SHIVAMOGGA LIVE NEWS | 17 OCTOBER 2023
SHIMOGA : ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು (python) ಉರಗ ರಕ್ಷಕರೊಬ್ಬರು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಕಾಚಿನಕಟ್ಟೆ ಗ್ರಾಮದ ಜಮೀನು ಒಂದರಲ್ಲಿ ಹೆಬ್ಬಾವು ಕಾಣಿಸಿತ್ತು.
ಉರಗ ರಕ್ಷಕ ಅರುಣ್ ಕಾಚಿನಕಟ್ಟೆ, ಸಹಾಯಕ ಸುನಿಲ್ ಅವರು ಹೆಬ್ಬಾವನ್ನು (python) ಸೆರೆ ಹಿಡಿದಿದ್ದಾರೆ. ಉಂಬ್ಳೆಬೈಲು ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಕರೀಮ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವು ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವನಪಾಲಕ ರಾಜಶೇಖರ್, ಅರಣ್ಯ ವೀಕ್ಷಕ ಲಕ್ಷ್ಮಣ, ಚಾಲಕ ಸುದರ್ಶನ್ ಭಾಗವಹಿಸಿದ್ದರು.
ಇದನ್ನೂ ಓದಿ- ರಾತ್ರಿ ಮನೆ ಪಕ್ಕದ ಖಾಲಿ ಸೈಟಿನಲ್ಲಿತ್ತು ಬೈಕ್, ಬೆಳಿಗ್ಗೆ ಮಾಲೀಕನಿಗೆ ಶಾಕ್





