವರದ್ದೆ ಸಿಂಡಿಕೇಟ್‌ನಲ್ಲಿದ್ದ ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದ ಗೌಡ್ರು ಜಯಭೇರಿ ಭಾರಿಸಿದ್ದಾರೆ.
ದಾವಣಗೆರೆ ವಿಭಾಗ
| ಅಭ್ಯರ್ಥಿ | ತಾಲೂಕು | ಪಡೆದ ಮತ |
| ಅನಿಲ್ ಕುಮಾರ್ | ಹೊನ್ನಾಳಿ | 133 |
| ಚೇತನ್ ಸೋಮಣ್ಣ | ದಾವಣಗೆರೆ | 211 |
| ಜಗದೀಶಪ್ಪ ಬಣಕಾರ್ | ಹರಿಹರ | 182 |
| ನಾಗರಾಜ್ ಕತ್ತಲಗೆರೆ | ಚನ್ನಗಿರಿ | 114 |
| ಪಾಲಾಕ್ಷಪ್ಪ | ದಾವಣಗೆರೆ | 143 |
| ಬಸಪ್ಪ | ಚನ್ನಗಿರಿ | 176 |
| ಬಸವರಾಜಪ್ಪ | ಹೊನ್ನಾಳಿ | 164 |
| ಹುನುಮನಹಳ್ಳಿ ಗೌಡ್ರು | ಹೊನ್ನಾಳಿ | 166 |
| ಶಾಂತವೀರಪ್ಪ | ಹರಿಹರ | 92 |
| ಸುರೇಶ್ | ನ್ಯಾಮತಿ | 38 |
ದಾವಣಗೆರೆ ವಿಭಾಗದಲ್ಲಿ 361 ಮತಗಳು ಚಲಾವಣೆಯಾಗಿದ್ದವು. 3 ಮತಗಳು ತಿರಸ್ಕೃತಗೊಂಡಿವೆ. ಶಿಮುಲ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಚೇತನ್ ಎಸ್.ನಾಡಿಗೇರ್, ಬಿ.ಜಿ.ಬಸವರಾಜಪ್ಪ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ವಿಭಾಗ
| ಅಭ್ಯರ್ಥಿ | ತಾಲೂಕು | ಪಡೆದ ಮತ |
| ಕಾಂತರಾಜ್ | ಹೊಸದುರ್ಗ | 57 |
| ತಿಪ್ಪೇಸ್ವಾಮಿ | ಚಿತ್ರದುರ್ಗ | 99 |
| ಯಶವಂತರಾಜು | ಹಿರಿಯೂರು | 79 |
| ರಾಮೇಶಪ್ಪ | ಹೊಸದುರ್ಗ | 56 |
| ರವಿಕುಮಾರ್ | ಹೊಸದುರ್ಗ | 163 |
| ರೇವಣಸಿದ್ದಪ್ಪ | ಚಿತ್ರದುರ್ಗ | 109 |
| ವೀರಭದ್ರಬಾಬು | ಚಳ್ಳಕೆರೆ | 106 |
| ಶಂಕರಲಿಂಗಪ್ಪ | ಹೊಸದುರ್ಗ | 42 |
| ಶಿವಣ್ಣ | ಹಿರಿಯೂರು | 100 |
| ಶಿವಾನಂದ | ಹೊಳಲ್ಕೆರೆ | 33 |
| ಶೇಖರಪ್ಪ | ಹೊಳಲ್ಕೆರೆ | 106 |
| ಸಂಜೀವಮೂರ್ತಿ | ಚಳ್ಳಕೆರೆ | 134 |
ಚಿತ್ರದುರ್ಗ ವಿಭಾಗದಲ್ಲಿ 289 ಮತಗಳು ಚಲಾವಣೆಯಾಗಿದೆ. 11 ಮತಗಳು ತಿರಸ್ಕೃತವಾಗಿವೆ. ಈ ವಿಭಾಗದ ಜಿ.ಪಿ.ರೇವಣಸಿದ್ದಪ್ಪ, ಶೇಖರಪ್ಪ.ಜಿ.ಬಿ, ಸಂಜೀವಮೂರ್ತಿ, ಬಿ.ಆರ್.ರವಿಕುಮಾರ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗ ಒಕ್ಕಲಿಗರ ಸಂಘದ ಚುನಾವಣೆ, ಫಲಿತಾಂಶ ಪ್ರಕಟ, ಯಾರೆಲ್ಲ ಗೆದ್ದಿದ್ದಾರೆ?
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






