ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಗುಂಡಿಗಳ ಜೊತೆಗೆ ಈಗ ಜೆಲ್ಲಿ ಕಾಟ, ಕಾರು ಅಪಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲಿ ಗುಂಡಿಗಳ ಕಾಟದಿಂದ ಹೈರಾಣಾಗಿದ್ದ ವಾಹನ ಸವಾರರಿಗೆ ಈಗ ಜೆಲ್ಲಿ ಕಲ್ಲುಗಳಿಂದ (SMALL STONE) ಸಂಕಷ್ಟ ಶುರುವಾಗಿದೆ. ರಸ್ತೆ ತುಂಬೆಲ್ಲ ಜೆಲ್ಲೆ ಹರಡಿಕೊಂಡಿದ್ದು, ಚಾಲಕ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದಿದೆ.

Shimoga Nanjappa Hospital

ನಿದಿಗೆ ಕೆರೆ ಸಮೀಪ ತಿರುವಿನಲ್ಲಿ ಇವತ್ತು ಕಾರು ಪಲ್ಟಿ ಹೊಡೆದಿದೆ. ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ‘ಶಿವಮೊಗ್ಗ – ಭದ್ರಾವತಿ ಹೆದ್ದಾರಿ ಪರಿಸ್ಥಿತಿ 40 ಪರ್ಸೆಂಟ್ ಕಮಿಷನ್ ವ್ಯವಹಾರಕ್ಕೆ ಸಾಕ್ಷಿ’

ನಿದಿಗೆ ಕೆರೆ ಬಳಿ ತಿರುವಿನಲ್ಲಿ ಸಂಪೂರ್ಣ ಜೆಲ್ಲಿ ಕಲ್ಲು (SMALL STONE) ಹರಡಿಕೊಂಡಿದೆ. ವೇಗವಾಗಿ ಬಂದ ಕಾರು, ತಿರುವಿನಲ್ಲಿ ಜೆಲ್ಲಿಗಳಿಂದ ಸ್ಕಿಡ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.

ರಸ್ತೆ ತುಂಬೆಲ್ಲ ಜೆಲ್ಲಿ ಕಲ್ಲುಗಳು (SMALL STONE)

ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಗುಂಡಿಗಳ ಹಾವಳಿ ವಿರುದ್ಧ ಶಿವಮೊಗ್ಗ ಲೈವ್.ಕಾಂ ನಿರಂತರ ವರದಿ ಪ್ರಕಟಿಸಿತ್ತು. ಆ ಬಳಿಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ತರಾತುರಿಯಲ್ಲಿ ಕೆಲವು ಕಡೆ ಗುಂಡಿ ಮುಚ್ಚಿಸಿದ್ದಾರೆ. ಆದರೆ ಕೆಲವೆ ದಿನದಲ್ಲಿ ಗುಂಡಿಗಳು ಪುನಃ ಪ್ರತ್ಯಕ್ಷವಾಗಿವೆ. ಆದರೆ ಗುಂಡಿಗೆ ಹಾಕಲಾಗಿದ್ದ ಜೆಲ್ಲಿ ಮಿಶ್ರಿ ಡಾಂಬಾರಿ ಕಿತ್ತು ಬಂದಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ನಡುವೆ ಇರುವುದು ಹೈವೆ ರಸ್ತೆನೋ, ಯಮಲೋಕದ ದಾರಿನೋ?

ರಸ್ತೆಯ ತುಂಬೆಲ್ಲ ಜೆಲ್ಲಿ ಹರಡಿಕೊಂಡಿದೆ. ಗುಂಡಿಗಳಿಂದಾಗಿ ಹೈರಾಣಾಗಿದ್ದ ವಾಹನ ಸವಾರರಿಗೆ ಈಗ ಜೆಲ್ಲಿಯಿಂದ ಪೀಕಲಾಟ ಶುರುವಾಗಿದೆ. ವಾಹನ ಚಾಲನೆಯೆ ಕಷ್ಟವೆನಿಸಿದೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತು ಈ ರಸ್ತೆ ಅಕ್ಷರಶಃ ಯಮ ಲೋಕದ ಹಾದಿಯಂತಾಗಿದೆ.

RL JALAPPA ACADEMY

ಕ್ಲಿಕ್ ಮಾಡಿ ಇದನ್ನೂ ಓದಿ ಮಕ್ಕಳ ಕಳ್ಳನೆಂದು ಯುವಕನಿಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದರು, ವಿಚಾರಣೆ ವೇಳೆ ಅಸಲಿ ಸಂಗತಿ ಬಯಲು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment