ಹುಣಸೋಡು ಸ್ಫೋಟ, 2 ವರ್ಷದ ಬಳಿ ದಾಖಲಾಯಿತು ಮತ್ತೊಂದು ಪ್ರಕರಣ, ಏನಿದು? ಕಾರಣವೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 3 FEBRUARY 2023

SHIMOGA : ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ಎರಡು ವರ್ಷದ ಬಳಿಕ ಮತ್ತೊಂದು ಪ್ರಕರಣ ದಾಖಲಾಗಿದೆ. ನಕಲಿ ಕಾಲ್ ಡಿಟೇಲ್ ರೆಕಾರ್ಡ್ (ಸಿಡಿಆರ್) ಒದಗಿಸಲಾಗಿದೆ ಎಂದು ಪೊಲೀಸರು ಸ್ವಯಂ ಪ್ರೇರಿತವಾಗಿ (suo moto) ದೂರು ದಾಖಲಿಸಿಕೊಂಡಿದ್ದಾರೆ.

220121 Hunasodu Blast Spot 1

ಏನಿದು ಪ್ರಕರಣ?

2021ರ ಜನವರಿ 21ರಂದು ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಭಾರಿ ಸ್ಪೋಟ ಸಂಭವಿಸಿತ್ತು. ಇದರಲ್ಲಿ 6 ಮಂದಿ ಸಾವನ್ನಪ್ಪಿದ್ದರು. ಘಟನೆ ಬಳಿಕ ಭದ್ರಾವತಿಯ ಪುನೀತ್ ಗೌಡ ಸುಳಿವಿಲ್ಲದಂತಾಗಿದೆ. ಆತ ಬದುಕಿದ್ದಾನೆ. ಹುಡುಕಿಕೊಡಿ ಎಂದು ಕುಟುಂಬದವರ ಒತ್ತಾಯವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಪೊಲೀಸ್ ಇಲಾಖೆ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಈ ವೇಳೆ ನಕಲಿ ಸಿಡಿಆರ್ ಒದಗಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ 3 ಗ್ರಾಮ ಪಂಚಾಯಿತಿಯ 4 ಸ್ಥಾನಕ್ಕೆ ಉಪ ಚುನಾವಣೆ, ದಿನಾಂಕ ನಿಗದಿ

ಎಫ್ಐಆರ್ ನಲ್ಲಿ ಏನಿದೆ?

ಭದ್ರಾವತಿಯ ಪುನೀತ್ ಗೌಡ ಮೊಬೈಲ್ ಸಿಡಿಆರ್ ಎಂದು ಪೊಲೀಸ್ ಇಲಾಖೆಗೆ ದಾಖಲೆ ಒದಗಿಸಲಾಗಿತ್ತು. ಡಿವೈಎಸ್ಪಿ ಅವರು ಇದರ ವಿಚಾರಣೆ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದರು. ಪುನೀತ್ ಗೌಡ ಮೊಬೈಲ್ ನಂಬರ್ ಸಿಡಿಆರ್ ಪ್ರತಿ ಪರಿಶೀಲನೆ ವೇಳೆ, ಮೇಲ್ನೋಟಕ್ಕೆ ಅದು ನಕಲಿ ಎಂಬುದು ಗೊತ್ತಾಗಿದೆ. ವಂಚಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಸ್ವಯಂ ಪ್ರೇರಿತವಾಗಿ (suo moto) ದೂರು ದಾಖಲಿಸಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JANUARY-2023-REACH

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment