SHIVAMOGGA LIVE NEWS | 5 SEPTEMBER 2023
ಶಿವಮೊಗ್ಗದಲ್ಲಿ ‘ನಿರಾಕರಣೆʼಗೆ ಉತ್ತಮ ಪ್ರತಿಕ್ರಿಯೆ
![]() |
SHIMOGA : ಹೊಂಗಿರಣ ಸಂಸ್ಥೆ ವತಿಯಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ‘ನಿರಾಕರಣೆʼ ಏಕವ್ಯಕ್ತಿ ರಂಗಪ್ರಯೋಗ ಆಯೋಜಿಸಲಾಗಿತ್ತು. ಲೇಖಕಿ ವೀಣಾ ಶಾಂತೇಶ್ವರಿ ಅವರ ಕಥೆ ಆಧರಿಸಿ ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿರುವ ನಾಟಕದಲ್ಲಿ ಶೃತಿ ಆದರ್ಶ ಅವರು ಅಭಿನಯಿಸಿದರು. ಏಕವ್ಯಕ್ತಿ ರಂಗ ಪ್ರಯೋಗಕ್ಕೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಇದನ್ನೂ ಓದಿ – ಅಡಕತ್ತರಿಯಲ್ಲಿ ಶಿವಮೊಗ್ಗದ ಸಾವಿರ ಆಟೋ ಚಾಲಕರು, ಸಾಲ ಕಟ್ಟಲಾಗುತ್ತಿಲ್ಲ, ಜೀವನ ನಿರ್ವಹಣೆ ಮಾಡಲಾಗುತ್ತಿಲ್ಲ
ಪಾಕಿಸ್ತಾನಕ್ಕೆ ಹೋಗಿ ಎಂದ ಶಿಕ್ಷಕಿ ಬೇರೆ ಶಾಲೆಗೆ ವರ್ಗಾವಣೆ
SHIMOGA : ‘ನೀವು ಪಾಕಿಸ್ತಾನಕ್ಕೆ ಹೋಗಿʼ ಎಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೈದಿದ್ದರು ಎಂಬ ಆರೋಪದ ಹಿನ್ನೆಲೆ ಶಿಕ್ಷಕಿಯನ್ನು ನಿಯೋಜನೆ ಮೇಲೆ ಬೇರೆ ಶಾಲೆಗೆ ವರ್ಗಾಯಿಸಲಾಗಿದೆ. ಉರ್ದು ಶಾಲೆಯೊಂದರ ಶಿಕ್ಷಕಿಯೊಬ್ಬರು ಆ.30ರಂದು ವಿದ್ಯಾರ್ಥಿಗಳಿಗೆ ಬೈದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಮಕ್ಕಳು ಪೋಷಕರ ಬಳಿ ಹೇಳಿದ್ದರು. ಈ ಹಿನ್ನೆಲೆ ಜೆಡಿಎಸ್ ಶಿವಮೊಗ್ಗ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಸರುಲ್ಲಾ ನೇತೃತ್ವದಲ್ಲಿ ಪೋಷಕರು ಶಾಲೆಗೆ ತೆರಳಿ ಮುಖ್ಯ ಶಿಕ್ಷಕರು ಮತ್ತು ಬಿಇಒ ಅವರಿಗೆ ದುರು ನೀಡಿದ್ದರು. ಈ ಹಿನ್ನೆಲೆ ಶಿಕ್ಷಕಿಯನ್ನು ನಿಯೋಜನೆ ಮೇಲೆ ಬೇರೆ ಶಾಲೆಗೆ ವರ್ಗಾಯಿಸಲಾಗಿದೆ. ಅಲ್ಲದೆ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ – 5 ತಿಂಗಳಿಂದ ಸಂಬಳವಿಲ್ಲ, 8 ತಿಂಗಳಿಂದ ಪ್ರಯಾಣ ಭತ್ಯೆ ಇಲ್ಲ, ಪ್ರತಿಭಟನೆಗೆ ಬಂದವರಿಗೆ ಸಿಕ್ತು ಮಹತ್ವದ ಭರವಸೆ
ಮಳೆಗಾಗಿ ಕುಂಸಿಯಲ್ಲಿ ವಿಶೇಷ ಪೂಜೆ
KUMSI : ಮಳೆಗಾಗಿ ಪ್ರಾರ್ಥಿಸಿ ಕುಂಸಿಯ ಗುರುಪಾದ ಮಟ್ಟಿಯ ಶ್ರೀ ಗುರುಪಾದೇಶ್ವರನಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಗಣ ಹೋಮ, ವಾಸ್ತು ಹೋಮ, ನವಗ್ರಹ ಹೋಮ, ಮರ್ಜನ ಹೋಮ ನಡೆಸಲಾಯಿತು. ಸೋಮವಾರ 108 ಕುಂಬಾಭಿಷೇಷಕ, ಶಿವ ಸಹಸ್ರನಾಮಾವಳಿ ನೆರವೇರಿಸಿದರು. ಮಹಾಪೂಜೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200