ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಮೇ 2020
ಶಿವಮೊಗ್ಗದಲ್ಲಿ ಒಂದು ದಿನದ ಕರೋನ ಸಂಪೂರ್ಣ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗ ಸಿಟಿಯಲ್ಲಿ ಜನ ಸಂಚಾರ ಸಂಪೂರ್ಣ ತಗ್ಗಿದೆ. ಅಗತ್ಯ ವಸ್ತು ಖರೀದಿ ಹೊರತು ಬೇರೆ ಕಾರಣಕ್ಕೆ ಜನರು ಹೊರ ಬರುತ್ತಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬೆಳಗ್ಗೆ ಸ್ವಲ್ಪ ಹೊತ್ತು ಜನ ಸಂಚಾರ
ಜನ ಸಂಚಾರ ಈಗ ಸಂಪೂರ್ಣ ಕಡಿಮೆಯಾಗಿದೆ. ಆದರೆ ಬೆಳಗ್ಗೆ ಸ್ವಲ್ಪ ಹೊತ್ತು ಜನ ಸಂಚಾರವಿತ್ತು. ಅಗತ್ಯ ವಸ್ತುಗಳ ಖರೀದಿಗೆ ಜನರು ಮನೆಯಿಂದ ಹೊರ ಬಂದಿದ್ದರು. ಕೆಲವೇ ಹೊತ್ತಿನಲ್ಲಿ ಈ ಸಂಖ್ಯೆಯು ಕುಸಿತ ಕಂಡಿದೆ.
ಪ್ರಮುಖ ರಸ್ತೆ, ಸರ್ಕಲ್‍ನಲ್ಲಿ ಬ್ಯಾರಿಕೇಡ್
ವಾಹನ ಸಂಚಾರ ತಡೆಗೆ ಶಿವಮೊಗ್ಗ ನಗರದ ಪ್ರಮುಖ ರಸ್ತೆ, ಸರ್ಕಲ್‍ಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಹಾಗಾಗಿ ಮುಖ್ಯ ರೆಸ್ತೆಗಳಲ್ಲಿ ವಾಹನ ಸಂಚಾರವಿಲ್ಲ. ಗೋಪಿ ಸರ್ಕಲ್, ಅಮೀರ್ ಅಹಮದ್ ರಸ್ತೆ, ಸರ್.ಎಂ.ವಿ ರಸ್ತೆಯಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಲಾಗಿದೆ.
ಕೆಎಸ್‍ಆರ್‌ಟಿಸಿ ಬಸ್ ಸ್ಟಾಂಡ್ ಖಾಲಿ ಖಾಲಿ
ಒಂದು ದಿನದ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ, ಶಿವಮೊಗ್ಗದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಬಸ್ ಸಂಚಾರ ಸ್ಥಗಿತವಾಗಿರುವುದರಿಂದ ನಿಲ್ದಾಣದಲ್ಲಿ ಒಂದೂ ಬಸ್ ಇಲ್ಲ. ಹಾಗಾಗಿ ಪ್ರಯಾಣಿಕರು ಕಾಣಸಿಗುವುದಿಲ್ಲ.
ಮಟನ್, ಚಿಕನ್, ಮೀನು ಖರೀದಿ
ಮಟನ್, ಚಿಕನ್, ಮೀನು ಖರೀದಿಗೆ ಅವಕಾಶವಿತ್ತು. ಹಾಗಾಗಿ ಬೆಳಗ್ಗೆಯಿಂದ ನಗರದ ವಿವಿಧ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಕೆಲವು ಕಡೆ ಸಾಮಾಜಿಕ ಅಂತರ ಕಣ್ಮರೆಯಾಗಿದ್ದರೂ, ಖರೀದಿ ನಿರಂತರವಾಗಿತ್ತು.
ಸಿಟಿಯಲ್ಲಿ ಬಿಗಿ ಬಂದೋಬಸ್ತ್
ಜನ ಸಂಚಾರವನ್ನು ನಿಯಂತ್ರಿಸುವ ಸಲುವಾಗಿ ಶಿವಮೊಗ್ಗ ನಗರದಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಮುಖ ರಸ್ತೆ, ಸರ್ಕಲ್‍ಗಳಲ್ಲಿ ಪೊಲೀಸರು ಬಂದೋಬಸ್ತ್ ಮಾಡುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]