ಶಿವಮೊಗ್ಗ ತಹಶೀಲ್ದಾರ್‌ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ಮೀಟಿಂಗ್‌, 4 ಪ್ರಮುಖ ವಿಚಾರಗಳ ಮಹತ್ವದ ಚರ್ಚೆ, ಏನೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

SHIVAMOGGA LIVE NEWS | 24 FEBRUARY 2024

SHIMOGA : ತಹಶೀಲ್ದಾರ್‌ ಕಚೇರಿಯಲ್ಲಿ ತಹಶೀಲ್ದಾರ್‌ ಗಿರೀಶ್‌ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ಸಭೆ ನಡೆಸಲಾಯಿತು. ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿಗಳಿಗೆ ತಹಶೀಲ್ದಾರ್‌ ಗಿರೀಶ್‌ ಅವರು ವಿವಿಧ ಸೂಚನೆ ನೀಡಿದರು. ನಾಲ್ಕು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.

ಪಲ್ಸ್‌ ಪೋಲಿಯೋ ಲಸಿಕೆ

POINT-1ಮಾರ್ಚ್ 3 ರಂದು ಶಿವಮೊಗ್ಗ ತಾಲ್ಲೂಕಿನ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು. ಒಟ್ಟು 37,829 ಮಕ್ಕಳಿದ್ದಾರೆ. ಗ್ರಾಮಾಂತರದಲ್ಲಿ 17,611 ಮಕ್ಕಳಿದ್ದಾರೆ. 106 ಬೂತ್‍ಗಳಲ್ಲಿ ಹಾಗೂ ನಗರ ಭಾಗದಲ್ಲಿ 20,218 ಮಕ್ಕಳಿದ್ದು 116 ಬೂತ್‍ಗಳಲ್ಲಿ ಪಲ್ಸ್ ಪೊಲೀಯೋ ಹನಿ ಹಾಕಲಾಗುವುದು ಎಂದು ತಹಶೀಲ್ದಾರ ಗಿರೀಶ್‌ ತಿಳಿಸಿದರು.

ರಸ್ತೆ ಕೆಲಸ, ಕಲ್ಲು ಕ್ವಾರೆ, ಕುರಿ ಕಾಯುವವರು, ಇಟ್ಟಿಗೆ ಗೂಡು, ವಲಸೆ ಬಂದವರು ಹೀಗೆ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು. ಈ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ಅರಿವು ಮೂಡಿಸಲು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಸದ ವಾಹನಗಳಲ್ಲಿ, ಧ್ವನಿ ವರ್ಧಕಗಳ ಮುಖಾಂತರ ಜನರಲ್ಲಿ ಅರಿವು ಮಾಡಿಸುವಂತೆ ತಿಳಿಸಿದರು.

ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮ

POINT-2ಫೆ.27 ರಂದು 1 ವರ್ಷದಿಂದ 19 ವರ್ಷದೊಳಗಿನ ಅಂಗನವಾಡಿ, ಶಾಲಾ-ಕಾಲೇಜು, ಹಾಗೂ ಶಾಲೆ ಬಿಟ್ಟ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವುದು. ಜಂತುಹುಳು ನಿವಾರಕ ಮಾತ್ರೆ (ಆಲ್ಬೆಂಡಜಾಲ್) ನೀಡುವುದರಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಬಹುದಾಗಿದೆ. ಜೊತೆಗೆ ವೈಯಕ್ತಿಕ ಸ್ವಚ್ಚತೆ, ಕೈ ತೊಳೆಯುವ ವಿಧಾನಗಳ ಬಗ್ಗೆ ಅಂಗನವಾಡಿ, ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ನೀಡುವಂತೆ ಎಲ್ಲಾ ಆರೋಗ್ಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಆಲ್ಬೆಂಡಜಾಲ್ ಮಾತ್ರೆ ವಿತರಣೆ ಮಾಡುವ ಸಮಯದಲ್ಲಿ ಅಂಗನವಾಡಿ ಶಾಲಾ, ಕಾಲೇಜು ಸಿಬ್ಬಂದಿಗಳು ನಿಗಾವಹಿಸಿ ತಮ್ಮ ಎದುರೇ ಮಾತ್ರೆ ನೀಡಬೇಕು ತಹಶೀಲ್ದಾರ್‌ ಗಿರೀಶ್‌ ಎಂದರು.

ತಂಬಾಕು ನಿಯಂತ್ರಣ ಕಾರ್ಯಕ್ರಮ

POINT-3ತಾಲ್ಲೂಕಿನ ಶಾಲಾ ಕಾಲೇಜುಗಳ ಸುತ್ತಮುತ್ತ ನೂರು ಗಜ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಅವರು ಸೂಚನೆ ನೀಡಿದರು.

ಕೋಟ್ಪಾ ಕಾಯ್ದೆಯ ಮಾರ್ಗಸೂಚಿಗಳನ್ನು ಪಾಲಿಸದೇ ಇರುವ ಅಂಗಡಿ ಮಾಲೀಕರಿಗೆ 100 ರೂ. ನಿಂದ 1000 ರೂ.ವರೆಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಶಾಲಾ, ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಯಂತ್ರಣದ ಬಗ್ಗೆ ಅರಿವು ಮೂಡಿಸುವಂತೆ ತಹಶೀಲ್ದಾರ್‌ ಗಿರೀಶ್‌ ತಿಳಿಸಿದರು.

ತಾಲೂಕಿನಲ್ಲಿ ಕೆಎಫ್‌ಡಿ ಮುಂಜಾಗ್ರತೆ

POINT-4ಕೆಎಫ್‍ಡಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತಾಲ್ಲೂಕಿನಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಆಶಾ ಕಾರ್ಯಕರ್ತೆಯರ ಕುಂದುಕೊರತೆ ಬಗ್ಗೆ ಆಲಿಸಿದರು.

29 ತಂಬಾಕು ದಾಳಿ, 405 ಕೇಸ್‌

ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಜಿ.ಬಿ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 29 ತಂಬಾಕು ದಾಳಿ ನಡೆಸಿ 405 ಪ್ರಕರಣಗಳಲ್ಲಿ 35,600 ರೂ.ಗಳನ್ನು ದಂಡ ವಸೂಲಿ ಮಾಡಲಾಗಿದೆ. ತಂಬಾಕು ವ್ಯಸನ ಬಿಡುವವರು ಮೆಗ್ಗಾನ್ ಆಸ್ಪತ್ರೆಯ ರೂಂ ನಂ.19 ರಲ್ಲಿರುವ ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದರು.

ಸಭೆಯಲ್ಲಿ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

ಇದನ್ನೂ ಓದಿ – ಇನ್ಮುಂದೆ ಶಿವಮೊಗ್ಗದ ಜನರಿಗು ತಟ್ಟಲಿದೆ ಟೋಲ್‌ ಬಿಸಿ, 2 ಕಡೆ ಟೋಲ್‌ ಪ್ಲಾಜಾ ರೆಡಿ, ಎಲ್ಲೆಲ್ಲಿದೆ? ಪರಿಣಾಮಗಳೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 24, 2024

ಇವತ್ತು ದೀನಬಂಧು ಟ್ರಸ್ಟ್‌ 25ನೇ ವರ್ಷದ ಬೆಳ್ಳಿ ಹಬ್ಬ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸ್ತಾರೆ?

ಇವತ್ತು ದೀನಬಂಧು ಟ್ರಸ್ಟ್‌ 25ನೇ ವರ್ಷದ ಬೆಳ್ಳಿ ಹಬ್ಬ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸ್ತಾರೆ?

ಭದ್ರಾವತಿಯ ಗೌಡರಹಳ್ಳಿ ಬಳಿ ಅಪಘಾತ, ಟ್ರಾಕ್ಟರ್‌ ಚಾಲಕನ ವಿರುದ್ಧ ಪ್ರಕರಣ, ಆಗಿದ್ದೇನು?

ಭದ್ರಾವತಿಯ ಗೌಡರಹಳ್ಳಿ ಬಳಿ ಅಪಘಾತ, ಟ್ರಾಕ್ಟರ್‌ ಚಾಲಕನ ವಿರುದ್ಧ ಪ್ರಕರಣ, ಆಗಿದ್ದೇನು?

ಸೊರಬಕ್ಕೆ ನೂತನ ಜಲವಾಹನ, ಪೊಲೀಸ್‌ ಜೀಪ್‌ಗಳು

ಸೊರಬಕ್ಕೆ ನೂತನ ಜಲವಾಹನ, ಪೊಲೀಸ್‌ ಜೀಪ್‌ಗಳು

‘ಔಷಧವಿಲ್ಲದೆ ರೋಗ ಗುಣ’, ಶಿವಮೊಗ್ಗ ಆದಿಚುಂಚನಗಿರಿ ಮಠದ ಸ್ವಾಮೀಜಿ ಸಲಹೆ, ಹೇಗದು?

‘ಔಷಧವಿಲ್ಲದೆ ರೋಗ ಗುಣ’, ಶಿವಮೊಗ್ಗ ಆದಿಚುಂಚನಗಿರಿ ಮಠದ ಸ್ವಾಮೀಜಿ ಸಲಹೆ, ಹೇಗದು?

ವೀರಶೈವ ತಂಡಕ್ಕೆ ‍ಶ್ರೀಕಾಂತಣ್ಣ ಕ್ರಿಕೆಟ್ ಕಪ್‌, ರನ್ನರ್‌ ಅಪ್‌ ಯಾರು?

ವೀರಶೈವ ತಂಡಕ್ಕೆ ‍ಶ್ರೀಕಾಂತಣ್ಣ ಕ್ರಿಕೆಟ್ ಕಪ್‌, ರನ್ನರ್‌ ಅಪ್‌ ಯಾರು?

ಲಾರಿಯ ಚಕ್ರದಡಿ ಸಿಲುಕಿ ದಂಪತಿ ಸಾವು, ಹೇಗಾಯ್ತು ಘಟನೆ?

ಲಾರಿಯ ಚಕ್ರದಡಿ ಸಿಲುಕಿ ದಂಪತಿ ಸಾವು, ಹೇಗಾಯ್ತು ಘಟನೆ?

ಸ್ಕೀಮ್‌ ಹೆಸರಲ್ಲಿ ಸಾವಿರಾರು ಜನರಿಗೆ ವಂಚನೆ ಆರೋಪ, ಉಡುಪಿಯ ವ್ಯಕ್ತಿ ಅರೆಸ್ಟ್‌

ಸ್ಕೀಮ್‌ ಹೆಸರಲ್ಲಿ ಸಾವಿರಾರು ಜನರಿಗೆ ವಂಚನೆ ಆರೋಪ, ಉಡುಪಿಯ ವ್ಯಕ್ತಿ ಅರೆಸ್ಟ್‌

ಆಯನೂರಿನಲ್ಲಿ ಬೈಕ್‌ ಕಳ್ಳತನ, ಹೇಗಾಯ್ತು ಘಟನೆ?

ಆಯನೂರಿನಲ್ಲಿ ಬೈಕ್‌ ಕಳ್ಳತನ, ಹೇಗಾಯ್ತು ಘಟನೆ?

ಹೊಂಬುಜದಲ್ಲಿ ಮಹಾವೀರ ಜಯಂತಿ, ಶ್ರೀಗಳ ಸಂದೇಶವೇನು?

ಹೊಂಬುಜದಲ್ಲಿ ಮಹಾವೀರ ಜಯಂತಿ, ಶ್ರೀಗಳ ಸಂದೇಶವೇನು?

ಶಿಕಾರಿಪುರ, ಸೊರಬ, ಸಾಗರದ ಕೆರೆಗಳ ಮೀನುಗಾರಿಕೆ ಟೆಂಡರ್‌, ನಿಯಮ ಉಲ್ಲಂಘನೆಗೆ ಆಕ್ರೋಶ

ಶಿಕಾರಿಪುರ, ಸೊರಬ, ಸಾಗರದ ಕೆರೆಗಳ ಮೀನುಗಾರಿಕೆ ಟೆಂಡರ್‌, ನಿಯಮ ಉಲ್ಲಂಘನೆಗೆ ಆಕ್ರೋಶ

Leave a Comment