ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SHIMOGA | ಸೂರ್ಯ ಗ್ರಹಣವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು. ಖಗೋಳ ವಿಜ್ಞಾನದ ಕುರಿತು ಮಕ್ಕಳಲ್ಲಿ ಕುತೂಹಲ ಮೂಡಿಸಬೇಕು ಎಂಬ ಉದ್ದೇಶದಿಂದ ಶಿವಮೊಗ್ಗದಲ್ಲಿ ಸೂರ್ಯ ಗ್ರಹಣ ವೀಕ್ಷಣಗೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಬಗೆಬಗೆಯ ತಿನಿಸುಗಳನ್ನು ಹಂಚಿ ಮೌಢ್ಯ ನಿರ್ಮೂಲನೆ ಮಾಡಲಾಯಿತು. (SOLAR ECLIPSE)
ನಗರದ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ ನ ಶಿವಮೊಗ್ಗ ಘಟಕ, ಭದ್ರಾವತಿಯ ಹವ್ಯಾಸಿ ಖಗೋಳ ವೀಕ್ಷಕರಾದ ಹರೋನಹಳ್ಳಿ ಸ್ವಾಮಿ, ಯೂಥ್ ಹಾಸ್ಟೆಲ್, ತರುಣೋದಯ ಘಟಕ, ರೋಟರಿ ಪೂರ್ವದವತಿಯಿಂದ ಸೂರ್ಯ ಗ್ರಹಣ ವೀಕ್ಷಣೆಯನ್ನು ಏರ್ಪಡಿಸಲಾಗಿತ್ತು. (SOLAR ECLIPSE)
(SOLAR ECLIPSE)
ಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್
ಹವ್ಯಾಸಿ ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ ಅವರು ತಮ್ಮ ಟೆಲಿಸ್ಕೋಪ್ ಮೂಲಕ ಸೂರ್ಯ ಗ್ರಹಣ ವೀಕ್ಷಣಗೆ ವ್ಯವಸ್ಥೆ ಮಾಡಿದ್ದರು. ನಗರದ ವಿವಿಧೆಡೆಯಿಂದ ಬಂದಿದ್ದ ಮಕ್ಕಳು, ಹಿರಿಯರು ಟೆಲಿಸ್ಕೋಪ್ ಮೂಲಕ ಗ್ರಹಣವನ್ನು ವೀಕ್ಷಿಸಿದರು. ಗ್ರಹಣ ವೀಕ್ಷಣೆಗೆ ಬಳಕೆ ಮಾಡುವ ಕನ್ನಡವನ್ನು ಉಪಯೋಗಿ ಗ್ರಹಣವನ್ನು ಕಣ್ತುಂಬಿಕೊಂಡು ಖುಷಿಪಟ್ಟರು.
(SOLAR ECLIPSE)
ಮೌಢ್ಯ ನಿರ್ಮೂಲನೆ ತಿಂಡಿ, ತಿನಿಸು
ಗ್ರಹಣ ಸಂದರ್ಭ ನೀರು, ಆಹಾರ ಸೇವಿಸಬಾರದು ಎಂಬ ಮೌಢ್ಯ ತೊರೆಯಬೇಕು ಎಂದು ಆಯೋಜಕರು ತಿಂಡಿ, ತಿನಿಸು ಹಂಚಿದರು. ಸೂರ್ಯ ಗ್ರಹಣ ವೀಕ್ಷಣೆಗೆ ಬಂದಿದ್ದವರಿಗೆ ಮಂಡಕ್ಕಿ, ಖಾರ, ಸಿಹಿ ತಿನಿಸು, ಹಣ್ಣು ಹಂಚಿದರು. ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು, ಉಳಿದವರು ಕೂಡ ಮೌಢ್ಯ ತೊರೆಯಬೇಕು ಎಂದು ಈ ವೇಳೆ ತಿಳಿಸಿದರು.
ಯಾರೆಲ್ಲ ಏನೇನು ಹೇಳಿದರು?
ಇದೆ ವೇಳೆ ಮಾತನಾಡಿದ ಹವ್ಯಾಸಿ ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ ಅವರು, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವಾಗ ಗ್ರಹಣ ಸಂಭವಿಸುತ್ತದೆ. ಟಿವಿಗಳಲ್ಲಿ ಗ್ರಹಣದ ಕುರಿತು ಆತಂಕ ಮೂಡಿಸಲಾಗುತ್ತಿದೆ. ಆದರೆ ಜನರು ಆತಂಕ ಪಡದೆ ಖಗೋಳದ ವಿಸ್ಮಯನ್ನು ನೋಡಬೇಕು. ಟೆಲಿಸ್ಕೋಪ್, ಗ್ರಹಣ ವೀಕ್ಷಣೆಗೆ ಇರುವ ವಿಶೇಷ ಕನ್ನಡಕಗಳನ್ನು ಉಪಯೋಗಿ ಗ್ರಹಣ ನೋಡಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ವಿಜಯ ಕುಮಾರ್ ಮಾತನಾಡಿ, ಸಾರ್ವಜನಿಕರಲ್ಲಿ ಗ್ರಹಣದ ಕುರಿತು ಜಾಗೃತಿ ಮೂಡಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ಖಾರ, ಮಂಡಕ್ಕಿ, ಸಿಹಿ, ಹಣ್ಣು ತಿಂದು ಮೂಢನಂಬಿಕೆಯನ್ನು ದೂರಗೊಳಿಸಲಾಗುತ್ತಿದೆ. ಮಕ್ಕಳಲ್ಲಿ ಖಗೋಳದ ಕೌತುಕದ ಕುರಿತು ತಿಳಿಸಲಾಗುತ್ತಿದೆ.
ಜೆ.ಎನ್.ಎನ್.ಸಿ ನಿವೃತ್ತ ಉಪ ಪ್ರಾಂಶುಪಾಲರಾದ ಶ್ರೀಪತಿ ಅವರು ಮಾತನಾಡಿ, ಗ್ರಹಣದ ಕುರಿತು ವೈಜ್ಞಾನಿಕ ಮತ್ತು ಧಾರ್ಮಿಕವಾಗಿ ಚರ್ಚೆ ನಡೆಯುತ್ತಿದೆ. ಅನಿಷ್ಠಕ್ಕೆಲ್ಲ ಗ್ರಹಣವೆ ಕಾರಣ ಎಂದು ಟಿವಿಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಆದರೆ ಗ್ರಹಣಕ್ಕು ಯಾವುದೆ ಘಟನೆಗು ಸಂಬಂಧವಿಲ್ಲ. ವೈಜ್ಞಾನಿಕವಾಗಿ ಗ್ರಹಣವನ್ನು ಗಮನಿಸಬೇಕು. ಬರಿ ಕಣ್ಣಿನಿಂದ ಗ್ರಹಣ ನೋಡಬಾರದು. ಇದರಿಂದ ಕಣ್ಣಿಗೆ ಹಾನಿ ಆಗಲಿದೆ ಎಂದರು.
ಕ್ಲಿಕ್ ಮಾಡಿ ಇದನ್ನೂ ಓದಿ | ವಾಟ್ಸಪ್ ಸೇವೆ ಸ್ಥಗಿತ, ಮೆಸೇಜ್ ಕಳುಹಿಸಲು ಸಾಧ್ಯವಾಗದೆ ಬಳಕೆದಾರರ ಪರದಾಟ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422