ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಡಿಸೆಂಬರ್ 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಇವತ್ತು ಸಂಜೆ ಆಕಾಶದಲ್ಲಿ ವಿಸ್ಮಯಕಾರಿ ಬೆಳಕು ಕಾಣಿಸಿಕೊಂಡಿದೆ. ನಕ್ಷತ್ರಗಳು ಸಾಲುಗಟ್ಟಿ ಪಯಣಿಸಿದಂತೆ ಗೋಚರಿಸಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಆಕಾಶದಲ್ಲಿ ಈ ಬೆಳಕು ಕಾಣಿಸಿಕೊಂಡಿದ್ದು, ಕುತೂಹಲ ಮತ್ತು ಆತಂಕ ಮೂಡಿಸಿದೆ.
ರಾತ್ರಿ 7.20ರ ಹೊತ್ತಿಗೆ ಆಕಾಶದಲ್ಲಿ ಈ ಬೆಳಕು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದವರು ಮೊಬೈಲ್ ಫೋನ್’ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.
ತೀರ್ಥಹಳ್ಳಿಯ ಬಹುಭಾಗ ಸೇರಿದಂತೆ ವಿವಿಧೆಡೆ ಈ ಸಾಲುಗಟ್ಟಿದ ಬೆಳಕು ಕಾಣಿಸಿಕೊಂಡಿದೆ. ಹತ್ತಾರು ನಕ್ಷತ್ರಗಳು ಸಾಲುಗಟ್ಟಿ ಹೋಗುತ್ತಿರುವಂತೆ ಗಮನಕ್ಕೆ ಬಂದಿದೆ. ಇದನ್ನು ಕಂಡು ಹಲವರು ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಲಿಂಕ್ ಇರಬಹುದೆ?
ಸ್ಪೇಸ್ ಎಕ್ಸ್ ಸಂಸ್ಥೆ ವತಿಯಿಂದ ಇಂಟರ್ ನೆಟ್ ಸೇವೆ ಒದಗಿಸುವ ಸ್ಯಾಟಿಲೈಟ್’ಗಳನ್ನು ಲಾಂಚ್ ಮಾಡಲಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಿನ್ನೆ 52 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ಈ ಉಪಗ್ರಹಗಳು ಸಾಲುಗಟ್ಟಿ ಭೂಮಿಯ ಕಕ್ಷೆಯಲ್ಲಿ ಪ್ರಯಾಣಿಸುತ್ತವೆ.
2014ರಲ್ಲಿ ಸ್ಪೇಸ್ ಎಕ್ಸ್ ಕಂಪನಿ ಸ್ಟಾರ್ ಲಿಂಕ್ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. 2018ರಲ್ಲಿ ಮತ್ತೊಂದು ಸುತ್ತಿನ ಉಪಗ್ರಹಗಳ ಉಡ್ಡಾಯನ ಮಾಡಲಾಗಿತ್ತು. ಈ ಉಪಗ್ರಹಗಳು ವಿವಿಧ ದೇಶಗಳ ಮೇಲೆ ಹೀಗೆ ಸಾಲುಗಟ್ಟಿ ಹಾದು ಹೋಗಿದ್ದವು. 2021ರಲ್ಲಿ ಮೂರನೆ ಹಂತದಲ್ಲಿ ಉಪಗ್ರಹಗಳ ಉಡಾವಣೆ ಮಾಡಲಾಗಿದೆ. ಈ ಸ್ಯಾಟಿಲೈಟ್’ಗಳು ಭಾರತದ ಮೇಲೆ ಹಾದು ಹೋಗಿರುವ ಸಾಧ್ಯತೆ ಇದೆ.
ಸ್ಟಾರ್ ಲಿಂಕ್ ವೆಬ್’ಸೈಟ್’ನಲ್ಲಿ ಮಾಹಿತಿ
ಸ್ಟಾರ್ ಲಿಂಕ್ ಉಪಗ್ರಹಗಳ ಚಲನೆ ಕುರಿತು ಮಾಹಿತಿ ಒದಗಿಸಲು ಪ್ರತ್ಯೇಕ ವೆಬ್ ಸೈಟ್ ಇದೆ. ಇದರ ಪ್ರಕಾರ ಸ್ಟಾರ್ ಲಿಂಕ್ ಉಪಗ್ರಹಗಳು ರಾತ್ರಿ 7.11ರ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯ ಮೇಲೆ ಹಾದು ಹೋಗಿವೆ. ಇದರ ಮಾಹಿತಿ ಇಲ್ಲಿದೆ.
ಉಪಗ್ರಹಗಳ ಚಲನೆ ಜನರಲ್ಲಿ ಆತಂಕ, ಕುತೂಹಲ ಮೂಡಿಸಿದೆ. ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ಜನರ ಸಂದೇಹಗಳಿಗೆ ಉತ್ತರ ನೀಡುವ ಅಗತ್ಯವಿದೆ.

LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






