ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 APRIL 2023
SHIMOGA : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಆರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಆದರೆ ಶಿವಮೊಗ್ಗ ನಗರ ಕ್ಷೇತ್ರದ ವಿಚಾರದಲ್ಲಿ ಹೈಕಮಾಂಡ್ ಸಸ್ಪೆನ್ಸ್ (suspense) ಉಳಿಸಿದೆ.
ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲವಿತ್ತು. ಆದರೆ ಈ ಸಸ್ಪೆನ್ಸ್ (suspense) ಅನ್ನು ಮುಂದಿನ ಪಟ್ಟಿವರೆಗೆ ಬಿಜೆಪಿ ಹೈಕಮಾಂಡ್ ಕಾಯ್ದಿರಿಸಿದೆ.
ಹಲವರ ಹೆಸರು ಗಿರಕಿ
ಪಟ್ಟಿ ಬಿಡುಗಡೆಗು ಮೊದಲು ಶಿವಮೊಗ್ಗ ನಗರಕ್ಕೆ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದರ ಕುರಿತು ಚರ್ಚೆಗಳಾಗಿದ್ದವು. ಸಾಮಾಜಿಕ ಜಾಲತಾಣದಲ್ಲಿ ಹಲವರ ಹೆಸರುಗಳು ಕಾಣಿಸಿಕೊಂಡಿದ್ದವು. ಕೆ.ಎಸ್.ಈಶ್ವರಪ್ಪ ಅವರ ಬದಲಿಗೆ ಅವರ ಪುತ್ರ ಕೆ.ಈ.ಕಾಂತೇಶ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಅವರ ಅಭಿಮಾನಿಗಳು ಕೂಡ ಇದೇ ಆಗ್ರಹ ಮಾಡಿದ್ದರು.
ಮತ್ತೊಂದೆಡೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರು ಘೋಷಣೆಯಾಲಿದೆ ಎಂದು ಕೇಳಿ ಬಂದಿತ್ತು. ಎಸ್.ಎಸ್.ಜ್ಯೋತಿ ಪ್ರಕಾಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ಅವರ ಹೆಸರು ಅಂತಿಮವಾಗಿದೆ ಎಂದೆಲ್ಲ ಹರಿದಾಡಿತ್ತು.
ಕಾಂಗ್ರೆಸ್‌ನಲ್ಲೂ ಸಸ್ಪೆನ್ಸ್
ಶಿವಮೊಗ್ಗ ನಗರದ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯು ಸಸ್ಪೆನ್ಸ್ ಮುಂದುವರೆದಿದೆ. ಹನ್ನೊಂದು ಮಂದಿ ಆಕಾಂಕ್ಷಿಗಳಿದ್ದಾರೆ. ಆದರೆ ಯಾರಿಗೆ ಟಿಕೆಟ್ ಫೈನಲ್ ಆಗಲಿದೆ ಎಂಬುದು ಇನ್ನೂ ಕುತೂಹಲವಾಗಿಯೇ ಇದೆ. ಈಗ ಬಿಜೆಪಿ ಕೂಡ ಸಸ್ಪೆನ್ಸ್ ಮುಂದುವರೆಸಿರುವುದು ರಾಜಕೀಯ ಲೆಕ್ಕಾಚಾರಗಳು ಮತ್ತಷ್ಟು ಬಿರುಸು ಪಡೆಯುವಂತೆ ಮಾಡಿದೆ.
ಇದನ್ನೂ ಓದಿ – ಬಿಜೆಪಿ ಪಟ್ಟಿ, ಶಿವಮೊಗ್ಗ ಜಿಲ್ಲೆಯ ಆರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ
ಸುದ್ದಿಗೋಷ್ಠಿ ಕರೆದ ಆಯನೂರು
ಈ ನಡುವೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಬುಧವಾರ ಸುದ್ದಿಗೋಷ್ಠಿ ಕರೆದಿದ್ದಾರೆ. ಮತ್ತೊಮ್ಮೆ ಆಯನೂರು ಮಂಜುನಾಥ್ ಅವರ ಸುದ್ದಿಗೋಷ್ಠಿ ಕುತೂಹಲ ಮತ್ತು ಅಂತೆ, ಕಂತೆಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422