ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 25 DECEMBER 2024
ಶಿವಮೊಗ್ಗ : ಶ್ರೀಗಂಧ ಸಂಸ್ಥೆ ವತಿಯಿಂದ ನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಶ್ರೀರಾಮನ (SriRama) ಆದರ್ಶದ ಕುರಿತು ಮೂರು ದಿನ ವಿಶೇಷ ಪ್ರವಚನ ಮತ್ತು ಅನುಗ್ರಹ ಸಂದೇಶ ಕಾರ್ಯಕ್ರಮ ನಡೆಯಲಿದೆ. ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಂಧ ಸಂಸ್ಥೆಯ ಡಾ. ಮೈತ್ರೇಯಿ, ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಉತ್ತಮ ವಾಗ್ನಿಗಳು. ಅವರಿಂದ ಶ್ರೀರಾಮನ ಆದರ್ಶದ ಕುರಿತು ಪ್ರವಚನ ಕೇಳುವುದು ಸುಯೋಗ ಎಂದರು.
ಮೂರು ದಿನವು ಸಂಜೆ 6 ಗಂಟೆಯಿಂದ 6.30ರವರೆಗೆ ವಿದ್ವಾಂಸರುಗಳಾದ ನವರತ್ನ ಶ್ರೀನಿವಾಸ್ ಆಚಾರ್, ರಘೋತ್ತಮಾಚಾರ್ ಸಂಡೂರು, ರಾಯಚೂರು ಕೃಷ್ಣಾಚಾರ್ ಅವರು ಸನಾತನ ಧರ್ಮದ ಸಾರ ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ. ಸಂಜೆ 6.30 ರಿಂದ ರಾತ್ರಿ 8 ಗಂಟೆ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ.
ಡಾ. ಮೈತ್ರೇಯಿ, ಶ್ರೀಗಂಧ ಸಂಸ್ಥೆ
ಗೋ ಹತ್ಯೆ ಕಾಯ್ದೆ ಜಾರಿಯಲ್ಲಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಪ್ರಮುಖ ಕಾರಣಕರ್ತರು. ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಗೋ ಹತ್ಯೆ ಬಿಲ್ ಜಾರಿಗೊಳಿಸಲು ಅವಕಾಶವಾಯಿತು. ಅವರ ಅನುಗ್ರಹ ಸಂದೇಶ ಕೇಳುವುದು ಪುಣ್ಯ.
ಕೆ.ಎಸ್.ಈಶ್ವರಪ್ಪ, ಶ್ರೀಗಂಧ ಸಂಸ್ಥೆ ಅಧ್ಯಕ್ಷ
ಪತ್ರಿಕಾಗೋಷ್ಠಿಯಲ್ಲಿ ಶಬರೀಶ್ ಕಣ್ಣನ್, ಕುಬೇರಪ್ಪ, ಅರವಿಂದ್, ಬಾಲು, ತುಕಾರಾಮ್ ಇದ್ದರು.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಅಪ್‌ಡೇಟ್ ನೀಡಿದ ಸಂಸದ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422