ನಟ ಶಿವರಾಜ್‌ ಕುಮಾರ್‌ಗಾಗಿ ವಿಶೇಷ ಪೂಜೆ, ಈಡುಗಾಯಿ ಒಡೆದು ಪ್ರಾರ್ಥನೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS, 21 DECEMBER 2024

ಶಿವಮೊಗ್ಗ : ಅನಾರೋಗ್ಯ ಹಿನ್ನೆಲೆ ಚಿಕಿತ್ಸೆಗೆ ಅಮೆರಿಕಾಗೆ ತೆರಳಿರುವ ನಟ ಶಿವರಾಜ್‌ ಕುಮಾರ್‌ (Shivarajkumar) ಶೀಘ್ರ ಗುಣವಾಗಲಿ ಎಂದು ಪ್ರಾರ್ಥಿಸಿ ಶಿವಮೊಗ್ಗದಲ್ಲಿ ಪೂಜೆ ಸಲ್ಲಿಸಲಾಯಿತು. ಜ್ಯುವೆಲ್‌ ರಾಕ್‌ ಹೊಟೇಲ್‌ ರಸ್ತೆಯಲ್ಲಿರುವ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಟ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಮತ್ತು ಐಎನ್‌ಟಿಯುಸಿ ಸಂಘಟನೆ ವತಿಯಿಂದ ದೇವರಿಗೆ ಪೂಜೆ ಸಲ್ಲಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ಈಡುಗಾಯಿ ಒಡೆಯಲಾಯಿತು. ಇದೇ ವೇಳೆ ನಟ ಶಿವರಾಜ್‌ ಕುಮಾರ್‌ ಶೀಘ್ರ ಗುಣವಾಲಿ ಎಂದು ಘೋಷಣೆ ಕೂಗಿದರು. ಇಲ್ಲಿದೆ ಪೂಜೆಯ ವಿಡಿಯೋ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಶೂ ಒಳಗಿಂದ ಹೆಡೆ ಎತ್ತಿದ ನಾಗರಹಾವು

Leave a Comment