SHIVAMOGGA LIVE NEWS, 25 DECEMBER 2024
ಶಿವಮೊಗ್ಗ : ಮೈಸೂರಿನ ಸುತ್ತೂರಿನಲ್ಲಿ ಜನವರಿ 26ರಿಂದ 31ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯ ಪ್ರಚಾರ ರಥ (Ratha) ಡಿಸೆಂಬರ್ 27ರಂದು ಶಿವಮೊಗ್ಗಕ್ಕೆ ನಗರಕ್ಕೆ ಆಗಮಿಸುತ್ತಿದೆ. ಮಲವಗೊಪ್ಪದ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ರಥವನ್ನು ಸ್ವಾಗತಿಸಲಾಗುತ್ತದೆ ಎಂದು ಸಮಿತಿಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
![]() |
ಜಾತ್ರೆಯಲ್ಲಿ ಪ್ರತಿ ದಿನ ಆರೇಳು ಲಕ್ಷ ಜನ ಸೇರುತ್ತಾರೆ. ಈ ಜಾತ್ರೆ ಮಹೋತ್ಸವದ ಹಿನ್ನೆಲೆ ಪ್ರಚಾರ ರಥ ನಗರಕ್ಕೆ ಆಗಮಿಸಲಿದೆ. ಮಂಗಳವಾದ್ಯಗಳ ಸಹಿತ ರಥವನ್ನು ಸ್ವಾಗತಿಸಲಾಗುತ್ತದೆ. ಮುರುಘ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಡಾ. ಬಸವಮರುಳ ಸಿದ್ಧ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಎರಡು ದಿನ ಶಿವಮೊಗ್ಗದಲ್ಲಿ ರಥ ಪ್ರಚಾರ ನಡೆಸಲಿದೆ.
ಹೊಳಲೂರು ನಿಂಗಪ್ಪ, ಸಮಿತಿ ಪ್ರಮುಖರು
2018ರಲ್ಲಿ ಶಿವಮೊಗ್ಗದಲ್ಲಿ ಸತ್ತೂರು ಶ್ರೀಗಳ ಉತ್ಸವ ನಡೆಸಿದ್ದೆವು. ಹಾಗಾಗಿ ಶಿವಮೊಗ್ಗದಲ್ಲಿಯು ಸುತ್ತೂರು ಮಠ ವಿದ್ಯಾ ಸಂಸ್ಥೆ ಆರಂಭಿಸಬೇಕು. ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸುತ್ತೂರು ಮಠದಲ್ಲಿ ಈಗಾಗಲೆ ಸಾವಿರಾರು ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ.
ಹೆಚ್.ಎಂ.ಚಂದ್ರಶೇಖರಪ್ಪ, ಮಾಜಿ ಶಾಸಕ
ಸುತ್ತೂರು ಅಂದರೆ ಆತಿಥ್ಯಕ್ಕೆ ಪ್ರಾಶಸ್ತ್ಯ ನೀಡಲಾಗುತ್ತದೆ. ಅದು ಎಲ್ಲ ಮಠಗಳಿಗು ಮಾದರಿ. ಶಿಕ್ಷಣ ಸಂಸ್ಥೆ ಆರಂಭಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ. ಇನ್ನು, ಜಾತ್ರೆ ಹಿನ್ನೆಲೆ ಪ್ರಚಾರದ ರಥ ಯಾತ್ರೆ ಆಗಮಿಸುತ್ತಿದೆ. ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ.
ಬೆನಕಪ್ಪ, ಬಸವ ಕೇಂದ್ರದ ಅಧ್ಯಕ್ಷ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200